ಗ್ರೀಸ್ ದೇಶಕ್ಕೆ ತೆರಳಿ ಕನ್ನಡದಲ್ಲಿ ಪುಸ್ತಕ ಬರೆಯಲಿದ್ದಾರೆ ಮಾಜಿ ಸಂಸದ ಎಚ್. ವಿಶ್ವನಾಥ್

ಗ್ರೀಸ್ ದೇಶದ ಆಹ್ವಾನದ ಮೇರೆಗೆ ಎಚ್. ವಿಶ್ವನಾಥ್ ನಾಳೆ ರಾತ್ರಿ ಬೆಂಗಳೂರಿನಿಂದ ಗ್ರೀಸ್ಗೆ ತೆರಳಲಿದ್ದಾರೆ.

Last Updated : Nov 6, 2017, 03:02 PM IST
ಗ್ರೀಸ್ ದೇಶಕ್ಕೆ ತೆರಳಿ ಕನ್ನಡದಲ್ಲಿ ಪುಸ್ತಕ ಬರೆಯಲಿದ್ದಾರೆ ಮಾಜಿ ಸಂಸದ ಎಚ್. ವಿಶ್ವನಾಥ್ title=

ಬೆಂಗಳೂರು: ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಎಚ್.ವಿಶ್ವನಾಥ್ ಗ್ರೀಸ್ ಸರ್ಕಾರದ ಆಹ್ವಾನದ ಮೇರೆಗೆ ನಾಳೆ ರಾತ್ರಿ ಬೆಂಗಳೂರಿನಿಂದ ಗ್ರೀಸ್ಗೆ ತೆರಳಿ ಕನ್ನಡದಲ್ಲಿ ಪುಸ್ತಕ ಒಂದನ್ನು ಬರೆಯಲಿದ್ದಾರೆ.

ಜಗತ್ತಿನ ಅತ್ಯಂತ ಪುರಾತನ ಜನತಂತ್ರ ವ್ಯವಸ್ಥೆ ಗ್ರೀಸ್ ದೇಶದ್ದು. ಈ ಬಗ್ಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಪುಸ್ತಕ ಬರೆಸುವುದು ಈ ದೇಶದ ಆಶಯ. ಕನ್ನಡದಲ್ಲಿ ಗ್ರೀಸ್ ಪ್ರಜಾತಂತ್ರ ಬಗ್ಗೆ ಬರೆಯಲು ನನಗೆ ಆಹ್ವಾನ ನೀಡಿದ್ದಾರೆ. ಇದಕ್ಕಾಗಿ 5 ಸಾವಿರ ಯೂರೊ ಡಾಲರ್ ಸಂಭಾವನೆ ಸಹ ನೀಡಿದ್ದಾರೆ. ಆಗಸ್ಟ್ ನಲ್ಲೆ ಅವರಿಗೆ ಪುಸ್ತಕ ಬರೆದು ಕೊಡಬೇಕಿತ್ತು. ಆದರೆ ಹೊಸದಾಗಿ ಜೆಡಿಎಸ್ ಸೇರಿಕೊಂಡ ಹಿನ್ನೆಲೆಯಲ್ಲಿ ತಡವಾಗಿದೆ ಎಂದು ವಿಶ್ವನಾಥ್ ವಿವರಿಸಿದರು. 

ನಮ್ಮ ಪಾರ್ಲಿಮೆಂಟ್ ಮತ್ತು ಲಂಡನ್ ಪಾರ್ಲಿಮೆಂಟ್ ಸಮೀಕರಣ ಮಾಡಿ "ದಿಟಾಕಿಂಗ್ ಶಾಪ್" ಎಂಬ ಪುಸ್ತಕವೊಂದನ್ನು ಈ ಹಿಂದೆ ವಿಶ್ವನಾಥ್ ಬರೆದಿದ್ದರು. ಇದನ್ನು ಓದಿರುವ ಗ್ರೀಸ್ ದೇಶ ವಿಶ್ವನಾಥ್ ಅವರಿಗೆ ಆಹ್ವಾನ ನೀಡಿದೆ ಎಂದು ಹೇಳಿದ ವಿಶ್ವನಾಥ್, ಪುಸ್ತಕ ಬರೆದ ಬಳಿಕ ಮತ್ತೆ ಜೆಡಿಎಸ್ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ಜೆಡಿಎಸ್ ನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್. ವಿಶ್ವನಾಥ್, ತಾವು ನಾಳೆ ರಾತ್ರಿ ಬೆಂಗಳೂರಿನಿಂದ ಗ್ರೀಸ್ ದೇಶಕ್ಕೆ ತೆರಳುತ್ತಿವುದಾಗಿ ಹಾಗೂ 12 ದಿನಗಳ ಕಾಲ‌ ಅಲ್ಲೇ ಇದ್ದು, ನ.20 ಕ್ಕೆ ಬೆಂಗಳೂರಿಗೆ ವಾಪಸ್ ಆಗುವುದಾಗಿ ತಿಳಿಸಿದರು.

Trending News