Video: ಚೆನ್ನೈನ ಬೀದಿಯಲ್ಲಿ ಅಲೆಮಾರಿಯಾದ ಹುಚ್ಚ ವೆಂಕಟ್...! ಮರುಕಪಟ್ಟ ಅಭಿಮಾನಿಗಳು

ತನ್ನದೇ ರೀತಿ ಮ್ಯಾನರಿಸಂರಿಂದ ಪ್ರಚಾರಗಿಟ್ಟಿಸಿಕೊಂಡಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್, ಈಗ ಅನಾಥರಾಗಿ ಚೆನ್ನೈನ ಬೀದಿಗಳಲ್ಲಿ ಅಲೆಯುತ್ತಿದ್ದಾರೆ ಎನ್ನುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Last Updated : Aug 21, 2019, 09:04 PM IST
Video: ಚೆನ್ನೈನ ಬೀದಿಯಲ್ಲಿ ಅಲೆಮಾರಿಯಾದ ಹುಚ್ಚ ವೆಂಕಟ್...! ಮರುಕಪಟ್ಟ ಅಭಿಮಾನಿಗಳು  title=
Photo courtesy: bhuvann_ponnannaa_official (Instagram)

ಬೆಂಗಳೂರು: ತನ್ನದೇ ರೀತಿ ಮ್ಯಾನರಿಸಂರಿಂದ ಪ್ರಚಾರಗಿಟ್ಟಿಸಿಕೊಂಡಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್, ಈಗ ಅನಾಥರಾಗಿ ಚೆನ್ನೈನ ಬೀದಿಗಳಲ್ಲಿ ಅಲೆಯುತ್ತಿದ್ದಾರೆ ಎನ್ನುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಭುವನ್ ಪೊನ್ನಣ್ಣ ಅವರ ನಟಿಸಿರುವ ರಾಂಧವ್ ಚಿತ್ರ ತಂಡ ಇತ್ತೀಚಿಗೆ ಚಿತ್ರದ ಕೆಲಸಕ್ಕೆ ಹೋಗಿದ್ದಾಗ ರಸ್ತೆ ಬದಿಯಲ್ಲಿ ಹುಚ್ಚ ವೆಂಕಟ್ ರಸ್ತೆ ಬದಿಯಲ್ಲಿ ಹರಿದ ಬಟ್ಟೆ ಧರಿಸಿ ಕುಂಟುಗಾಲಿನಲ್ಲಿ ಸಾಗುತ್ತಿರುವ ವೀಡಿಯೋವನ್ನು ಸ್ವತಃ ಭುವನ್ ಪೊನ್ನಣ್ಣ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

Guys i got this shocking video of our youtube star Mr .Huccha Venkat from 1 of the crew member of "Randhawa" film who was on work in Vadapalani ,Chennai. Iam almost sure its him. Can we please help him ? He has entertained many of us in many ways (even though many might not agree) . Can I get his family member or friends contact ?

A post shared by Randhawa Bhuvann Ponnannaa (@bhuvann_ponnannaa_official) on

' ಶಾಕಿಂಗ್ ! ಹುಚ್ಚ ವೆಂಕಟ್ ಚೆನ್ನೈ ನ ಬೀದಿಯಲ್ಲಿದ್ದಾರೆ? ಯಾರಾದರೂ ಅವನಿಗೆ ಸಹಾಯ ಮಾಡಿ ! 

'ಸ್ನೇಹಿತರೆ ಈ ಶಾಂಕಿಂಗ್ ವೀಡಿಯೋವನ್ನು ನಮ್ಮ ರಾಂಧವ್ ಚಿತ್ರ ತಂಡದ ಸದಸ್ಯರೊಬ್ಬರು ಚೆನ್ನೈನ ವದಪಾಳಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಂದ ಇದನ್ನು ಪಡೆದಿದ್ದೇನೆ. ನನಗೆ ಖಚಿತ ಇದು ಅವರೇ ಎಂದು, ನಾವು ಅವನಿಗೆ ಸಹಾಯ ಮಾಡಬಹುದೇ ? ಅವರು ನಮ್ಮನ್ನು ಹಲವು ರೀತಿಯಲ್ಲಿ ರಂಜಿಸಿದ್ದಾರೆ(ಹಲವರು ಒಪ್ಪದೇ ಇರಬಹುದು) ಅವನ ಸ್ನೇಹಿತರು ಹಾಗೂ ಅವರ ಕುಟುಂಬ ಸದಸ್ಯರ ಸಂಪರ್ಕ ಸಿಗಬಹುದೇ ?' ಎಂದು ಬರೆದುಕೊಂಡಿದ್ದಾರೆ.

ಈಗ ಸಾಕಷ್ಟು ವೈರಲ್ ಆಗಿರುವ ಈ ವೀಡಿಯೋ ನೋಡಿದ ಅವರ ಹಲವು ಅಭಿಮಾನಿಗಳು ಮರುಕ ಪಟ್ಟಿದ್ದಾರೆ. ಇಂತಹ ಹೀನಾಯ ಸ್ಥಿತಿ ಹುಚ್ಚ ವೆಂಕಟ್ ಬರಲು ಅಂತಹ ಕಾರಣವಾದರೂ ಏನು ಎನ್ನುವ ಸಂಶಯ ಈಗ ಎಲ್ಲರಲ್ಲಿ ಮೂಡಿದೆ.

 

Trending News