ಬೆಂಗಳೂರು: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿಯಲ್ಲಿ ನಡೆಯುತ್ತಿರುವ ವಿವಿಧ ವೃತ್ತಿಗಳಿಗಾಗಿ 2021-22ನೇ ಸಾಲಿನಲ್ಲಿ ತರಬೇತಿದಾರರಿಗೆ ತರಬೇತಿಯನ್ನು ನೀಡಲು ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಎಲೆಕ್ಟಿಷಿಯನ್ ಹುದ್ದೆಗೆ ಐಟಿಐ/ಎಟಿಎಸ್/ಡಿಇಇ/ಬಿಇ(ಎಲೆಕ್ತ್ರಿಕಲ್), ಫಿಟ್ಟರ್ ಹುದ್ದೆಗೆ ಐಟಿಐ/ಎಟಿಎಸ್/ಡಿಇಇ/ಬಿಇ(ಮೆಕ್ಯಾನಿಕಲ್), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹುದ್ದೆಗೆ(2) ಐಟಿಐ/ಎಟಿಎಸ್ ಡಿಇ&ಸಿ, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಹುದ್ದೆಗೆ(2) ಐಟಿಐ/ಎಟಿಎಸ್/ಡಿಪ್ಲೊಮಾ ಆಟೋಮೊಬೈಲ್/ಡಿಎಂಇ, ವರ್ಕ್ಶಾಪ್ ಕ್ಯಾಲ್ಕುಲೇಷನ್ ಹುದ್ದೆಗೆ ಡಿಎಂಇ/ಬಿಇ ವಿದ್ಯಾರ್ಹತೆ ಹೊಂದಿರುವ ಕನಿಷ್ಟ 2 ವರ್ಷಗಳ ಅನುಭವವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಶಬರಿ ಮಲೆಯ ಪವಿತ್ರ ತೀರ್ಥಕ್ಕೆ ಅವಮಾನ? ಘಟನೆಯ ನಂತರ ಸಚಿವರು ನೀಡಿದ ಸ್ಪಷ್ಟನೆ ಇದು
ಅರ್ಜಿ ಸಲ್ಲಿಸಲು ನವೆಂಬರ್ 25 ರವರೆಗೆ ಅವಧಿ ವಿಸ್ತರಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ ಮೊ.ಸಂ: 9448259832 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.