ಫೆ.4ರ ಬೆಂಗಳೂರು ಬಂದ್ ಕರೆ ಅಸಂವಿಧಾನಿಕ : ಹೈಕೋರ್ಟ್

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಫೆ.4 ರಂದು ವಿವಿಧ ಸಂಘಟನೆಗಳು ಕೆರೆ ನೀಡಿರುವ ಬೆಂಗಳೂರು ಬಂದ್ 'ಅಸಂವಿಧಾನಿಕ' ಎಂದು ಹೈಕೋರ್ಟ್ ಘೋಷಿಸಿದೆ. 

Last Updated : Feb 2, 2018, 05:42 PM IST
ಫೆ.4ರ ಬೆಂಗಳೂರು ಬಂದ್ ಕರೆ ಅಸಂವಿಧಾನಿಕ : ಹೈಕೋರ್ಟ್ title=
file photo

ಬೆಂಗಳೂರು : ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಫೆ.4 ರಂದು ವಿವಿಧ ಸಂಘಟನೆಗಳು ಕೆರೆ ನೀಡಿರುವ ಬೆಂಗಳೂರು ಬಂದ್ 'ಅಸಂವಿಧಾನಿಕ' ಎಂದು ಹೈಕೋರ್ಟ್ ಘೋಷಿಸಿದೆ. 

ಫೆ.4ರ ಬಂದ್ ಪ್ರಶ್ನಿಸಿ ಬೆಂಗಳೂರಿನ ಶ್ರದ್ಧ ಪಾಲರ್ಸ್ ಅಸೋಸಿಯೇಷನ್ ​​ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಸಿಜೆ ಹೆಚ್.ಜಿ.ರಮೇಶ್ ಹಾಗೂ ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಜನಜೀವನಕ್ಕೆ ತೊಂದರೆಯಾಗುವಂತಹ ಬಂದ್ ಗಳಿಗೆ ಕರೆನಿಡುವ ಅಧಿಕಾರ ಯಾವುದೇ ಸಂಘಟನೆ ಅಥವಾ ವ್ಯಕ್ತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 

Trending News