ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

Written by - Yashaswini V | Last Updated : Jun 6, 2023, 04:14 PM IST
  • ಬಿಜೆಪಿ ಸರ್ಕಾರ 600 ಭರವಸೆ ಕೊಟ್ಟಿತ್ತು ಆದರೆ ಯಾವುದನ್ನು ಈಡೇರಿಸಿರಲಿಲ್ಲ
  • ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ
  • ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ.
ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಬಿಜೆಪಿ ಸ್ಥಿತಿ: ಯುತೀಂದ್ರ ಸಿದ್ದರಾಮಯ್ಯ  title=

ಚಾಮರಾಜನಗರ: ಬಿಜೆಪಿಯವರ ಸ್ಥಿತಿ ತಾನು ಕಳ್ಳ ಪರರನ್ನು ನಂಬ ಎಂಬಂತಾಗಿದೆ ಎಂದು ಬಿಜೆಪಿಗರ ಪ್ರತಿಭಟನೆ ವಿರುದ್ಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅವರು, ಅವರಂತೆ (ಬಿಜೆಪಿಯವರಂತೆ) ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ಕೊಟ್ಟಿದೆ ಎಂದುಕೊಂಡಿದ್ದರು. ಆದರೆ ಎಲ್ಲಾ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದೆ ಎಂದು ಟಾಂಗ್ ನೀಡಿದರು. 

ಇದನ್ನೂ ಓದಿ- ಬಿಬಿಎಂಪಿ‌ ಗದ್ದುಗೆ ಮೇಲೆ ಟ್ರಬಲ್ ಶೂಟರ್ ಕಣ್ಣು..!

ಬಿಜೆಪಿ ಸರ್ಕಾರ 600 ಭರವಸೆ ಕೊಟ್ಟಿತ್ತು ಆದರೆ ಯಾವುದನ್ನು ಈಡೇರಿಸಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ, ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳು ಕೂಡ ಕಳೆದಿಲ್ಲ. ಇದೀಗ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯತೀಂದ್ರ ಬಿಜೆಪಿಗರನ್ನು ಲೇವಡಿ ಮಾಡಿದರು.

ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಡೆ ಧರ್ಮ ಇತ್ತು, ಅವರ ಕಡೆ ಅಧರ್ಮ ಇತ್ತು. ನಮ್ಮದು ಪ್ರಾಮಾಣಿಕ ಸೇವೆ ಅವರದು 40% ಭ್ರಷ್ಟಾಚಾರ, ನಮ್ಮದು ಬಡವರ ಪರ ಸರ್ಕಾರ ಅವರದು ಶ್ರೀಮಂತರ ಪರ ಒಲವು. ಈ ಎಲ್ಲಾ ಅಂಶಗಳನ್ನು ಮತದಾರರಿಗೆ ತಿಳಿಸಿದೆವು, ಜನರು ನಮಗೆ ಆಶೀರ್ವಾದ ಮಾಡಿದರು. ಈಗ ಕಾರ್ಯಕರ್ತರ ಮೇಲೆ ಹೆಚ್ಚು ಜವಬ್ದಾರಿ ಇದ್ದು ಲೋಕಾಸಭಾ ಚುನಾವಣೆ ಒಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು, ಕಾಂಗ್ರೆಸ್ ಸಾಧನೆ ಬಗ್ಗೆ ಹೇಳಬೇಕು ಎಂದರು.

ಇದನ್ನೂ ಓದಿ- ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: "ಶಕ್ತಿ ಯೋಜನೆ" ಅನುಮೋದನೆ ಆದೇಶದಲ್ಲಿ ಏನೇನಿದೆ

ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಹಿಡಿದು ಜನರನ್ನು ಕೆರಳಿಸುತ್ತಿದ್ದರು‌. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದು ಇದೇ ವೇಳೆ ಮಾಜಿ ಶಾಸಕ ಯಂತೀಂದ್ರ ಭರವಸೆ ನೀಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News