"ಬೆಂಗಳೂರಿಗೆ 2-3 ದಿನಗಳಲ್ಲಿ ಐದು ಸಂಚಾರಿ ಪೊಲೀಸ್ ಠಾಣೆ ಮಂಜೂರು"

ಬೆಂಗಳೂರಿಗೆ 2-3 ದಿನಗಳಲ್ಲಿ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Written by - Prashobh Devanahalli | Edited by - Manjunath Naragund | Last Updated : Dec 8, 2022, 11:09 PM IST
  • ಹೊಸ ಸಂಚಾರ ವ್ಯವಸ್ಥೆ ಪ್ರಾರಂಭವಾಗಿದೆ.
  • ಸಂಚಾರ ಸಮಸ್ಯೆ ಗಳನ್ನು ಬಗೆಹರಿಸಲು ವಿಶೇಷ ವಾಗಿರುವ ರಚನೆ ಹಾಗೂ ಯೋಜನೆ ಎರಡೂ ಅಗತ್ಯವಿತ್ತು.
  • ಹಲವಾರು ಪ್ರಯೋಗಗಳಾದ ನಂತರ ಕೆಲವು ನಿರ್ಧಾರ ಕೈಗೊಳ್ಳಲಾಗಿದೆ.
"ಬೆಂಗಳೂರಿಗೆ 2-3 ದಿನಗಳಲ್ಲಿ ಐದು ಸಂಚಾರಿ ಪೊಲೀಸ್ ಠಾಣೆ ಮಂಜೂರು" title=

ಬೆಂಗಳೂರು, ಡಿಸೆಂಬರ್ 08: ಬೆಂಗಳೂರಿಗೆ 2-3 ದಿನಗಳಲ್ಲಿ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು  ಸಹಾಯಕ ಪೊಲೀಸ್ ಆಯುಕ್ತರ ಕಛೇರಿ  ಶೇಷಾದ್ರಿಪುರಂ ಕಾನೂನು-ಸುವ್ಯವಸ್ಥೆ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ, ಹೈಗ್ರೌಂಡ್ ಇದರ ಕಟ್ಟಡದ ಕಾಮಗಾರಿಯ  ಶಂಕುಸ್ಥಾಪನೆ ಯನ್ನು   ನೆರವೇರಿಸಿದ  ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 

ಇದನ್ನೂ ಓದಿ : Chanakya Niti : ಸಂತೋಷದ ಕುಟುಂಬಕ್ಕಾಗಿ ಚಾಣಕ್ಯನ ಈ 4 ನೀತಿಗಳನ್ನು ಅನುಸರಿಸಿ!

ರಸ್ತೆ ಅಭಿವೃದ್ಧಿಯ ಜೊತೆಗೆ ಸಂಚಾರ ನಿರ್ವಹಣೆ

ಸಂಚಾರದಲ್ಲಿ ಇರುವ ಅಂತರವಿದ್ದ ಕಡೆಗಳಲ್ಲಿ (ಡಾರ್ಕ್ ಏರಿಯಾ) 5 ಸಂಚಾರ ಠಾಣೆಗಳು ಬರಲಿವೆ. ಇಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್  ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಯಾವುದೇ ವಾಹನ ಚಾಲಕರಿಗೆ ನಿಲ್ಲಿಸದೇ, ತೊಂದರೆ ಆಲ್ಲದೇ, ಭ್ರಷ್ಟಾಚಾರ ವಾದರೆ, ನಿಯಮ ಉಲ್ಲಂಘನೆ ಯಾದರೆ ಗುರುತಿಸುತ್ತದೆ. ಶುಲ್ಕವನ್ನು ಕೂಡ ಹಾಕುತ್ತದೆ. ಸಿಗ್ನಲ್ ಗಳ ಸಿಂಕ್ರೋನೈಜಿಂಗ್ ಕೂಡ ಮಾಡಲಾಗುತ್ತಿದೆ. ಮಿನರ್ವಾ ವೃತ್ತದಿಂದ ಟೌನ್ ಹಾಲ್ ವರೆಗೆ ಸಿಗ್ನಲ್ ಸಿಂಕ್ರೋನೈಜ್ ಮಾಡಲಾಗಿದೆ. ಹಲವಾರು ಕಡೆ ಸಿಂಕ್ರೋನೈಜಿಂಗ್ ಪ್ರಾರಂಭವಾಗಿದೆ. ಇಂದು ಸಂಚಾರ ಸಭೆ ಕರೆದು 12 ಹೈ ಡೆನ್ಸಿಟಿ ಕಾರಿಡಾರ್ ಗಳಿಗೆ ಅಡೆತಡೆಯಿಲ್ಲದ ಸಂಚಾರ ಹಾಗೂ ಸಿಂಕ್ರೋನೈಜೇಶನ್ ಆಗಬೇಕೆಂದು ಸೂಚಿಸಲಾಗಿದೆ. 5-6 ಜಂಕ್ಷನ್ ಗಳನ್ನು ಸುಗಮಗೊಳಿಸಲು ಸೂಚಿಸಿದ್ದೇನೆ. ಗೋರಗುಂಟೆಪಾಳ್ಯ, ಸಿಲ್ಕ್ ಬೋರ್ಡ್ ಜಂಕ್ಷನ್,  ಕೆ.ಆರ್. ಪುರಂ ಮುಂತಾದೆಡೆಗಳಲ್ಲಿ ಸಂಚಾರ ಸುಗಮವಾಗಲಿದೆ. ಬರುವ ದಿನಗಳಲ್ಲಿ ರಸ್ತೆ ಅಭಿವೃದ್ಧಿಯ ಜೊತೆಗೆ ಸಂಚಾರ ನಿರ್ವಹಣೆ ಕೂಡ ಉತ್ತಮ ರೀತಿಯಲ್ಲಿ ಆಗಬೇಕೆಂದು ಕೆಲಸ ಮಾಡುತ್ತಿದ್ದೇವೆ ಎಂದರು. 

ಬಹಳ ದಿನಗಳಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸ್ಥಳ ನೆನೆಗುದಿಗೆ ಬಿದ್ದಿತ್ತು. ಸ್ಥಳಾಂತರಗೊಂಡ ಮೇಲೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿತ್ತು.ಸ್ಥಳದ ದಾಖಲೆಗಳು ದೊರಕಿದ ಮೇಲೆ ಬಹಳ ದಿನಗಳ ಆಸೆ ನೆರವೇರಿದೆ. ಸುವ್ಯವಸ್ಥಿತ ಪೊಲೀಸ್ ಠಾಣೆ, ಎಸಿಪಿ ಕಚೇರಿ ಮತ್ತು ಸಂಚಾರ ಕಟ್ಟಡ ನಿರ್ಮಾಣವಾಗಲಿದೆ. ಪೂರ್ವ ಭಾಗದಲ್ಲಿ ಒಳ್ಳೆಯ ಡಿಸಿಪಿ ಕಚೇರಿ ಆಗಿದೆ. ಇದರಿಂದ ಪೊಲೀಸ್ ಆಡಳಿತ ಸುಲಭ, ದಕ್ಷ ವಾಗಲಿದೆ. ಜನರಿಗೆ ಸೇವೆ ದೊರೆತು, ನ್ಯಾಯ ಸಿಗಬೇಕಾದವರಿಗೆ ನ್ಯಾಯ ದೊರಕಲಿದೆ. 

ಇದನ್ನೂ ಓದಿ : Vastu Shastra : ಈ ಉಪ್ಪು ನಿಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತದೆ, ಹಣದ ಭರ್ಜರಿ ಲಾಭ!

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ:

ಹೊಸ ಸಂಚಾರ ವ್ಯವಸ್ಥೆ ಪ್ರಾರಂಭವಾಗಿದೆ. ಸಂಚಾರ ಸಮಸ್ಯೆ ಗಳನ್ನು ಬಗೆಹರಿಸಲು ವಿಶೇಷ ವಾಗಿರುವ ರಚನೆ ಹಾಗೂ ಯೋಜನೆ ಎರಡೂ ಅಗತ್ಯವಿತ್ತು. ಹಲವಾರು ಪ್ರಯೋಗಗಳಾದ ನಂತರ ಕೆಲವು ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಸಂಚಾರಕ್ಕೆ ವಿಶೇಷ ಆಯುಕ್ತರ ಹುದ್ದೆ ಸೃಜಿಸಿ, ಅವರಿಗ್ಸ್ ಸಿಬ್ಬಂದಿ ನೀಡಲಾಗಿದೆ.ಸಂಚಾರ ವ್ಯವಸ್ಥೆಯಲ್ಲಿ ಪರಿಣಿತರಾಗಿರುವ, ಪಿ.ಹೆಚ್. ಡಿ.ಮಾಡಿರುವ ಎಸ್.ಎ. ಸಲೀಂ ಅವರನ್ನು ನೇಮಿಸಲಾಗಿದೆ. ಕೆಲವೇ ದಿನಗಳಲ್ಲಿ ಬಹಳ ದೊಡ್ಡ ಬದಲಾವಣೆ ತಂದಿದ್ದಾರೆ.  ಮೇಲ್ಮಟ್ಟದಲ್ಲಿ ಮಾತ್ರವಲ್ಲದೆ ಕೆಳ ಮಟ್ಟದಿಂದ ಬಳಪಡಿಸಲಾಗುತ್ತಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ: ಕೆ.ಸುಧಾಕರ್, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಶಾಸಕರಾದ ರಿಜ್ವಾನ್ ಅರ್ಷದ್,  ಟಿ. ಎ. ಶರವಣ, ಡಿಜಿಪಿ ಪ್ರವೀಣ್ ಸೂದ್ , ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News