ಧಾರವಾಡ : ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ, ಮಾತನಾಡಿದರು.
ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವ, ಡಿಸಿ: ಸಚಿವ ಸಂತೋಷ ಲಾಡ್ ಅವರು ಇಂದು ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸವಿಸಿದರು.
ಕ್ಯಾಂಟೀನ್‍ದಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು.
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ.
ಹುಬ್ಬಳ್ಳಿ (ಪ್ಯಾಕೇಜ್ 1): ಪ್ಯಾಕೇಜ್ 1 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್.ಕೃಷ್ಣ ನಗರ, ನ್ಯೂ ಇಂಗ್ಲೀಷ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಪ್ರತಿ ಕ್ಯಾಂಟೀನ್‍ದಲ್ಲಿ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.
ಒಟ್ಟಾರೆ ಒಂದು ವರ್ಷಕ್ಕೆ ಬೆಳಗಿನ ಉಪಹಾರ-912500, ಮಧ್ಯಾಹ್ನದ ಊಟ-912500, ರಾತ್ರಿ ಊಟ-912500, ಒಟ್ಟು 2737500 ಜನರಿಗೆ ಆಹಾರ ಪೂರೈಸಲಾಗುತ್ತಿದೆ.
ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ.
ಧಾರವಾಡ (ಪ್ಯಾಕೇಜ್ 2: ಪ್ಯಾಕೇಜ್ 2 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.
ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. ಅಂದಾಜು ದರ ಪಟ್ಟಿಯ ಪ್ರಕಾರ ಉಪಹಾರಕ್ಕೆ ನೀಡುವ ರೂ 12.4, ಮಧ್ಯಾಹ್ನ ಊಟ ರೂ 24.8, ರಾತ್ರಿ ಊಟ ರೂ. 24.8 ಒಟ್ಟು ರೂ.62 ಆಗುತ್ತದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ನಲ್ಲಿ ವಾರದ ಏಳು ದಿನಗಳಲ್ಲಿ ಬೆಳಗಿನ ಉಪಹಾರವು ಬೆಳಿಗ್ಗೆ 7.30 ರಿಂದ 10 ಗಂಟೆಯವರಿಗೆ, ಮಧ್ಯಾಹ್ನ ಊಟ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಹಾಗೂ ರಾತ್ರಿ ಊಟ ಸಂಜೆ 6 ರಿಂದ 8 ರವರೆಗೆ ಆಹಾರದ ಒದಗಿಸಲಾಗುತ್ತದೆ.
ಭಾನುವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಪುದೀನಾ ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಕೇಸರಿ ಬಾತ್, ಖಾರಾ ಬಾತ್ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್),
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆ ಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆ ಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)
ಸೋಮವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಮಂಡಕ್ಕಿ (120 ಗ್ರಾಮ್ಸ್).
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ(100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್),
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)
ಮಂಗಳವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಖಾರಾ ಬಾತ್ (225ಗ್ರಾಮ್ಸ್) ಚಟ್ನಿ (100)
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್)
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)
ಬುಧವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಕರಿಬೇವು ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಅವಲಕ್ಕಿ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬೀನ್ಸ್ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ (100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್),
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)
ಗುರುವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ವೆಜ್ ಪಲಾವ್ (225ಗ್ರಾಮ್ಸ್) ರೈತಾ (100)
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)
ಶುಕ್ರವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬಾರ್ (100 ಗ್ರಾಮ್ಸ್), ಐಟಂ 2 ರಲ್ಲಿ ಚಿತ್ರನ್ನಾ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್),
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)
ಶನಿವಾರ:
ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಆಲೂಬಾತ್ (225ಗ್ರಾಮ್ಸ್) ಚಟ್ನಿ (100)
ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)
ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ನುಗ್ಗೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100)
ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.