42 ವರ್ಷಗಳಿಂದ ಮಾಂಸಾಹಾರ ತ್ಯಜಿಸಿರುವ ದೇವೇಗೌಡರಿಗೆ ಯಾವ ಮಾಂಸಾಹಾರ ಹೆಚ್ಚು ಪ್ರಿಯ ಗೊತ್ತಾ?

ನಾನು ದೊಡ್ಡ ಜಮೀನ್ದಾರ ಆಗಬೇಕಿದ್ದವನು... ನಾನು ಜಮೀನಿನಲ್ಲಿ ಕೆಲಸ ಮಾಡಬೇಕಾದರೆ ನನಗೂ ಮೀನು ಸಾಕಿದ ಅನುಭವವಿದೆ.

Last Updated : Sep 5, 2018, 08:26 AM IST
42 ವರ್ಷಗಳಿಂದ ಮಾಂಸಾಹಾರ ತ್ಯಜಿಸಿರುವ ದೇವೇಗೌಡರಿಗೆ ಯಾವ ಮಾಂಸಾಹಾರ ಹೆಚ್ಚು ಪ್ರಿಯ ಗೊತ್ತಾ? title=
File Pic

ಹಾಸನ: ನಾನು ಹೆಚ್ಚು ಮತ್ಸ್ಯ ಪ್ರಿಯ, ನಾನು ಮೀನು ತಿಂದು 42 ವರ್ಷಗಳಾಯ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮೀನುಗಾರಿಕೆ ಇಲಾಖಾ ವಿಷಯ ಚರ್ಚೆ ವೇಳೆ ಮಾತನಾಡಿದ ದೇವೇಗೌಡರು, 42 ವರ್ಷಗಳಿಂದ ಮಾಂಸಾಹಾರ ತ್ಯಜಿಸಿದ್ದೇನೆ. ನಾನು ಹೆಚ್ಚು ಮತ್ಸ್ಯ ಪ್ರಿಯ ಎಂದರಲ್ಲದೆ, ಮೀನು ಸಾಕುವವರಿಗೆ ಹೆಚ್ಚು ಉತ್ತೇಜನ ನೀಡಿ ಎಂದು‌ ಅಧಿಕಾರಿಗೆ ಸೂಚನೆ ನೀಡಿದರು.

ಹಳ್ಳಿಯ ಯುವಕರಿಗೆ ಉತ್ತಮ ಕೆಲಸ ಮೀನುಸಾಕಣೆ:
ನಾನು ದೊಡ್ಡ ಜಮೀನ್ದಾರ ಆಗಬೇಕಿದ್ದವನು... ನಾನು ಜಮೀನಿನಲ್ಲಿ ಕೆಲಸ ಮಾಡಬೇಕಾದರೆ ನನಗೂ ಮೀನು ಸಾಕಿದ ಅನುಭವವಿದೆ ಎಂದು ತಿಳಿಸಿದ ಹೆಚ್ಡಿಡಿ, ಮೀನು ಸಾಕಲು ಕೇವಲ‌‌ ಬೆಸ್ತರೇ ಆಗಬೇಕಿಲ್ಲ, ನಿರುದ್ಯೋಗ ಪರಿಹಾರಕ್ಕೆ ಹಳ್ಳಿಯ ಯುವಕರಿಗೆ ಉತ್ತಮ ಕೆಲಸ ಮೀನುಸಾಕಣೆ ಎಂದರು.

Trending News