Santosh Patil Death : ಅದು ಡೆತ್‌ನೋಟ್‌ ಅಲ್ಲ, ಮೆಸೇಜ್‌ ಎಂದ ಆರಗ : ಮೌನ ಮುರಿದ ಬಿಎಸ್‌ವೈ

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ. ಅದು ಡೆತ್ ಮೆಸೇಜ್ ಎಂದು ಗೃಹ ಸಚಿವ ಆರಗಾ ಜ್ಞಾನೇಂದ್ರ ಹೇಳಿದ್ದಾರೆ.

Written by - Channabasava A Kashinakunti | Last Updated : Apr 15, 2022, 01:31 PM IST
  • ಗುತ್ತಿಗೆದಾರ ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ
  • ಕಾಂಗ್ರೆಸ್‌ನವರು ವಿರೋಧ ಮಾಡುವುದು ಮುಖ್ಯವಲ್ಲ
  • ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೌನ
Santosh Patil Death : ಅದು ಡೆತ್‌ನೋಟ್‌ ಅಲ್ಲ, ಮೆಸೇಜ್‌ ಎಂದ ಆರಗ : ಮೌನ ಮುರಿದ ಬಿಎಸ್‌ವೈ title=

ಶಿವಮೊಗ್ಗ : ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ. ಅದು ಡೆತ್ ಮೆಸೇಜ್ ಎಂದು ಗೃಹ ಸಚಿವ ಆರಗಾ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರಗಾ ಜ್ಞಾನೇಂದ್ರ, ಕಾಂಗ್ರೆಸ್‌ನವರು ವಿರೋಧ ಮಾಡುವುದು ಮುಖ್ಯವಲ್ಲ. ಅವರು ವಿರೋಧ ಪಕ್ಷದಲ್ಲಿದ್ದಾರೆ. ಅವರ ಆರೋಪ ಸಹಜ. ಸಂತೋಷ್ ಪಾಟೀಲ್ ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಶವವನ್ನು ಅವರ ಕುಟುಂಬದವರ ಸಮ್ಮುಖದಲ್ಲೇ ಹೊರತೆಗೆಸಿ, ಪಂಚನಾಮೆ ಮಾಡಿ ಶವವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. 

ಇದನ್ನೂ ಓದಿ : ‘ಸಂತೋಷ್ ಪಾಟೀಲ್ ಕುಟುಂಬಕ್ಕೆ ಸರ್ಕಾರ 1 ಕೋಟಿ ಪರಿಹಾರ ನೀಡಬೇಕು’

ಸಂತೋಷ್ ಪಾಟೀಲ್ ಬರೆದಿರುವುದು ಡೆತ್ ನೋಟ್ ಅಲ್ಲ. ಡೆತ್ ಮೆಸೇಜ್. ಅದನ್ನು ಅವರೇ ಬರೆದರೋ ಅಥವಾ ಅವರ ಹೆಸರಿನಲ್ಲಿ ಬೇರೆಯವರು ಬರೆದು ಕಳಿಸಿದರೋ ಎಂದು ಎಲ್ಲಾ ಆಯಾಮಗಳಲ್ಲಿ ತನಿಖೆಯಾಗುತ್ತಿದೆ. ಉಡುಪಿ ಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಖಂಡಿತವಾಗಿಯೂ ಸದ್ಯದಲ್ಲಿಯೇ ಎಲ್ಲವೂ ಪೊಲೀಸ್ ತನಿಖೆಯಿಂದ ಹೊರಬರಲಿದೆ. ನಮ್ಮ  ಸಚಿವರ ಮೇಲೆ ಗಂಭೀರವಾದ ಆರೋಪ ಇರುವುದರಿಂದ ಬಹಳ ಪಾರದರ್ಶಕವಾಗಿ ವಿವರವಾಗಿ ತನಿಖೆಯಾಗುತ್ತೆ. 

ಮುಳುಗೋರಿಗೆ ಮುಳ್ಳುಕಡ್ಡಿ ಆಧಾರ ಎಂಬಂತೆ ಕಾಂಗ್ರೆಸ್‌ನವರಿಗೆ ಯಾವ ವಿಷಯ ಇರಲಿಲ್ಲ. ಈಗ ಸಂತೋಷ್ ಪಾಟೀಲ್ ವಿಷಯವನ್ನು ಇಟ್ಟುಕೊಂಡು ಸಾವಿನ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇನ್ನು ಕೆ.ಎಸ್.ಈಶ್ವರಪ್ಪನವರ ರಾಜೀನಾಮೆ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೌನ ಮುರಿದಿದ್ದಾರೆ. ಈ ಪ್ರಕರಣದಲ್ಲಿ ಈಶ್ವರಪ್ಪನವರು ತಪ್ಪು ಮಾಡಿಲ್ಲ. ಅನಿವಾರ್ಯವಾಗಿ ರಾಜೀನಾಮೆ ನೀಡುವ ಸ್ಥಿತಿ ಬಂದಿದೆ. ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಂಡರೆ, ಈಶ್ವರಪ್ಪನವರು ನಿರಪರಾಧಿ ಎಂಬುದು ಸಾಬೀತಾಗಲಿದೆ. ಆನಂತರ ಅವರು ಮತ್ತೆ ಸಂಪುಟ ಸೇರಲು ಯಾವುದೇ ಅಡ್ಡಿಯಿರುವುದಿಲ್ಲ. ನಿರ್ದೋಷಿಯೆಂದು ಸಾಬೀತಾಗಿ ಪ್ರಕರಣದಿಂದ ಹೊರಬಂದು ಅವರು ಮತ್ತೆ ಸಂಪುಟ ಸೇರುತ್ತಾರೆ ಎನ್ನುವ ವಿಶ್ವಾಸವಿದೆ ಅಂತಾ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ರಾಜೀನಾಮೆ ನಮ್ಮ ಬೇಡಿಕೆ ಅಲ್ಲ, ಬಂಧನ ಆಗಬೇಕು: ಡಿಕೆಶಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News