ಡಿಸೆಂಬರ್ ನಲ್ಲಿ ಅರಣ್ಯೀಕರಣದೊಂದಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹೆರಿಟೇಜ್ ರನ್

  ನಗರದಲ್ಲಿ ಅರಣ್ಯೀಕರಣದ ಜೊತೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಅಂಗವಾಗಿ ‘ವೃಕ್ಷೋಥಾನ್ – ಹೆರಿಟೇಜ್ ರನ್-2023’ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

Written by - Manjunath N | Last Updated : Aug 27, 2023, 07:35 PM IST
  • ಈ ಹಿಂದೆ ಕೋಟಿ ವೃಕ್ಷ ಅಭಿಯಾನ ಕೈಗೊಂಡು 1.50 ಕೋಟಿ ವೃಕ್ಷಗಳನ್ನು ಬೆಳೆಸಲಾಗಿದೆ
  • ಜನರಲ್ಲಿ ಸಸಿ ಬೆಳೆಸುವ ಅರಿವು ಮೂಡಿಸಬೇಕು
  • ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರವಾಗಿದ್ದು
ಡಿಸೆಂಬರ್ ನಲ್ಲಿ ಅರಣ್ಯೀಕರಣದೊಂದಿಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹೆರಿಟೇಜ್ ರನ್ title=

ವಿಜಯಪುರ:  ನಗರದಲ್ಲಿ ಅರಣ್ಯೀಕರಣದ ಜೊತೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಯಶಸ್ಸಿನ ಅಂಗವಾಗಿ ‘ವೃಕ್ಷೋಥಾನ್ – ಹೆರಿಟೇಜ್ ರನ್-2023’ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: "ತಪ್ಪು ಮಾಹಿತಿಯ ಹರಡುವಿಕೆಯು ಯಾವುದೇ ದೇಶಕ್ಕೆ ದೊಡ್ಡ ಅಪಾಯ"

ಈ ಕುರಿತಂತೆ ನಿನ್ನೆದಿನ ಜಿಲ್ಲಾಧಿಕಾರಿಗಳವರ ಸಭಾಂಗಣದಲ್ಲಿ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿದ್ದೆ.ಈ ಹಿಂದೆ ಕೋಟಿ ವೃಕ್ಷ ಅಭಿಯಾನ ಕೈಗೊಂಡು 1.50 ಕೋಟಿ ವೃಕ್ಷಗಳನ್ನು ಬೆಳೆಸಲಾಗಿದೆ. ಜನರಲ್ಲಿ ಸಸಿ ಬೆಳೆಸುವ ಅರಿವು ಮೂಡಿಸಬೇಕು.ವಿಜಯಪುರವು ಐತಿಹಾಸಿಕ ಸ್ಮಾರಕಗಳ ನಗರವಾಗಿದ್ದು, ಆ ಕುರಿತಂತೆ ಜಾಗೃತಿ ಮೂಡಿಸಿ, ಪ್ರವಾಸಿಗರನ್ನು ಸೆಳೆಯಲು ನಗರದಲ್ಲಿ ಸ್ವಚ್ಚತೆ, ಸ್ಮಾರಕಗಳ ನಿರ್ಹಣೆ, ಶೌಚಾಲಯಗಳ ನಿರ್ಮಾಣ, ಒತ್ತುವರಿ ತೆರವು ಸೇರಿದಂತೆ ಅಗತ್ಯದ ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಹೇಳಿದ್ದಾರೆ.

ಇದನ್ನೂ ಓದಿ'ಬಾಹ್ಯಾಕಾಶಕ್ಕೆ ಹೋಗಲಿದೆ ಭಾರತದ ಮಹಿಳಾ ರೋಬೋಟ್ ವ್ಯೋಮಿತ್ರ'

‘ವೃಕ್ಷೋಥಾನ್–ಹೆರಿಟೇಜ್ ರನ್ 2023’ ಯಶಸ್ವಿಗೊಳಿಸಿ, ಪರಿಸರದೊಂದಿಗೆ ಐತಿಹಾಸಿಕ ಸ್ಮಾರಕಗಳ ಉಳಿವಿಗೆ ಎಲ್ಲರೂ ಕೈ ಜೋಡಿಸಿ ಎಂದು ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News