ಚಾಮರಾಜನಗರ: ಕೆರೆ ಏರಿ ಒಡೆದು ನೂರಾರು ಎಕರೆ ಕೃಷಿ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಘಟನೆ ಯಳಂದೂರು ತಾಲೂಕಿನ ಯರಗಂಬಳ್ಳಿ ಯಲ್ಲಿ ನಡೆದಿದೆ. ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯರಗಂಬಳ್ಳಿ ಮತ್ತು ಗಂಗವಾಡಿ ಗ್ರಾಮಕ್ಕೆ ಹೋಗುವ ಮದ್ಯ ಇರುವ ಹುಳುಗೆರೆ ಕೆರೆ ಭರ್ತಿಯಾಗಿ ಕೆರೆ ಏರಿ ಒಡೆದು ಹೋಗಿ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ನೀರಿನ ರಭಸಕ್ಕೆ ನಾಟಿ ಮಾಡಿದೆ ಬತ್ತದ ಪೈರು, ರಾಗಿ ಪೈರು, ನಾಟಿ ಮಾಡಿದ ಕಬ್ಬು, ತೆಂಗಿನ ಸಸಿ ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದು ವ್ಯವಸಾಯಕ್ಕೆ ಖರ್ಚು ಮಾಡಿದ ಲಕ್ಷಾಂತರ ರೂ.ನಷ್ಟವಾಗಿದೆ. ಇನ್ನು, ನಂಜನಾಯಕ ಎಂಬವರ ಸಾಕಿದ್ದ 50ಕ್ಕೂ ಹೆಚ್ಚು ಕುರಿ, ಕೋಳಿಯೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ.
ಇದನ್ನೂ ಓದಿ: Karnataka Weather: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಅಬ್ಬರ!
ಚಾಮರಾಜನಗರ ತಾಲ್ಲೂಕಿನ ನಲ್ಲೂರುಮೋಳೆ, ಯಳಂದೂರು ತಾಲ್ಲೂಕಿನ ಕಂದಹಳ್ಳಿ, ಗಣಿಗನೂರು, ಯರಿಯೂರು, ಅಂಬಳೆ ಹಾಗೂ ಮದ್ದೂರು ಗ್ರಾಮಗಳ ಸುತ್ತಮುತ್ತಲ ಕೃಷಿ ಭೂಮಿಗಳಲ್ಲಿ ನೀರು ಹರಿಯುತ್ತಿದ್ದು, ಫಸಲು ನಾಶವಾಗುವ ಆತಂಕ ಸೃಷ್ಟಿಸಿದೆ. ಹಲವು ಮನೆಗಳಿಗೆ ನೀರೂ ನುಗ್ಗಿದೆ. ಚಾಮರಾಜನಗರ ತಾಲ್ಲೂಕಿನ ನಲ್ಲೂರಮೋಳೆ ಗ್ರಾಮ ಅಕ್ಷರಶಃ ಕೆರೆಯಾಗಿದೆ. ಕೆರೆಯ ನೀರು ಊರಿಗೆ ನುಗ್ಗಿದೆ. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿವೆ.
ವರುಣನ ಆರ್ಭಟಕ್ಕೆ ಚಾಮರಾಜನಗರ ತಾಲೂಕಿನ ಅಮ್ಮನಪುರ ಕೆರೆ ಬರೋಬ್ಬರಿ 30 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದ್ದು ರಸ್ತೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬರುತ್ತಿರುವುದರಿಂದ ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ಸುವರ್ಣಾವತಿ ಜಲಾಶಯದಿಂದ 1,400 ಕ್ಯುಸೆಕ್ ಹಾಗೂ ಚಿಕ್ಕಹೊಳೆ ಜಲಾಶಯದಿಂದ 200 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
ಇದನ್ನೂ ಓದಿ: ಮುರುಘಾ ಶರಣರ ಆಡಿಯೋ ವೈರಲ್ : ಅದ್ರಲ್ಲಿ ಏನಿದೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.