ಬೆಂಗಳೂರು: ಬರಗಾಲದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಹಾಗೂ ಅವುಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಸಂಗತಿ.ಆದರೆ ನಿಮ್ಮಲ್ಲಿ ಕೆಲವೂ ಮಾರ್ಗೋಪಾಯಗಳಿದ್ದಲ್ಲಿ ನೀವು ಇದರಿಂದ ಸುಲಭವಾಗಿ ಪಾರಾಗಬಹುದು.ಅದಕ್ಕಾಗಿ ಇಲ್ಲಿನ 10 ಕ್ರಮಗಳು ಆ ನಿಟ್ಟಿನಲ್ಲಿ ನಿಮಗೆ ಸಹಾಯಕವಾಗಬಹುದು.
ಇದನ್ನೂ ಓದಿ: ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಈ ತರಕಾರಿಗಳ ದರ ಇಳಿಕೆ ಸಾಧ್ಯತೆ!
- ಬೆಳೆ ಬಿತ್ತನೆಯಾದ ಪ್ರದೇಶದಲ್ಲಿ ಬರದಿಂದ ಮೊಳಕೆ ಪ್ರಮಾಣ ಕಡಿಮೆ ಇದ್ದಲ್ಲಿ ಮತ್ತು ಮೊಳಕೆ ಪ್ರಮಾಣ ತೃಪ್ತಿಕರವಾಗಿದ್ದು, ನಂತರದಲ್ಲಿ ತೇವಾಂಶದ ಕೊರತೆಯಿಂದ ಸಸಿಗಳು ಒಣಗಿ ಬೆಳೆಯ ಸಾಂದ್ರತೆ ಕಡಿಮೆಯಾಗಿರುವಲ್ಲಿ ಅಂತರ ತುಂಬುವಿಕೆ (Gap filling) ಮಾಡುವುದು.
- ಬೆಳೆ ಬಿತ್ತನೆಯಾಗದ ಪ್ರದೇಶದಲ್ಲಿ ಮತ್ತು ಬೆಳೆ ಬಿತ್ತನೆಯಾಗಿ ಸಂಪೂರ್ಣ ಹಾನಿಯಾಗಿದ್ದಲ್ಲಿ ಸ್ಥಳೀಯ ಹವಾಮಾನಕ್ಕನುಗುಣವಾಗಿ ಸುಧಾರಿತ ತಳಿಗಳು (ಸ್ಥಳೀಯ/Local), ಬರ ನಿರೋಧಕ/ಸಹಿಷ್ಣತೆ (Drought resistance/tolerance) ಮತ್ತು ಅಲ್ಪಾವಧಿ ತಳಿ (Short duration) ಹಾಗೂ ಪರ್ಯಾಯ ಬೆಳೆಗಳ ವ್ಯವಸ್ಥೆಯನ್ನು ಆಯ್ಕೆ ಮಾಡುವುದು.
- ಕೊಳವೆ ಭಾವಿಯ ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳ್ಳುವುದು.
- ಬರಗಾಲಕ್ಕೆ ಪೂರಕವಾಗಿ ಭೂಮಿಯಲ್ಲಿನ ತೇವಾಂಶವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಿಕೊಳ್ಳುವ ಅಗತ್ಯ ಕ್ರಮಗಳಾದ (Organic/Plastic), Weeding, Inter cultivation, Mixed cropping ಹಾಗೂ ವಿವಿಧ Bunding ನೀರಾವರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
- ಸದೃಢ ಮತ್ತು ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆಯನ್ನು ಸುಧಾರಿತ ವಿಧಾನಗಳಾದ Protray ಗಳಲ್ಲಿ (ಸೂಕ್ತ Media ಗಳಾದ – ಕೊಕೊ ಪೀಟ್, ಮರದ ಹೊಟ್ಟು, ಕಾಂಪೊಸ್ಟ್/ಎರೆಹುಳು ಗೊಬ್ಬರ, ಜೈವಿಕ ಗೊಬ್ಬರಗಳ ಮಿಶ್ರಣ ಇತ್ಯಾದಿ ಉಪಯೋಗಿಸುವುದರೊಂದಿಗೆ) ನೆರಳುಪರದೆ ಮನೆ, Small tunnels, ಪಾಲಿಹೌಸ್ಗಳಡಿಯಲ್ಲಿ ಸಸಿಗಳನ್ನು ಬೆಳೆಸಿದಲ್ಲಿ ಉತ್ತಮ ಗುಣಮಟ್ಟದ ಸದೃಢ ಸಸಿಗಳನ್ನು ಬಳಸುವುದು.
- ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಸಾರಜನಕದಂತಹ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಬರ ಪರಿಸ್ಥಿಗೆ ಹೊಂದಿಕೊಳ್ಳಲು ಪೊಟಾಶಿಯಂ, ಬೋರಾನ್, ಸಿಲಿಕಾನ್ ಮುಂತಾದ ಪೋಶಕಾಂಶಗಳನ್ನು Foliar spray ಮೂಲಕ ಒದಗಿಸುವುದು.
- ಹೆಚ್ಚಿನ ತಾಪಮಾನ ಮತ್ತು ಶುಷ್ಕ ಗಾಳಿಯ ದುಷ್ಪರಿಣಾಮವನ್ನು ತಗ್ಗಿಸಲು ಮೆಕ್ಕೆಜೋಳ/ಜೋಳದಂತಹ ಎತ್ತರ ಬೆಳೆಗಳನ್ನು ಬೆಳೆ ಸುತ್ತ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಜಮೀನಿನ ಗಡಿಯುದ್ದಕ್ಕೂ ಗಾಳಿ ತಡೆ (Wind break) ಮರಗಳನ್ನು ನೆಡುವುದು.
- ಹೆಚ್ಚಿನ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಆದ್ರ್ರತೆಯನ್ನು ಸುಧಾರಿಸಲು ಹಾಗೂ ಕಡಿಮೆ ನೀರು ಲಭ್ಯವಿರುವ ಸಂದರ್ಭಗಳಲ್ಲಿ ಪಾಲಿಹೌಸ್ ಮತ್ತು ನೆರಳುಪರದೆಗಳಂತ ಸಂರಕ್ಷಿತ ಘಟಕಗಳಡಿ ಸೂಕ್ತ ತರಕಾರಿ/ಹೂ ಬೆಳೆಗಳನ್ನು ಬೆಳೆಯುವುದು.
- ಮಣ್ಣಿನ ತೇವಾಂಶದ ಕೊರತೆ ಇದ್ದಲ್ಲಿ ಸಸಿಗಳ ನಾಟಿ ಮತ್ತು ರಸಗೊಬ್ಬರ ಹಾಕುವುದನ್ನು ಮುಂದೂಡುವುದು ಹಾಗೂ ಸೂಕ್ತ ತರಕಾರಿ /ಹೂ ಬೆಳೆಗಳನ್ನು ಬೆಳೆಯುವುದು.
- ಬರ ನಿರೋಧಕ ಬೆಳೆಗಳಾದ ಬೆಂಡೆ, ಮೆಣಸಿನಕಾಯಿ, ಚವಳಿಕಾಯಿ, ಅಲಸಂದೆ, ಅವರೆಕಾಯಿ, ಬೀನ್ಸ್ ಮತ್ತು ಅಲ್ಫಾವಧಿ ಬೆಳೆಗಳಾದ ಸೊಪ್ಪು, ತರಕಾರಿಗಳನ್ನು ಬೆಳೆಯುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236 ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬಹುದು.