ಸಿಡಿ ವಿಚಾರವಾಗಿ ರಮೇಶ್ ಜಾರಕಿಹೊಳಿಗೆ ಈಶ್ವರಪ್ಪ ಬೆಂಬಲ

ಸಿಡಿ ವಿಚಾರವನ್ನು  ಸಿಬಿಐಗೆ ವಹಿಸಲಿ, ತನಿಖೆಯಿಂದ ಎಲ್ಲವೂ ಹೊರಬರಲಿ ಎಂದು ಹೇಳುವ ಮೂಲಕ   ರಮೇಶ್ ಜಾರಕಿಹೊಳಿಗೆ ಬೆಂಬಲವಾಗಿ ನಿಂತಿದ್ದಾರೆ.

Last Updated : Feb 3, 2023, 02:35 PM IST
  • ಸಿಡಿ ವಿಚಾರವಾಗಿ ರಮೇಶ್ ಜಾರಕಿಹೊಳಿಗೆ ಈಶ್ವರಪ್ಪ ಬೆಂಬಲ
  • ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಗೆ ಮನವಿ ಮಾಡಿದ್ದೆನೆ
  • ಗುಜರಾತ್ ಮಾಡೆಲ್ ಮೂಲಕ ತಿರುಗೇಟು
 ಸಿಡಿ ವಿಚಾರವಾಗಿ  ರಮೇಶ್ ಜಾರಕಿಹೊಳಿಗೆ  ಈಶ್ವರಪ್ಪ ಬೆಂಬಲ title=

ಬೆಂಗಳೂರು : ರಮೇಶ್ ಜಾರಕಿಹೊಳಿ  ಸಿಡಿ ವಿಚಾರವಾಗಿ ಮಾಧ್ಯಮದ ಮುಂದೆ    ಮಾತಾನಾಡಿದ   ಮಾಜಿ ಸಚಿವ ಈಶ್ವರಪ್ಪ ,  ಸಿಡಿ ವಿಚಾರ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಸಿಡಿ ವಿಚಾರವನ್ನು  ಸಿಬಿಐಗೆ ವಹಿಸಲಿ, ತನಿಖೆಯಿಂದ ಎಲ್ಲವೂ ಹೊರಬರಲಿ ಎಂದು ಹೇಳುವ ಮೂಲಕ   ರಮೇಶ್ ಜಾರಕಿಹೊಳಿಗೆ ಬೆಂಬಲವಾಗಿ ನಿಂತಿದ್ದಾರೆ.

 ಈ ವಿಚಾರವಾಗಿ ಸಿಎಂ, ಅಮಿತ್ ಷಾ ಅವರನ್ನ ಭೇಟಿ ಮಾಡಿ ಈಗಾಗಲೇ ಮಾಹಿತಿ ಕೊಟ್ಟಿದ್ದಾರೆಂದು   ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಈಶ್ವರಪ್ಪ  ಆತ್ಮೀಯ ಗುತ್ತಿಗೆದಾರನಾದ   ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ 
ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದರೂ  ನನಗೆ  ಕ್ಲಿನ್ ಚಿಟ್ ಸಿಕ್ಕಿದೆ.

ಇದನ್ನೂ ಓದಿ: 'ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.'

ಈ ಹಿನ್ನಲೆ   ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಗೆ ಮನವಿ ಮಾಡಿದ್ದೆನೆ .ಮಾಡ್ತೀನಿ ಅಂತ ಭರವಸೆ ನೀಡಿದ್ರು.ಆದ್ರೆ ಈಗ ಅವರಿಗೆ ಏನೇನು ಸಮಸ್ಯೆ ಇದೀಯೋ ಅನ್ನೋದು ಗೊತ್ತಿಲ್ಲ  . ಸಚಿವ ಸ್ಥಾನ ನನಗೆ ಬೇಡ ಎಂದೇ ಹೇಳಿದ್ದೇನೆ  ಈಶ್ವರಪ್ಪ ತಿಳಿಸಿದರು. 

ಇದನ್ನೂ ಓದಿ: ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ

ಚುನಾವಣೆ ಕುರಿತಂತೆ  ಬಗ್ಗೆ ಪ್ರತಿಕ್ರಿಸಿದ    ಈಶ್ವರಪ್ಪ,    ಗುಜರಾತ್ ಗೆದ್ದ ಬಳಿಕ ಗುಜರಾತ್ ಮಾಡೆಲ್  ಹೇಗಾಯಿತೋ ಹಾಗೆಯೇ   ನಾವು ಕರ್ನಾಟಕ ಗೆದ್ದ ಬಳಿಕ ಕರ್ನಾಟಕ ಮಾಡೆಲ್ ಎಂದು ಹೇಳ್ತೀವಿ. ಯಾವ ರೀತಿ ಗೆದ್ವಿ,ಯಾವ ರೀತಿ ಸರ್ಕಾರ ಮಾಡ್ತೀವಿ ಅಂತ   ಹೇಳುವ ಕಾತರದಲ್ಲಿ ಇದ್ದೀವಿ. ಮುಂದೆ ಬರುವ ರಾಜ್ಯಗಳ ಚುನಾವಣೆಗೆ ಬಿಜೆಪಿ ಗೆಲುವು  ಮಾದರಿ ಆಗುತ್ತೆ ಎಂದು ಗುಜರಾತ್ ಮಾಡೆಲ್  ಮೂಲಕ ತಿರುಗೇಟು ಕೊಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News