ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ-ಪ್ರಿಯಾಂಕ್ ಖರ್ಗೆ

ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Written by - Zee Kannada News Desk | Last Updated : Nov 25, 2021, 09:09 PM IST
  • ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
 ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ-ಪ್ರಿಯಾಂಕ್ ಖರ್ಗೆ  title=
file photo

ಬೆಂಗಳೂರು: ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತಾಗಿ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ಅವರು "ಹಂಸಲೇಖ ಅವರ ಹೇಳಿಕೆಯ ಮೇಲೆ ದೊಡ್ಡ ಪ್ರಹಸನವನ್ನೇ ಸೃಷ್ಟಿಸಿರುವ ಮನುವಾದಿಗಳು, ಜನರ ಆಹಾರ ಪದ್ದತಿಯ ಸ್ವಾತಂತ್ರ್ಯದ ವಿರೋಧಿಗಳು ಎಂದೆನ್ನಬಹುದು ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಪ್ರಮುಖ ಪ್ರತಿಪಕ್ಷದ ಪಾತ್ರ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲ- ಮಾಜಿ ಸಿಎಂ ಮುಕುಲ್ ಸಂಗ್ಮಾ

"ದಲಿತರ ಮನೆಗೆ ಯಾರೋ ಭೇಟಿ ನೀಡುವುದು ದೊಡ್ಡ ವಿಚಾರವೇ ಅಲ್ಲ.ದಲಿತರನ್ನು ಮೇಲ್ವರ್ಗದ ಮನೆಗಳಿಗೆ ಕರೆಸಿಕೊಂಡು ಅವರ ಮನೆಯ ಅಡುಗೆ ಪಾತ್ರೆ ಬಳಸಿ ಊಟ ಬಡಿಸುವುದು, ದೇವಾಲಯದ ಗರ್ಭಗುಡಿಗೆ ಪ್ರವೇಶ ನೀಡುವುದು ಇಂದಿಗೆ ದೊಡ್ಡ ವಿಚಾರವೇ ಹೌದು.ಅದಕ್ಕೆ ಉದಾಹರಣೆ ದಲಿತ ಸಮುದಾಯದ ಐದು ವರ್ಷದ ಚಿಕ್ಕ ಮಗು ದೇವಾಲಯದ ಒಳ ಹೋಗಿದ್ದಕ್ಕೆ ಆ ಮಗುವಿನ ಪೋಷಕರಿಗೆ ಆ ದೇವಾಲಯದ ಆಡಳಿತ ವರ್ಗ ಶುದ್ದೀಕರಣದ ವೆಚ್ಚವನ್ನ ದಂಡವನ್ನಾಗಿ ವಸೂಲಿ ಮಾಡುವ ಕೆಲಸ ಮಾಡಿದ್ದು, ದಲಿತರು ಮನೆಗೆ ಬಂದರೆ ಶುದ್ದೀಕರಣಕ್ಕೆ ಗೋಮೂತ್ರ ಬಳಸುವುದು.ಈ ಮನುವಾದಿ ಸಂಸ್ಕೃತಿಯ ಬಿಜೆಪಿಯ ನಾಯಕರಿಗೆ ಹಾಗೂ ಸಂಘ ಪರಿವಾರದವರಿಗೆ ದಲಿತರ ಮೇಲೆ ನಿಜವಾದ ಕಾಳಜಿಯಿದ್ದಲ್ಲಿ ಮೊದಲು ಇವುಗಳನ್ನು ನಿಲ್ಲಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!

"ಸಮಾನತೆ ಸ್ಥಾಪಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾರಿಗೆ ತಂದಿರುವ ಸಂವಿಧಾನವನ್ನೇ ಬದಲಾಯಿಸುತ್ತೇವೆ ಅನ್ನುವ ಮಾತುಗಳನ್ನ ನಿಲ್ಲಿಸಲಿ ನೋಡೋಣ.ಬಿಜೆಪಿ ನಾಯಕರು ದಲಿತರ ಮನೆಗೆ ತೆರಳಿ ಹೋಟೆಲ್ ನಿಂದ ಊಟ ತರಿಸಿ ತಿಂದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಸಮಾಜದ ಜನರಲ್ಲಿಯೂ ನಾನೂ ವಿನಂತಿಸಿಕೊಳ್ಳುತ್ತೇನೆ, ಜನರ ಕಣ್ಣಿಗೆ ಮಣ್ಣೆರುಚುವ ಯಾವುದೇ ರಾಜಕೀಯ ನಾಯಕರ ಡೋಂಗಿ ಪ್ರಯತ್ನಗಳಿಗೆ ನಿಮ್ಮ ಮನೆಯನ್ನು ನಾಟಕ ಪ್ರದರ್ಶನ ಮಾಡುವ ಕೇಂದ್ರ ಮಾಡದಿರಿ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿಗರಿಗೆ ನಿಜವಾಗಿಯೂ ದಲಿತರ ಮೇಲೆ ಪ್ರೀತಿಯಿದ್ದರೆ, ಕರ್ನಾಟಕದಲ್ಲಿ ಅವರ ಏಳಿಗೆಗಾಗಿ ಸರ್ಕಾರ ದುಡಿಯುವಂತೆ ನೋಡಿಕೊಳ್ಳಲಿ. ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಲು ಕ್ರಮ ಕೈಗೊಳ್ಳಲಿ, ದಲಿತರ ಮಕ್ಕಳಿಗೆ ಸಮಾನ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿ. ದಲಿತರ ಮನೆಗೆ ಹೋಗಿ ತೋರಿಕೆ ಪ್ರಚಾರ ಮಾಡುವುದರಿಂದ ಸಮಾಜದ ಏಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನ ಅವರು ಮೊದಲು ಅರಿತುಕೊಳ್ಳಲಿ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News