ಸಿಎಂ ಹಾಗೂ ಯತೀಂದ್ರಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ

Union Minister Prahlada Joshi: ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಅಮಿತ್ ಶಾ ಅವರನ್ನು ರೌಡಿ ಎಂದಿರುವ ಯತಿಂದ್ರ ವಿರುದ್ಧ ಕಿಡಿ ಕಾರಿದರು.

Written by - Prashobh Devanahalli | Edited by - Bhavishya Shetty | Last Updated : Mar 30, 2024, 07:51 PM IST
    • ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲವೇ ತಮಗೆ?
    • ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ
    • ಅಮಿತ್ ಶಾ ಅವರನ್ನು ರೌಡಿ ಎಂದಿರುವ ಯತಿಂದ್ರ ವಿರುದ್ಧ ಕಿಡಿ ಕಾರಿದರು.
ಸಿಎಂ ಹಾಗೂ ಯತೀಂದ್ರಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ title=
File Photo

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಅವರೇ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲವೇ ತಮಗೆ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಅಮಿತ್ ಶಾ ಅವರನ್ನು ರೌಡಿ ಎಂದಿರುವ ಯತಿಂದ್ರ ವಿರುದ್ಧ ಕಿಡಿ ಕಾರಿದರು.

ಇದನ್ನೂ ಓದಿ: ಉದ್ದ ಮತ್ತು ದಪ್ಪವಾದ ಕೂದಲಿಗಾಗಿ ಈ ಹಾಲಿನ ಮಾಸ್ಕ್‌ ಬಳಸಿ.! ಕಡಿಮೆ ಖರ್ಚು, ಆರೋಗ್ಯಕ್ಕೂ ಒಳ್ಳೆಯದು

ಅಮಿತ್ ಶಾ ಅವರನ್ನು ಇವರ ಸರ್ಕಾರ ಫೇಕ್ ಎನ್ಕೌಂಟರ್ ಪ್ರಕರಣದಲ್ಲಿ ಸಿಲುಕಿಸಿತ್ತು. ಟ್ರಯಲ್ ಕೋರ್ಟ್, ಹೈ ಕೋರ್ಟ್, ಕೊನೆಗೆ ಸುಪ್ರೀಂ ಕೋರ್ಟ್ ಹೀಗೆ ನ್ಯಾಯಾಲಯ ಅವರನ್ನು ಆ ಪ್ರಕರಣದಿಂದ ಖುಲಾಸೆಗೊಳಿಸಿದೆ. ಹಾಗಿದ್ದರೂ  ಅಮಿತ್ ಶಾ ಬಗ್ಗೆ ನಾಲಿಗೆ ಹರಿ ಬಿಡುತ್ತಿದ್ದಾರೆ. ದೇಶದ ನ್ಯಾಯಾಂಗದ ಮೇಲೆ ನಂಬಿಕೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಜೋಶಿ ಆರೋಪಿಸಿದರು.

ಕೋರ್ಟ್ ತೀರ್ಪು ಕೊಟ್ಟ ಮೇಲೂ ಒಬ್ಬ ಮುಖ್ಯಮಂತ್ರಿ ಮಗನಾಗಿ, ಒಮ್ಮೆ ಶಾಸಕ ಆದವರು ಹೀಗೆ ಬಾಲಿಶ ಹೇಳಿಕೆ ನೀಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನ್ಯಾಯಾಂಗವನ್ನು ಮೀರಿ ಸರ್ಟಿಫಿಕೆಟ್ ಕೊಡುವ ಮಟ್ಟಕ್ಕೆ ಬಂದಿದ್ದಾರೆ ಯತಿಂದ್ರ ಅವರು ಎಂದು ಜೋಶಿ ಖಂಡಿಸಿದರು.

HDK ಆರೋಗ್ಯ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಸರಿಯಲ್ಲ:

HDK ಹಾರ್ಟ್ ಆಪರೇಷನ್ ವಿಚಾರದಲ್ಲಿ ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡೋದು ಸರಿಯಲ್ಲ. HDK ಅಲ್ಲ, ಯಾವುದೇ ಪಕ್ಷದವರ ಆರೋಗ್ಯ ವಿಚಾರದಲ್ಲಿ ಸಹಾನುಭೂತಿ ತೋರಬೇಕು. ರಾಜಕೀಯ ಸೌಜನ್ಯ ತೋರಬೇಕೆ ಹೊರತು ಕ್ಷುಲ್ಲಕವಾಗಿ ವರ್ತಿಸುವುದಲ್ಲ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಒಂದೇ ವಾರದಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಿ ರೇಷ್ಮೆ ಎಳೆಯಂಥಾಗುತ್ತೆ: ಮೊಟ್ಟೆಗೆ ಈ 2 ವಸ್ತು ಬೆರೆಸಿ ಹಚ್ಚಿ ಸಾಕು..!

ಚೆನ್ನೈನಂತಹ ಆಸ್ಪತ್ರೆಯಲ್ಲಿ ಯಾರಾದರೂ ಫೇಕ್ ಆಪರೇಷನ್ ಮಾಡಿಸಿಕೊಂಡು ಬರಲು ಸಾಧ್ಯವೇ? ಮೆಡಿಕಲ್ ಸೈನ್ಸ್ ತುಂಬಾ ಅಡ್ವಾನ್ಸ್ ಆಗಿದೆ ಎಂಬ ಅರಿವು ಇವರಿಗಿಲ್ಲವೇ? ಯಾವ ಕಾಲದಲ್ಲಿ ಇದ್ದಾರಿವರು? ಅರೋಗ್ಯದ ವಿಷಯದಲ್ಲಿ ಮಾನವೀಯತೆ ಮರೆತು ವರ್ತಿಸುವುದು ಸರಿಯಲ್ಲ ಎಂದು ಸಚಿವ ಜೋಶಿ ಆಕ್ಷೇಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News