ಹಾವೇರಿ : ಕಾಂಗ್ರೆಸ್‌ ಕಾರ್ಯಕರ್ತನಿಗೆ ಉಪಮುಖ್ಯಂತ್ರಿ ಡಿ.ಕೆ ಶಿವಕುಮಾರ್‌ ಕಪಾಳಕ್ಕೆ ಹೊಡೆದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಡಿ.ಕೆ ಶಿವಕುಮಾರ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಿನ್ನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣಕ್ಕೆ ಆಗಮಿಸಿದ್ದರು. 

ಕಳೆದ ರಾತ್ರಿ ಸವಣೂರು ಪಟ್ಟಣದಲ್ಲಿ ಡಿ.ಕೆ ಶಿವಕುಮಾರ್‌ ಪ್ರಚಾರಕ್ಕೆ ಬಂದಿದ್ದರು. ಕೈ ಅಭ್ಯರ್ಥಿ ‌ವಿನೋದ ಅಸೂಟಿ ಪರ ಪ್ರಚಾರಕ್ಕೆ ಡಿಸಿಏಂ ಡಿ.ಕೆ ಶಿವಕುಮಾರ್‌ ಮತಬೇಟೆ ಆಡಲು ಬಂದಿದ್ದರು. ಡಿ.ಕೆ ಶಿವಕುಮಾರ್‌ ಅವರ ಕಾರು ಬರುತ್ತಿದ್ದಂತೆ ಅಲ್ಲಿದ್ದ ಕಾರ್ಯಕರ್ತರೆಲ್ಲ ಹರ್ಷೋದ್ಗಾರ ಹಾಕಲು ಆರಂಭಿಸಿದರು. ಈ ವೇಳೆ ಕೆಲವರು ʻDK... DK...ʼ ಎಂದು ಕೂಗುತ್ತಿದ್ದರು.

ಇದನ್ನೂ ಓದಿ: "ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಜಾತಿ ಗಣತಿ: ಕಾಂಗ್ರೆಸ್ ಪಕ್ಷ ಇದಕ್ಕೆ ಬದ್ಧ" - ಮುಖ್ಯಮಂತ್ರಿ ಸಿದ್ದರಾಮಯ್ಯ

ಡಿ.ಕೆ ಶಿವಕುಮಾರ್‌ ಅವರನ್ನು ನೋಡಲು ದೊಡ್ಡ ಜನರ ಗುಂಪೇ ಸೇರಿತ್ತು. ಈ ವೇಳೆ ಕಾರಿನಿಂದ ಇಳಿದ ಡಿ.ಕೆ ಶಿವಕುಮಾರ್‌ ನಡೆದುಕೊಂಡು ಹೋಗುವಾಗ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಅತ್ತ ಕಡೆಯಿಂದ ಬರುತ್ತಾನೆ. 

ಬಂದವನೇ ಡಿ.ಕೆ ಶಿವಕುಮಾರ್‌ ಅವರ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ನೀಡಲು ಆರಂಭಿಸಿದ. ಈ ವೇಳೆ ಕೋಪಗೊಂಡ ಡಿ.ಕೆ ಶಿವಕುಮಾರ್‌ ಆತನ ಕೆನ್ನೆಗೆ ಬಾರಿಸಿದ್ದಾರೆ. ಡಿ.ಕೆ ಶಿವಕುಮಾರ್‌ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮೇ 5ರಿಂದ ಐದು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
DK Shivakumar hit a Congress worker in Savanuru
News Source: 
Home Title: 

ಕಾಂಗ್ರೆಸ್‌ ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಡಿ.ಕೆ ಶಿವಕುಮಾರ್‌... ವಿಡಿಯೋ ವೈರಲ್‌ !

ಕಾಂಗ್ರೆಸ್‌ ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಡಿ.ಕೆ ಶಿವಕುಮಾರ್‌... ವಿಡಿಯೋ ವೈರಲ್‌ !
Yes
Is Blog?: 
No
Facebook Instant Article: 
Yes
Highlights: 

ಕಾಂಗ್ರೆಸ್‌ ಕಾರ್ಯಕರ್ತನಿಗೆ ಡಿ.ಕೆ ಶಿವಕುಮಾರ್‌ ಕಪಾಳಮೋಕ್ಷ 

ಕಪಾಳಕ್ಕೆ ಹೊಡೆದ ಉಪಮುಖ್ಯಂತ್ರಿ ಡಿ.ಕೆ ಶಿವಕುಮಾರ್‌

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌

Mobile Title: 
ಕಾಂಗ್ರೆಸ್‌ ಕಾರ್ಯಕರ್ತನ ಕಪಾಳಕ್ಕೆ ಹೊಡೆದ ಡಿ.ಕೆ ಶಿವಕುಮಾರ್‌... ವಿಡಿಯೋ ವೈರಲ್‌ !
Zee Kannada News Desk
Publish Later: 
No
Publish At: 
Sunday, May 5, 2024 - 12:37
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
1
Is Breaking News: 
No
Word Count: 
189

Trending News