ಇಂದಿನ ಸದನದ ಹೈಲೈಟ್ಸ್

ಮತ್ತೆ ಆರಂಭವಾಗಲಿದೆ ಚಳಿಗಾಲದ ಅಧಿವೇಶನ.

Last Updated : Nov 20, 2017, 10:05 AM IST
ಇಂದಿನ ಸದನದ ಹೈಲೈಟ್ಸ್ title=

ಬೆಳಗಾವಿ: ಕಳೆದ ವಾರ ಐದು ದಿನಗಳ ಸದನ ಕೆಪಿಎಂಇ ಖಾಯ್ದೆ ಬಗೆಗಿನ ಹೋರಾಟ, ಆಡಳಿತ ಪಕ್ಷ-ವಿರೋಧ ಪಕ್ಷಗಳ ನಡುವಿನ ಕಚ್ಚಾಟದಲ್ಲೇ ಮುಗಿಯಿತು. ಇಂದು ಆರನೇ ದಿನದ ಕಲಾಪ ಪ್ರಾರಂಭಗೊಳ್ಳಲಿದೆ. ಉಭಯ ಸದನಗಳಲ್ಲಿ ಕಾವೇರಲಿದೆ ಮಹಾದಾಯಿ ಗದ್ದಲ. ಸದನದ ಹೊರಗೆ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದ್ದರೆ, ಸದನದ ಒಳಗೆ ಹೋರಾಟ ನಡೆಸಲಿರುವ ಬಿಜೆಪಿ.

ಇವೆಲ್ಲವುಗಳ ನಡುವೆ ಚಳಿಗಾಲದ ಆರನೇ ದಿನದ ಕಲಾಪದಲ್ಲಿ ಚರ್ಚಿಸಬಹುದಾದ ವಿಷಯಗಳ ತುಣುಕು ಇಲ್ಲಿದೆ.

* ಇಂದಿನ ಕಲಾಪದಲ್ಲಿ ‌ಮತ್ತೆ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ.
* ಮಹಾದಾಯಿ, ಕಳಸಾ ಬಂಡೂರಿ ಸಮಸ್ಯೆ ಕುರಿತು ಚರ್ಚೆ, ಈ ಸಮಯದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಇಂದೂ ನಡೆಯಲಿದೆ  ಗದ್ದಲ.
* ಡಾ. ನಂಜುಂಡಪ್ಪ ವರದಿ ಅನುಷ್ಟಾನದ ಬಗ್ಗೆ ವಿಸ್ತೃತ ಚರ್ಚೆ.
* ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ ಮಾತನಾಡುವ ಸಾಧ್ಯತೆ.
* ಇಂದು ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ) ಮಂಡನೆ ಸಾಧ್ಯತೆ.
* ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ ಮಂಡನೆ ಸಾಧ್ಯತೆ.
* ಅಡಕೆ ಬೆಳೆಗಾರರು ಹಾಗೂ ಇನ್ನಿತರ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆ.
* ವಾಯುವ್ಯ ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಚರ್ಚೆ.
* ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸೀಟು ಹಂಚಿಕೆ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆ ಸಾಧ್ಯತೆ.

Trending News