‘2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ’

ಕೋಟಿ ಕೋಟಿ ಹಣ ಲೂಟಿ ಮಾಡಲು ಹೊಂಚು ಹಾಕಿ ಸ್ಟೀಲ್ ಬ್ರಿಡ್ಜ್ ಮಾಡಲು ಹೋರಟವರಿಂದ, ಬೆಂಗಳೂರ ಗತ ವೈಭವ ತರಲು ಸಾಧ್ಯವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Apr 5, 2022, 06:20 PM IST
  • ಡಿಕೆಶಿಯವರೇ ಮಾಜಿ ಸಚಿವ ಕೆ.ಜೆ‌.ಜಾರ್ಜ್ BBMPಗೆ ಬಾಕಿ‌ ಉಳಿಸಿಕೊಂಡಿದ್ದ ತೆರಿಗೆ ಮೊತ್ತ ಎಷ್ಟು ಗೊತ್ತೇ?
  • ಗ್ರೀನ್ ಬೆಲ್ಟ್ ಪರಿಷ್ಕರಣೆ ಸಂದರ್ಭದಲ್ಲಿ ನಡೆದ ಗೋಲ್ ಮಾಲ್ ಕೂಡ #ಕಾಂಗ್ರೆಸ್‌ಗತವೈಭವ ದ ಭಾಗವೇ?
  • ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಗತವೈಭವದ ಬಗ್ಗೆ ಪಾಠ ಬೇಕಾಗಿಲ್ಲವೆಂದು ಟೀಕಿಸಿದ ಬಿಜೆಪಿ
‘2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ’ title=
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ(Vidhan Sabha Elections 2023)ಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲವೆಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ(BJP) ಟೀಕಾಪ್ರಹಾರ ನಡೆಸಿದೆ. #ಕಾಂಗ್ರೆಸ್‌ಗತವೈಭವ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸೋಮವಾರ ಸರಣಿ ಟ್ವೀಟ್ ಮಾಡಿದೆ.    

‘ಬೆಂಗಳೂರಿನ ಗತವೈಭವದ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರೇ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಟೆಂಡರ್ ಶ್ಯೂರ್ ರಸ್ತೆಯ‌ ಹಗರಣ ನೆನಪಿಸಬೇಕೇ? ಚಂದ್ರಯಾನ ಯೋಜನೆಗಿಂತಲೂ ಹೆಚ್ಚಿನ ಹಣವನ್ನು ಮೈಸೂರು ರಸ್ತೆ‌ ನಿರ್ಮಾಣಕ್ಕೆ ಬಳಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲವೆಂದು ಬಿಜೆಪಿ ಟೀಕಿಸಿದೆ.

‘ಡಿಕೆಶಿಯವರೇ ಮಾಜಿ ಸಚಿವ ಕೆ.ಜೆ‌.ಜಾರ್ಜ್(KJ George) ಬಿಬಿಎಂಪಿಗೆ ಬಾಕಿ‌ ಉಳಿಸಿಕೊಂಡಿದ್ದ ತೆರಿಗೆ ಮೊತ್ತ ಎಷ್ಟು ಗೊತ್ತೇ? ಅದನ್ನು ಸಕಾಲದಲ್ಲಿ ಪಾವತಿಸಿದ್ದರೆ ಬೆಂಗಳೂರಿನ ಗತವೈಭವ ಸ್ಥಾಪನೆಗೆ ಅನುಕೂಲವಾಗುತ್ತಿತ್ತಲ್ಲವೇ? ಗ್ರೀನ್ ಬೆಲ್ಟ್ ಪರಿಷ್ಕರಣೆ ಸಂದರ್ಭದಲ್ಲಿ ನಡೆದ ಗೋಲ್ ಮಾಲ್ ಕೂಡ #ಕಾಂಗ್ರೆಸ್‌ಗತವೈಭವ ದ ಭಾಗವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: "ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ"

‘ಜನರ ಆದೇಶ ಇಲ್ಲದಿದ್ದರೂ ಬಿಬಿಎಂಪಿ(BBMP) ಕೌನ್ಸಿಲ್‌ನಲ್ಲಿ ಹಿಂಬಾಗಿಲ ಮೂಲಕ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು, ಮೇಯರ್ ಉಪಮೇಯರ್ ಸ್ಥಾನದ ಗೌರವಕ್ಕೆ ಚ್ಯುತಿ ತಂದ ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಗತವೈಭವದ ಬಗ್ಗೆ ಪಾಠ ಬೇಕಾಗಿಲ್ಲ’ವೆಂದು ಬಿಜೆಪಿ ಕುಟುಕಿದೆ.

‘ಬೆಂಗಳೂರಿನ ಮತದಾರರು #ಕಾಂಗ್ರೆಸ್‌ಗತವೈಭವ ನೋಡಿಯೇ ಉಪಚುನಾವಣೆ(By-election)ಯ 5 ವಿಧಾನಸಭಾ ಕ್ಷೇತ್ರದಲ್ಲಿ, 4ರಲ್ಲಿ ಬಿಜೆಪಿ ಗೆಲ್ಲಿಸಿದ್ದರು. ಮರೆತು ಹೋಗಿದ್ದರೆ ಒಮ್ಮೆ ನೆನಪಿಸಿಕೊಳ್ಳಿ. 2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ’ವೆಂದು ಬಿಜೆಪಿ ಕುಟುಕಿದೆ.

‘ಡಿಕೆಶಿ‌ಯವರೇ ದಲಿತ  ಮುಖ್ಯಮಂತ್ರಿ ಇರಲಿ ಬಿಡಿ, ಕಡೇ ಪಕ್ಷ ನಿಮ್ಮದೇ ಪಕ್ಷದ ಚಿಹ್ನೆಯಲ್ಲಿ ಗೆದ್ದ ಹಿರಿಯ ಶಾಸಕ, ದಲಿತ ಸಮುದಾಯದ ಶಾಸಕರ ಮನೆಗೆ ಬೆಂಕಿ ಬಿದ್ದಾಗ, ನಿಮ್ಮ ಪಕ್ಷದ ನೇತಾರರು ನಡೆಸಿಕೊಂಡಿದ್ದ ರೀತಿಯು #ಕಾಂಗ್ರೆಸ್‌ಗತವೈಭವವನ್ನು ನೆನಪಿಸುತ್ತದೆ’ ಅಂತಾ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಬೆಂಡೆತ್ತಿದ ಎಚ್.ಡಿ.ಕುಮಾರಸ್ವಾಮಿ

‘ಉದ್ಯಾನನಗರಿ ಬೆಂಗಳೂರನ್ನು #GarbageCity ಮಾಡಿದವರಿಂದ, ವೈಟ್ ಟಾಪಿಂಗ್(White Tapping) ರಸ್ತೆ ಮಾಡಿ, ರಸ್ತೆ ಮೇಲೆ ನೀರು ನಿಲ್ಲುವಂತೆ ಮಾಡಿರುವವರಿಂದ, ಕೋಟಿ ಕೋಟಿ ಹಣ ಲೂಟಿ ಮಾಡಲು ಹೊಂಚು ಹಾಕಿ ಸ್ಟೀಲ್ ಬ್ರಿಡ್ಜ್ ಮಾಡಲು ಹೋರಟವರಿಂದ, ಬೆಂಗಳೂರ ಗತ ವೈಭವ ತರಲು ಸಾಧ್ಯವೇ? ತಪ್ಪು ಮಾಹಿತಿ ನೀಡಲು ಇದೇನು ಡಿಜಿಟಲ್ ಅಭಿಯಾನವಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

‘ಡಿಕೆಶಿ(DK Shivakumar)ಯವರೇ ರಾಜಾಜಿನಗರದಲ್ಲಿ ನಿರ್ಮಿತವಾಗಿರುವ ಲೂಲು ಶಾಪಿಂಗ್ ಮಾಲ್‌ನಲ್ಲಿ‌ ನಿಮ್ಮದೇ ಸಿಂಹಪಾಲು ಅಲ್ಲವೇ? ಪಾದಚಾರಿ ಮಾರ್ಗವನ್ನು ಮಾಲ್‌ನ ಪ್ರವೇಶಕ್ಕಾಗಿ ಪ್ರತ್ಯೇಕ ಅಂಡರ್ ಪಾಸ್ ಆಗಿ‌ ಪರಿವರ್ತಿಸಿದ್ದು ಯಾವ ವೈಭವ? ಕೆಂಪೇಗೌಡರು ಕಟ್ಟಿದ ನಾಡಿನಲ್ಲಿ ಅಕ್ರಮವೆಸಗಿದ್ದೇ ನಿಮ್ಮ ಗತವೈಭವವೇ?’ ಎಂದು ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News