ಸೇಫ್ ಸಿಟಿ ಯೋಜನೆ ಅಡಿ 7000 ಸಿಸಿ ಕ್ಯಾಮರಾಗಳ ಅಳವಡಿಕೆ: ಸಿಎಂ ಬಸವರಾಜ ಬೊಮ್ಮಾಯಿ

ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು  ಜಾರಿಗೆ ತಂದಿದ್ದೇವೆ. ಹೊಲದಲ್ಲಿ ದುಡಿಯುವ ಮಹಿಳೆಯ ಅನುಕೂಲಕ್ಕಾಗಿ  ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ 4000 ಅಂಗನವಾಡಿಗಳನ್ನು ಪ್ರಾರಂಭಿಸಲಾಗಿದೆ. ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

Written by - Prashobh Devanahalli | Edited by - Bhavishya Shetty | Last Updated : Mar 8, 2023, 06:16 PM IST
    • ಮಹಿಳೆಯರ ಸುರಕ್ಷತೆಗಾಗಿ ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ
    • ಸ್ತ್ರೀ ಸಬಲೀಕರಣ, ಸ್ವಾವಲಂಬನೆಯ ಬದುಕು, ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧ
    • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ಸೇಫ್ ಸಿಟಿ ಯೋಜನೆ ಅಡಿ 7000 ಸಿಸಿ ಕ್ಯಾಮರಾಗಳ ಅಳವಡಿಕೆ: ಸಿಎಂ ಬಸವರಾಜ ಬೊಮ್ಮಾಯಿ title=
CM Basavaraja Bommai

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ತ್ರೀ ಸಬಲೀಕರಣ, ಸ್ವಾವಲಂಬನೆಯ ಬದುಕು, ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು  ಜಾರಿಗೆ ತಂದಿದ್ದೇವೆ. ಹೊಲದಲ್ಲಿ ದುಡಿಯುವ ಮಹಿಳೆಯ ಅನುಕೂಲಕ್ಕಾಗಿ  ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ 4000 ಅಂಗನವಾಡಿಗಳನ್ನು ಪ್ರಾರಂಭಿಸಲಾಗಿದೆ. ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Mrunal Thakur: ಸಾಂಪ್ರದಾಯಿಕ ಉಡುಗೆಯಲ್ಲಿ ಸೀತೆಯಂತೆ ಕಂಗೊಳಿಸಿದ ರಾಜಕುಮಾರಿ ನೂರ್ ಜಹಾನ್!

ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂ. : ಕಳೆದ ವರ್ಷ ರೈತ ವಿದ್ಯಾನಿಧಿ,ಈ ವರ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದೇವೆ. ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಪಿಯುಸಿ ಯಿಂದ ಡಿಗ್ರಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸ್ತ್ರೀಶಕ್ತಿ ಸಂಘಗಳಿಗೆ 1800 ಕೋಟಿ ರೂ.ಗಳಷ್ಟು  ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗಿದೆ. ಮಹಿಳೆಗೆ ಸಮಾಜದಲ್ಲಿ ಸಾಕಷ್ಟು ಸವಾಲುಗಳಿವೆ ಅದನ್ನು ಎದುರಿಸಿದಾಗ ಸಾಧನೆ ಮಾಡಲು ಸಾಧ್ಯ ಎಂದರು.

ಲಿಂಗಬೇಧ ಹೋಗಲಾಡಿಸಬೇಕು:

ಮನುಷ್ಯನ ಜೀವನದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಸಂಬಂಧಗಳಿಂದ ಸಾಧನೆಯವರೆಗೆ ಅಪಾರ ಪ್ರಾಮುಖ್ಯತೆ ಇಡೀ ಜಗತ್ತಿನಲ್ಲಿದೆ. ಅದಕ್ಕಾಗಿಯೇ ವಿಶ್ವ ಮಹಿಳಾ ದಿನಾಚರಣೆ ಆಚರಿಸಲ್ಪಡುತ್ತಿದೆ.  ಮಹಿಳೆ‌ ಇಲ್ಲದೆ ಯಾವ ದಿನವೂ ನಡೆಯುವುದಿಲ್ಲ. ಜನ್ಮ ಪೂರ್ವದ ಸಂಬಂಧ ತಾಯಿ‌ ಸಂಬಂಧ, ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಸರ್ವಸರ್ವವನ್ನೂ ಹಂಚಿ ಭೂಮಿಗೆ ಬರಲು ಅವಕಾಶ ಮಾಡಿಕೊಡುವವಳು ತಾಯಿ. ಇದನ್ನು ಅರ್ಥ ಮಾಡಿಕೊಂಡರೆ  ನಮ್ಮ ತಾಯಂದಿರನ್ನು ಹೇಗೆ ಗೌರವಿಸಬೇಕೆಂದು ತಿಳಿಯುತ್ತದೆ. ಇದರ ಅರಿವು ಬಹುತೇಕ ಜನರಿಗಿಲ್ಲ. ಮನುಕುಲ ಮುಂದುವರೆದಿರುವುದು ಮಹಿಳೆಯರಿಂದ. ಮಾನವನ ಅಭಿವೃದ್ಧಿಯ ಕೇಂದ್ರ ಮಹಿಳೆ. ಆಕೆಯನ್ನು ಬಿಟ್ಟು ಮಾನವನ ಅಭಿವೃದ್ಧಿಯಾಗಲಿ, ಮಾನವಕುಲ ಬೆಳೆಯವುದು ಸಾಧ್ಯವಿಲ್ಲ. ಇದು ಆಡಳಿತ ಮಾಡುವವರಿಗೆ ತಿಳಿಯದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ, 12  ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ, ಲಿಂಗ ಸಮಾನತೆಗಾಗಿ  ಬಹಳ ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಇಂದಿಗೂ ಬಸವಣ್ಣನವರು ಪ್ರಸ್ತುತ ಎನ್ನುತ್ತೇವೆ. ಅಂದರೆ ಅವರು ಯಾವುದಕ್ಕೆ ಹೋರಾಟ ಮಾಡಿದ್ದರೋ ಅವೆಲ್ಲವೂ ಈಗಲೂ ಇವೆ ಎಂದು ಅರ್ಥ. ಸಾಮಾಜಿಕ  ನ್ಯಾಯ, ಲಿಂಗಬೇಧ ಮೂಢನಂಬಿಕೆಗಳೂ ಪ್ರಸ್ತುತ ಇವೆ ಎಂದರ್ಥ. ಲಿಂಗಬೇಧ ಎಂದು ಹೋಗಲಾಡುತ್ತದೆಯೋ ಅಂದು ಈ ಸಾಮಜ,  ದೇಶ,  ನಾಡು ಅತ್ಯುತ್ತಮವಾಗಿರುತ್ತದೆ ಎಂದರು.

ಇದನ್ನೂ ಓದಿ: MS Dhoni: ಎಂಎಸ್ ಧೋನಿ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಈ 4 ಜನರನ್ನು ಮಾತ್ರ… ಅವರು ಯಾರಂದ್ರೆ..!

ಅವಕಾಶಗಳು ಅಗತ್ಯ :

ಅವಕಾಶಗಳು ನೀಡಿದಾಗ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು  ದೊಡ್ಡ ಸಾಧನೆ ಮಾಡಿದ್ದಾರೆ. ಏರೋಸ್ಪೇಸ್ನಲ್ಲಿಯೂ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾದ ಕೆಲಸಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News