/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

ಚಾಮರಾಜನಗರ: ಗೃಹಜ್ಯೋತಿ ಯೋಜನೆಯ ಗೊಂದಲ ಇನ್ನೂ ಮುಂದುವರೆದಿದ್ದು ಸಿಎಂ ಸಿದ್ದರಾಮಯ್ಯ ಒಂದು ರೀತಿ ಹೇಳಿಕೆ ಕೊಟ್ಟರೇ ಸಚಿವ ಕೆ.ವೆಂಕಟೇಶ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ  ಮತದಾರರ ಕೃತಜ್ಞತಾ ಸಭೆ ಬಳಿಕ ಮಾಧ್ಯಮದವರೊಟ್ಟಿಗೆ ಸಚಿವರು ಮಾತನಾಡಿ, ನಾವು ಪ್ರಣಾಳಿಕೆಯಲ್ಲಿ ತಿಳಿಸಿದ ರೀತಿ ಮನೆ ಮಾಲೀಕರು ಇದರ ಯೋಜನೆ ಪಡೆಯುತ್ತಾರೆ, ಬಾಡಿಗೆದಾರನಲ್ಲ, ವಿದ್ಯುಶಕ್ತಿಯ ಗ್ರಾಹಕ ಯಾರಾಗಿರುವನೋ, ಯಾರ ಹೆಸರಿನಲ್ಲಿರುವೋದೋ ಅವರು ಇದರ ಫಲಾನುಭವಿಯಾಗುತ್ತಾರೆ ಎಂದಿದ್ದಾರೆ. 

ಇದನ್ನೂ ಓದಿ- ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ

ಇಂದು ಬೆಳಗ್ಗೆ ಬಾಡಿಗೆದಾರರು ಇದರ ಯೋಜನೆ ಪಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರದೇ ಸಂಪುಟದ ಸಚಿವ ಮನೆ ಮಾಲೀಕರಿಗಷ್ಟೇ ಯೋಜನೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆ ಜಾರಿಯಲ್ಲಿನ ಗೊಂದಲ ಜಗಜ್ಜಾಗಿರಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಬಿಜೆಪಿಯವರು ಸುಖಾಸುಮ್ಮನೆ ವಿಚಾರಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ- ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪ್ರತಿಭಟನೆ ; ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದ ಸಿದ್ದರಾಮಯ್ಯ

ಹಸುಗಳನ್ನು ಏಕೆ ಕಡಿಬಾರದು ಎಂಬ ಹೇಳಿಕೆ ವಿವಾದ ಆಗುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ, ಕಾಯ್ದೆ ಬಗ್ಗೆಯೂ ಹೇಳಿದ್ದಾರೆ. ಕಾಯ್ದೆ ಬಗ್ಗೆ ಪರಾಮರ್ಶಿಸುವುದಾಗಿಯೂ ಹೇಳಿದ್ದಾರೆ.  ಅವರು ಪ್ರತಿಕ್ರಿಯೆ ಕೊಟ್ಟಿರುವುದರಿಂದ ನಾನೇನು ಮಾತನಾಡಲ್ಲ ಎಂದು ಜಾರಿಕೊಂಡರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Guarantee scheme: Minister K Venkatesh statement about gruha jyoti yojane
News Source: 
Home Title: 

ಗ್ಯಾರಂಟಿ ಯೋಜನೆ: ಸಿಎಂ ಹೇಳಿದ್ದೇ ಒಂದು, ಸಚಿವರ ಮಾತೇ ಬೇರೆ!

ಗ್ಯಾರಂಟಿ ಯೋಜನೆ: ಸಿಎಂ ಹೇಳಿದ್ದೇ ಒಂದು, ಸಚಿವರ ಮಾತೇ ಬೇರೆ!
Yes
Is Blog?: 
No
Tags: 
Facebook Instant Article: 
Yes
Highlights: 

ನಾವು ಪ್ರಣಾಳಿಕೆಯಲ್ಲಿ ತಿಳಿಸಿದ ರೀತಿ ಮನೆ ಮಾಲೀಕರು ಇದರ ಯೋಜನೆ ಪಡೆಯುತ್ತಾರೆ, ಬಾಡಿಗೆದಾರನಲ್ಲ

ವಿದ್ಯುಶಕ್ತಿಯ ಗ್ರಾಹಕ ಯಾರಾಗಿರುವನೋ, ಯಾರ ಹೆಸರಿನಲ್ಲಿರುವೋದೋ ಅವರು ಇದರ ಫಲಾನುಭವಿಯಾಗುತ್ತಾರೆ- ಸಚಿವ ಕೆ.ವೆಂಕಟೇಶ್ 

Mobile Title: 
ಗ್ಯಾರಂಟಿ ಯೋಜನೆ: ಸಿಎಂ ಹೇಳಿದ್ದೇ ಒಂದು, ಸಚಿವರ ಮಾತೇ ಬೇರೆ!
Yashaswini V
Publish Later: 
No
Publish At: 
Tuesday, June 6, 2023 - 16:32
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No
Word Count: 
193