"ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ ತಗೊಂಡು ಕೂತಿದ್ದಾರೆ”

ಆ ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ,ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ  ತಗೊಂಡು ಕೂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಾರಿದ್ದಾರೆ.

Written by - Zee Kannada News Desk | Last Updated : Nov 9, 2022, 07:31 PM IST
  • ಹಿಂದುತ್ವದ ವ್ಯಾಖ್ಯಾನಗಳೇನಿದೆ ಅದು ಸರಿ ಇಲ್ಲ.ನಮ್ಮ ದೇಶ ಹಿಂದೂ ರಾಷ್ಟ್ರ ಅದರಲ್ಲಿ ಯಾವುದೇ ಅನುಮಾನ ಇಲ್ಲ.
  • ಇದೆ ವೇಳೆ ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
  • ಅದರಲ್ಲೂ ಆ ಪಕ್ಷದ ಪ್ರೈಮ್ ಲೀಡರ್ ಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರೆ ಎಂದು ಹೇಳಿದರು.
"ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ ತಗೊಂಡು ಕೂತಿದ್ದಾರೆ” title=
screengrab

ಮಂಡ್ಯ: ಆ ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ,ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ  ತಗೊಂಡು ಕೂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಾರಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಅವರು ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿದ ಅವರು “ಆ ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ,ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ  ತಗೊಂಡು ಕೂತಿದ್ದಾರೆ.ಎಲ್ಲವೂ ಸರಿ ಇದ್ದ ಜಾಗದಲ್ಲಿ ವಿನಾ ಕಾರಣ ಗಲಾಟೆ ಮಾಡಿಕೊಳ್ಳೋ ವಾತವರಣ ಕ್ರಿಯೇಟ್ ಆಗ್ತಿದೆ.ಜನ ಶಾಂತಿಯಿಂದ ಬದುಕಬೇಕೆಂಬ ಉದ್ದೇಶ ಸರ್ಕಾರಕ್ಕೆ  ಕಾಣ್ತಿಲ್ಲ” ಎಂದು ದೂರಿದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನ ಇನ್ನು ರಾಣಿ ಚೆನ್ನಮ್ಮ ಮೈದಾನ

ಇನ್ನು ಮುಂದುವರೆದು ಮಾತನಾಡಿದ ಅವರು ಹಿಂದುತ್ವದ ವ್ಯಾಖ್ಯಾನಗಳೇನಿದೆ ಅದು ಸರಿ ಇಲ್ಲ.ನಮ್ಮ ದೇಶ ಹಿಂದೂ ರಾಷ್ಟ್ರ ಅದರಲ್ಲಿ ಯಾವುದೇ ಅನುಮಾನ ಇಲ್ಲ.ಅದರಲ್ಲಿ ಅವರ ವ್ಯಾಖ್ಯಾನವನ್ನ ಹೇಳುವಾಗ ಪಾಲಿಷ್ಡ್ ಆಗಿ ಮಾತನಾಡಬೇಕಾಗುತ್ತೆ.ಸಮಾಜವನ್ನ ಒಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಮುಖಂಡರೇ ಹೇಳಕೆ‌ಬರದೆ ಅಥವಾ ಹೇಳೋ ರೀತಿ ಹೇಳದೆ ಬಹಳ ಗೊಂದಲ ಸೃಷ್ಟಿಸಲಾಗುತ್ತಿದೆ.ಇದಕ್ಕೆ ಯಾವುದೇ ರಾಜಕಾರಣಿಗಳು ಸಹಕರಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೆ ವೇಳೆ ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ..ಅದರಲ್ಲೂ ಆ ಪಕ್ಷದ ಪ್ರೈಮ್ ಲೀಡರ್ ಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗ್ತಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News