Manglore : ಈಶ್ವರಪ್ಪನವರು ಭಾಷಣ ಮಾಡುತ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಝಾನ್ ಕೇಳಿಬಂತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಅವರು, ಎಲ್ಲಿ ಹೋದ್ರು ಇದೊಂದು ತಲೆನೋವು ನನಗೆ, ಸುಪ್ರಿಂ ಕೋರ್ಟ್ ಆದೇಶ ಇದೆ ಇವತ್ತಲ್ಲಾ ನಾಳೆ ಇದು ಖತಂ ಆಗುತ್ತೆ ಅನುಮಾನ ಬೇಡ ಎಲ್ಲಾ ಧರ್ಮಕ್ಕೂ ಗೌರವ ಕೊಡಿ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಪ್ರಶ್ನಿಸಿದರು.
ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳಲಾಗುತ್ತದೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂತಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು ಎಂದು ಆಝಾನ್ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ-ದೇಶಕ್ಕೆ ಮೋದಿಯವರು ಆಪತ್ಬಾಂಧವ; ಸಿ ಎಂ ಬೊಮ್ಮಾಯಿ
ದೇಶದ ಪ್ರತಿಯೋಂದು ಕ್ಷೇತ್ರದಲ್ಲಿ ಅಭಿವೃದ್ದಿ ಆಗುತ್ತಿದೆ. ಪ್ರಧಾನಿ ಮೋದಿ ಮಂಡ್ಯದಲ್ಲಿ ಬಂದು ಮೈಸೂರು - ಬೆಂಗಳೂರು ವಿಶೇಷ ರಸ್ತೆಯನ್ನ ಉದ್ಘಾಟನೆ ಮಾಡಿದ್ದಾರೆ. ಇಡೀ ರಾಜ್ಯ ಸಂತೋಷ ಪಡುತ್ತಿದೆ 950 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರೆ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಿದ್ದರಾಮಯ್ಯ ಹೇಳ್ತಾರೆ ಇದು ನಮ್ಮ ಕೂಸು ಅಂತ, ಬಿಜೆಪಿ ಸರಕಾರ ಮಾಡಿದ ಪ್ರತಿಯೊಂದು ಅಭಿವೃದ್ಧಿ ಕೆಲಸ ತಾವೇ ಮಾಡ್ಡಿದ್ದು ಅಂತ ಸಿದ್ದರಾಮಯ್ಯ ಹೇಳ್ತಾನೆ, ನಿಮ್ಮ ಮಕ್ಕಳು ನಿಮ್ಮ ಕೂಸು ಯಾರ್ದೋ ಮಕ್ಕಳು ನಿಮ್ಮ ಕೂಸು ಆಗಕ್ಕೆ ಆಗಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ-ಹೆಂಡತಿ ಜಾಸ್ತಿ ನಿದ್ದೆ ಮಾಡುತ್ತಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟ ಪತಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.