ಬೆಂಗಳೂರು: ನಾನು ಟೀಕೆಗಳನ್ನೇ ಗೌರವದ ಪದಕವೆಂದು ಸ್ವೀಕರಿಸುತ್ತೇನೆ ಹೊರತು ಅವಮಾನಗಳೆಂದಲ್ಲ ಎಂದು ಸಿದ್ದರಾಮಯ್ಯ ತಮ್ಮ ವಿರುದ್ದ ಬರುತ್ತಿರುವ ಟೀಕೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡ ರವರು ಜೆಡಿಎಸ್ ಸಮಾವೇಶದಲ್ಲಿ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯನವರು ಒಬ್ಬ ನೀಚ ಮತ್ತು ಸರ್ವಾಧಿಕಾರಿ ರಾಜಕಾರಣಿ ಎಂದು ಕಿಡಿಕಾರಿದ್ದರು.
When you fight for the rights of the Dalits, the Backward Classes & the Minorities, powerful people will be upset and call you names.
When you refuse to play the second fiddle they will abuse you.
I take these names as Medals of Honour & not as insults. https://t.co/aJLUXhjRdk
— Siddaramaiah (@siddaramaiah) 11 February 2018
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಯಾರ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿರುವ ಅವರು "ಯಾರು ದಲಿತರ ಹಕ್ಕುಗಳ ಬಗ್ಗೆ,ಹಿಂದುಳಿದವರ ಬಗ್ಗೆ ಮತ್ತು ಅಲ್ಪಸಂಖ್ಯಾತರ ಬಗ್ಗೆ ಹೋರಾಟ ನಡೆಸುತ್ತಾರೋ ಅಂತವರ ಬಗ್ಗೆ ಕೆಲವು ಶಕ್ತಿಯುತ ಜನರು ಅಸಮಾಧಾನಗೊಂಡು ನಿಮ್ಮ ಹೆಸರು ಹಿಡಿದು ಕರೆಯುತ್ತಾರೆ ಮತ್ತು ನಿಂದಿಸುತ್ತಾರೆ. ಆದ್ದರಿಂದ ಈ ಎಲ್ಲ ಟೀಕೆಗಳನ್ನೇ ನಾನು ಗೌರವದ ಪದಕಗಳೆಂದು ಸ್ವೀಕರಿಸುತ್ತೇನೆ ಹೊರತು, ಅವುಗಳನ್ನು ಎಂದಿಗೂ ಅವಮಾನವೆಂದು ತಿಳಿಯುವುದಿಲ್ಲ" ಎಂದು ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.