ಶಕ್ತಿ ಯೋಜನೆ ಪರಿಣಾಮ: ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ, ಹಲವೆಡೆ ಪ್ರತಿಭಟನೆ

ಕಳೆದ 3 ದಿನಗಳಿಂದ ರೋಸಿಹೋದ ಹನೂರಿನ ವಿದ್ಯಾರ್ಥಿಗಳು ಇಂದು  ಹೆಚ್ಚುವರಿ ಬಸ್ ಗಳನ್ನು ಬಿಡುವಂತೆ ಆಗ್ರಹಿಸಿ ಹನೂರಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

Written by - Yashaswini V | Last Updated : Jun 16, 2023, 12:51 PM IST
  • ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಬುಧವಾರ, ಗುರುವಾರ ಎರಡೂ ದಿನಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.
  • ಶಕ್ತಿ ಯೋಜನೆ ಬಳಿಕ ಊರಿನಲ್ಲಿ ಬಸ್ ಗಳೇ ನಿಲ್ಲಿಸುತ್ತಿಲ್ಲ.
  • ಹಂಗಳ ಗ್ರಾಮಕ್ಕೆ ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಶಕ್ತಿ ಯೋಜನೆ ಪರಿಣಾಮ: ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ, ಹಲವೆಡೆ ಪ್ರತಿಭಟನೆ title=

ಚಾಮರಾಜನಗರ: ಶಕ್ತಿ ಯೋಜನೆ ಪರಿಣಾಮ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದು ಹಲವು ಗ್ರಾಮಗಳಲ್ಲಿ ಬಸ್ಸುಗಳೇ ನಿಲ್ಲಸಿದಂತಾಗದ ಪರಿಸ್ಥಿತಿ ಎದುರಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಮಹಿಳೆಯರು ನಿತ್ಯ ಶಕ್ತಿ ಯೋಜನೆಯ ಲಾಭ ಪಡೆಯುತ್ತಿದ್ದರೆ, ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದಾರೆ.  ಮೊದಲೇ ಬಸ್ ರಶ್ ಇರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹತ್ತುವ ಕಡೆ ಬಸ್ ನಿಲ್ಲಿಸದ ಪರಿಸ್ಥಿತಿ ಎದುರಾಗಿದೆ.

ಕಳೆದ 3 ದಿನಗಳಿಂದ ರೋಸಿಹೋದ ಹನೂರಿನ ವಿದ್ಯಾರ್ಥಿಗಳು ಇಂದು  ಹೆಚ್ಚುವರಿ ಬಸ್ ಗಳನ್ನು ಬಿಡುವಂತೆ ಆಗ್ರಹಿಸಿ ಹನೂರಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ- ಕಾಮಗಾರಿ ನಡೆಸದೆ 118 ಕೋಟಿ ರೂ. ಗುಳುಂ: ಎಂಟು ಬಿಬಿಎಂಪಿ ಅಧಿಕಾರಿಗಳು ಸಸ್ಪೆಂಡ್

ಹನೂರು ಪಟ್ಟಣದ ಕೆ‌ಎಸ್‌ಆರ್‌ಟಿ‌ಸಿ ಬಸ್ ನಿಲ್ದಾಣದಲ್ಲಿ ಎಲ್ಲಾ ಕೆಎಸ್ಆರ್ ಟಿಸಿ  ಬಸ್ ಗಳನ್ನು ತಡೆದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ನಮಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಈ ಬಗ್ಗೆ  ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲೇಜಿನಲ್ಲಿ 10 ನಿಮಿಷ ತಡವಾಗಿ ಹೋದರು  ಸಹ ನಮ್ಮನ್ನು ಕಾಲೇಜಿಗೆ ಸೇರಿಸಿಕೊಳ್ಳುವುದಿಲ್ಲ, ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಮುಂದಿನ ದಿನಗಳಲ್ಲಿ ಸೂಕ್ತ ಸಾರಿಗೆ ಕಲ್ಪಿಸುವುದಾಗಿ ಹನೂರಿನ ಡಿಪೋ ಮ್ಯಾನೇಜರ್  ಭರವಸೆ ಕೊಟ್ಟಿದ್ದಾರೆ.

ಹಂಗಳದಲ್ಲೂ ಆಗಿತ್ತು ಪ್ರತಿಭಟನೆ: 
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಬುಧವಾರ, ಗುರುವಾರ ಎರಡೂ ದಿನಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಶಕ್ತಿ ಯೋಜನೆ ಬಳಿಕ ಊರಿನಲ್ಲಿ ಬಸ್ ಗಳೇ ನಿಲ್ಲಿಸುತ್ತಿಲ್ಲ, ಹಂಗಳ ಗ್ರಾಮಕ್ಕೆ ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ- Gruha Jyoti ಯೋಜನೆ ಬಗ್ಗೆ ನಿಮಗೂ ಈ ಗೊಂದಲಗಳಿವೆಯೇ? ಇಲ್ಲಿದೆ ಬೆಸ್ಕಾಂ ಸ್ಪಷ್ಟನೆ

ಒಟ್ಟಿನಲ್ಲಿ ಸಾರಿಗೆ ಬಸ್ ತುಂಬಿ ತುಳುಕುವುದರಿಂದ ಹಲವು ಗ್ರಾಮಗಳಲ್ಲಿ ಬಸ್ ಗಳನ್ನು ನಿಲ್ಲಿಸುತ್ತಲೇ ಇಲ್ಲ ಎನ್ನಲಾಗಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 3-4 ನಿಲುಗಡೆ ಕೊಡುತ್ತಿದ್ದ ಬಸ್ ಗಳು ಬೆಳಗಿನ ಅವಧಿಯಲ್ಲಿ ಎಲ್ಲೂ ನಿಲ್ಲಿಸುತ್ತಿಲ್ಲ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News