ಬೆಂಗಳೂರು: ಬಿಎಂಟಿಸಿ ಆಯ್ತು, ಇದೀಗ ಕೆಎಸ್ಆರ್ಟಿಸಿ ಕೂಡ ಇಕೋ ಫ್ರೆಂಡ್ಲಿ ಬಸ್ಗಳನ್ನ ರಸ್ತೆಗಳಿಸಲು ಪ್ಲ್ಯಾನ್ ರೂಪಿಸಿದೆ.ಮಾಲಿನ್ಯವನ್ನು ಝೀರೋ ಮಾಡ್ತೀವಿ ಅಂತ ಹೊರಟಿದೆ. ಶೀಘ್ರದಲ್ಲೇ ಕೆಎಸ್ ಆರ್ ಟಿಸಿ ಗೂ ದುಬಾರಿ ಬಸ್ ಗಳು ಲಗ್ಗೆ ಇಡಲಿದ್ದು, ಬೆಂಗಳೂರಿನಿಂದ ಹಲವು ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿವೆ.
ಬಿಎಂಟಿಸಿಯಂತೆ KSRTC ಕೂಡ ಎಲೆಕ್ಟ್ರಿಕ್ ಬಸ್ ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕರೆದು 50 ಬಸ್ ಗಳಿಗೆ ಆರ್ಡರ್ ಮಾಡಿದೆ. ಈ ಮೂಲಕ ಕೆಎಸ್ ಆರ್ ಟಿಸಿ ನಿಗಮ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ನಡೆಸಲಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಇಕೋ ಫ್ರೆಂಡ್ಲಿ ಬಸ್ ಗಳ ಸಂಚಾರ;
ಬೆಂಗಳೂರು ಟು ಮೈಸೂರು,
ಬೆಂಗಳೂರು ಟು ಹಾಸನ
ಬೆಂಗಳೂರು ಟು ಕೋಲಾರ
ಬೆಂಗಳೂರು ಟು ತುಮಕೂರು
ಬೆಂಗಳೂರು ಟು ಶಿವಮೊಗ್ಗ
ಮೊದಲಾರ್ಧದಲ್ಲಿ ಈ ಮೇಲಿನ ಜಿಲ್ಲೆಗಳಿಗೆ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತದೆ.200 ಕಿ.ಮೀ ವ್ಯಾಪ್ತಿಯಲ್ಲಿನ ಪ್ರಮುಖ ಊರುಗಳಿಗೂ ಎಲೆಕ್ಟ್ರಿಕ್ ಬಸ್ ಸೇವೆ ಇರಲಿದೆ ಎಂದು ನಿಗಮ ಮಾಹಿತಿ ನೀಡಿದೆ.
ಖಾಸಗೀ ಚಾಲಕರಿಂದ ಬಸ್ ಸಂಚಾರ;
ಎಲೆಕ್ಟ್ರಿಕ್ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆ. ಹೀಗಾಗಿ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿಸಲು ಕೇಂದ್ರ ಅನುದಾನ ನೀಡಿದೆ. ಎಲೆಕ್ಟ್ರಿಕ್ ಬಸ್ ಗಳಿಗೆ ಖಾಸಗಿ ಕಂಪನಿಯ ಚಾಲಕರನ್ನ ನೇಮಕ ಮಾಡಿಕೊಂಡು ಉಳಿದ ಸಿಬ್ಬಂದಿಗೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ತರಬೇತಿ ನೀಡಿಲಾಗುತ್ತದೆ. ಹಾಗೂ ಬಸ್ ಚಾರ್ಜಿಂಗ್ ಗಾಗಿ ಪ್ರಮುಖ ಡಿಪೋಗಳಲ್ಲಿ ಬಸ್‌ಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಿ, ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
6 ಗಂಟೆ ಚಾರ್ಜಿಂಗ್ 250ಕಿ.ಮೀ ಸಂಚಾರ;
ವಿದ್ಯುತ್ ಚಾಲಿತ ಬಸ್‌ಗಳಿಂದ ಶಬ್ದವೂ ಇಲ್ಲ, ಹೊಗೆಯೂ ಇರುವುದಿಲ್ಲ. ಹಾಗಾಗಿ ಇದು ಶಬ್ದಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. 6 ಗಂಟೆ ಜಾರ್ಜ್ ಮಾಡಿದರೆ 250 ಕಿ. ಮೀಟರ್ ಸಂಚಾರ ಮಾಡಲಿದೆ ಈ ಬಸ್. ಬಸ್ ನಲ್ಲಿ ಒಟ್ಟು 30 ಆಸನಗಳಿದ್ದು, ಪ್ರತಿ ಕಿ. ಮೀಟರ್ ಗೆ 1.2 ಕಿಲೋ ವ್ಯಾಟ್ ನಷ್ಟು ವಿದ್ಯುತ್ ಬಳಕೆಯಾಗ್ತದೆ. ಇನ್ನೂ ಕೆಲ ದಿನಗಳಲ್ಲಿ ನಿಗಮಕ್ಕೆ ಎಲೆಕ್ಟ್ರಿಕ್ ಬಸ್ಗಳು ಬರಲಿದ್ದು ಸಮಸ್ಯೆ ಆಗದಂತೆ ಬಸ್ ಕಾರ್ಯಾಚರಣೆ ಮಾಡಲಾಗ್ತದೆ ಅಂತಾರೆ ಕೆಎಸ್ಆರ್ಟಿಸಿ ಅಧಿಕಾರಿಗಳು.
ಒಟ್ಟಾರೆ.. ಬಿಎಂಟಿಸಿ ಬೆನ್ನಲ್ಲೇ ಕೆಎಸ್ಆರ್ಟಿಸಿಯೂ ಪರಿಸರ ಹಾನಿ ಎಂಬ ನೆಪಕ್ಕೆ ದುಬಾರಿ ಬೆಲೆಯ ಬಸ್ ಗಳ ಖರೀದಿಗೆ ಕೈಹಾಕಿದೆ. ಈಗಾಗಲೇ ಬಿಎಂಟಿಸಿ NTPCL ಕಂಪನಿಯಿಂದ ಬಸ್ ಗಳಿಂದ ನಷ್ಟ ಅನುಭವಿಸಿದೆ. ಎಲೆಕ್ಟ್ರಿಕ್ ಬಸ್ ಗಳ ಖರೀದಿ ವಿಚಾರದಲ್ಲಿ ಅವಿವೇಕತನದಿಂದಲೊ ಅಥವಾ ಕಮಿಷನ್ ಆಸೆಯಿಂದಲೋ ಬಸ್ ಖರೀದಿ ಆಗ್ತಿವೆ ಅನ್ನೋ ಆರೋಪವು ಕೇಳಿ ಬರ್ತಿದೆ. ಈ ಮಧ್ಯೆ ಕೆಎಸ್ಆರ್ಟಿಸಿಗೆ ಎಲೆಕ್ಟ್ರಿಕ್ ಬಸ್ ಗಳ ವರ ಆಗುತ್ತಾ ಶಾಪಕ್ಕೆ ತುತ್ತಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ