ಹಿಜಾಬ್ ಧರಿಸಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಬಂದರೆ ನೋ ಎಂಟ್ರಿ ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಜಾರಿ

ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ.  ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಿಜಾಬ್ ಧರಿಸಿಕೊಂಡು ಬಾರದಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 

Written by - Zee Kannada News Desk | Last Updated : Mar 26, 2022, 09:34 AM IST
  • ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ
  • ಮಾರ್ಚ್ 28ರಿಂದ ಏಪ್ರಿಲ್ 11 ರವರೆಗೆ ನಡೆಯಲಿದೆ ಪರೀಕ್ಷೆ
  • ಹಿಜಾಬ್ ಧರಿಸಿಕೊಂಡು ಬಾರದಂತೆ ವಿದ್ಯಾರ್ಥಿಗಳಿಗೆ ಸೂಚನೆ
ಹಿಜಾಬ್ ಧರಿಸಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಬಂದರೆ ನೋ ಎಂಟ್ರಿ ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಜಾರಿ title=
ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ (file photo)

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪರೀಕ್ಷಾ ನಿಯಮಗಳನ್ನು  ಜಾರಿ ಮಾಡಲಾಗಿದೆ (Exam Rules).  ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಜಾರಿಗೊಳಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಜಾರಿ ಮಾಡಲಾಗಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಲಾಗಿದೆ. 

ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam) ಆರಂಭವಾಗಲಿದೆ.  ಮಾರ್ಚ್ 28ರಿಂದ ಏಪ್ರಿಲ್ 11 ರವರೆಗೂ SSLC ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಿಜಾಬ್ (Hijab)ಧರಿಸಿಕೊಂಡು ಬಾರದಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 

ಇದನ್ನೂ ಜಾರಿ : ಮಾನಸಿಕ ಅಸ್ವಸ್ಥ ಮಹಿಳೆಯ ಕುಟುಂಬಸ್ಥರ ಪತ್ತೆಗೆ ಸಹಕರಿಸಲು ಮನವಿ

ಹಿಜಾಬ್ ಧರಿಸಿಕೊಂಡು (Hijab Row) ಪರೀಕ್ಷೆಗೆ ಬಂದರೆ, ಅವಕಾಶ ನೀಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.   1995ರ ನಿಯಮ 11ರಲ್ಲಿ ಇರುವ ಅಧಿಕಾರದನ್ವಯ ಸಮವಸ್ತ್ರ ಜಾರಿಮಾಡಲಾಗಿದೆ. 

ರಾಜ್ಯದಲ್ಲಿ ಒಟ್ಟು 8,73,846  ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 
ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರತಿಗಳ ಸಂಖ್ಯೆ ಹೀಗಿದೆ : 
ಫ್ರೆಶರ್ ವಿದ್ಯಾರ್ಥಿಗಳು- 8,20,888
ಪ್ರೈವೇಟ್ ವಿದ್ಯಾರ್ಥಿಗಳು- 46,200
ಗಂಡು ಮಕ್ಕಳು - 4,52,732
ಹೆಣ್ಣು ಮಕ್ಕಳು , 4,21,110
ತೃತೀಯ ಲಿಂಗಿಗಳು - 04
ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು - 5,307 

ಪರೀಕ್ಷೆಗೆ ನೋಂದಾಯಿತ ಒಟ್ಟು ಶಾಲೆಗಳ ಸಂಖ್ಯೆ - 15,387
ಸರ್ಕಾರಿ - 5,717
ಅನುದಾನಿತ - 3,412
ಅನುದಾನ ರಹಿತ - 6,258

ಇದನ್ನೂ ಜಾರಿ : ವೈದ್ಯರು, ತಜ್ಞರ ಕೊರತೆ ನೀಗಿಸಲು ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ- ಡಾ.ಕೆ.ಸುಧಾಕರ್

ಪರೀಕ್ಷಾ ಕೇಂದ್ರಗಳ ಸಂಖ್ಯೆ - 3,444
ಸರ್ಕಾರಿ- 1357
ಅನುದಾನಿತ-1009
ಅನುದಾನಿತ ರಹಿತ- 978
ಸಾಮಾನ್ಯ ಕೇಂದ್ರಗಳು - 3,275
ಖಾಸಗಿ ಕೇಂದ್ರಗಳು -169

ಪರೀಕ್ಷೆಗಾಗಿ 45,289 ಪರೀಕ್ಷಾ ಕೊಠಡಿಗಳನ್ನು  ಸಿದ್ಧಪಡಿಸಲಾಗಿದೆ. 3,444 ಮುಖ್ಯ ಅಧಿಕ್ಷಕರಗಳ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ. 49,817 ಕೊಠಡಿ ಮೇಲ್ವಿಚಾರಕರು  ಎಸ್ಎಸ್ಎಲ್ ಸಿ ಪರೀಕ್ಷೆಯ ನೇತೃತ್ವ ವಹಿಸಲಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News