ಜೆಡಿಎಸ್ ನ ನೂತನ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್

      

Last Updated : Aug 5, 2018, 05:11 PM IST
ಜೆಡಿಎಸ್ ನ ನೂತನ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ title=
Photo courtesy:facebook(file photo)

ಬೆಂಗಳೂರು: ಹಿರಿಯ ನಾಯಕ ಎಚ್ ವಿಶ್ವನಾಥ್  ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ವಿಶ್ವನಾಥ್ ಅವರ ನೇಮಕವನ್ನು ಜೆಡಿಎಸ್ ಹಿರಿಯ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಅಂತಿಮಗೊಳಿಸಿದ್ದಾರೆ. ಇವರ ಜೊತೆಗೆ  ನಾಲ್ವರು  ಕಾರ್ಯಾಧ್ಯಕ್ಷರನ್ನು ಸಹ ನೇಮಕ ಮಾಡಲಾಗಿದೆ. 

ಇತ್ತೀಚಿಗೆ ಕುಮಾರಸ್ವಾಮಿಯವರು  ಕಾಂಗ್ರೇಸ್-ಜೆಡಿಎಸ್ ನ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದ ನಂತರ  ಪಕ್ಷದ  ಸಂಘಟನೆಯಲ್ಲಿ ಅವರು ತೊಡಗುವುದು ಕಷ್ಟಕರವಾಗಿದೆ.ಈ ಹಿನ್ನಲೆಯಲ್ಲಿ  ಸಂಘಟನಾ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಹೊಸದಾಗಿ ನೇಮಕ ಮಾಡುವುದು ಅವಶ್ಯವಾಗಿತ್ತು.ಈಗ ಅನುಭವ ಮತ್ತು ಸಂಘಟನೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ಎಚ್ ವಿಶ್ವನಾಥ್ ಅವರನ್ನು ಈ ಹುದ್ದೆಗೆ ಪರಿಗಣಿಸಲಾಗಿದೆ.

ಈ ಕಾಂಗ್ರೇಸ್ ಪಕ್ಷದಲ್ಲಿ ಸಿದ್ದರಾಮಯ್ಯ ನವರ ಆಪ್ತರಾಗಿದ್ಧ ವಿಶ್ವನಾಥ್ ಕಾಲಾಂತರದಲ್ಲಿ ಸಿದ್ಧರಾಮಯ್ಯ ಸಖ್ಯ ತೊರೆದು ಜೆಡಿಎಸ್ ಗೆ  ಸೇರಿದ್ದರು.

Trending News