Govt Hospital : ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ: ಸಿಸೇರಿಯನ್ ಆದ 18 ಮಹಿಳೆಯರಿಗೆ ಬಿಚ್ಚಿದ ಹೊಲಿಗೆ!

ಸಿಜೇರಿಯನ್ ‌ಮೂಲಕ ಹೆರಿಗೆ ಮಾಡಿಸಿಕೊಂಡ ಸುಮಾರು 18ಕ್ಕೂ ಅಧಿಕ ಮಹಿಳೆಯರಿಗೆ ಇದೇ ಸಮಸ್ಯೆಯಾಗಿದ್ದು, ಆಸ್ಪತ್ರೆಯಲ್ಲಿ ಟ್ರೇನಿ ನರ್ಸ್‌ಗಳ ಎಡವಟ್ಟೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ ಅಂತ ಸಂತ್ರಸ್ಥ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

Written by - Channabasava A Kashinakunti | Last Updated : May 15, 2022, 11:47 PM IST
  • ಆರ್ಥಿಕಕಾರಣದಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ ಬಡವರು
  • ಬಾಣಂತಿಯರಸಿಜೇರಿಯನ್ ಮಾಡಿದ ಎರಡೇ ದಿನದಲ್ಲಿ ಹೊಲಗೆ ಕಿತ್ತು ಬಂದಿವೆ
  • ಸಿಜೇರಿಯನ್ ಹೆರಿಗೆ ಮಾಡಿಸಿಕೊಂಡ 18ಕ್ಕೂ ಅಧಿಕ ಮಹಿಳೆಯರಿಗೆ ಇದೇ ಸಮಸ್ಯೆ
Govt Hospital : ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ: ಸಿಸೇರಿಯನ್ ಆದ 18 ಮಹಿಳೆಯರಿಗೆ ಬಿಚ್ಚಿದ ಹೊಲಿಗೆ! title=

ವಿಜಯಪುರ : ಮದ್ಯಮ‌ ವರ್ಗದವರು, ಬಡವರು ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಈ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಬರುವ ಗರ್ಭಿಣಿ ಮಹಿಳೆಯರ ಪರದಾಟ ಹೇಳತೀರದು. ಇದಕ್ಕೆ ಕಾರಣ ಸಿಜೇರಿಯನ್ ಮಾಡಿದ ಎರಡೇ ದಿನದಲ್ಲಿ ಹೊಲಗೆಗಳು ಕಿತ್ತು ಬಂದಿದ್ದರಿಂದ ಬಾಣಂತಿಯರು ನರಳಾಡಿದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕುಟುಂಬಸ್ಥರು ವೈದ್ಯರ ಎಡವಟ್ಟಿಗೆ ಕಿಡಿ ಕಾರಿದ್ದಾರೆ. 

ಮದ್ಯಮ ವರ್ಗದವರು ಹಾಗೂ ಕಡು ಬಡುವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೊಗುತ್ತಾರೆ. ಇನ್ನು ಕೆಲ ಗರ್ಭಿಣಿಯರು ಹೆರಿಗೆಂದು ಜಿಲ್ಲಾಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ ಸಿಜೇರಿಯನ್ ಹೆರಿಗೆಯಾದ ಬಹುತೇಕ ಮಹಿಳೆಯರ ಸ್ಟಿಚ್ ಬಿಚ್ಚಿ ಹೋದ ಪರಿಣಾಮಾವಾಗಿ ನೋವಿನಿಂದ ಕಣ್ಣೀರು ಹಾಕುತ್ತಿದ್ದಾರೆ.‌ ಇನ್ನು ಇದೇ ವಿಚಾರವನ್ನು ಆಸ್ಪತ್ರೆಯ ಸಿಬ್ಬಂದಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನೆವಾಗಿಲ್ಲ, ಮತ್ತೊಮ್ಮೆ ಅವರು ಸ್ಟಿಚ್ ಹಾಕುವ ಕೆಲಸ ಕೂಡ ಮಾಡುತ್ತಿಲ್ಲ. ಹೀಗಾಗಿ ನೋವಿನಿಂದ ಗರ್ಭಿಣಿ ಮಹಿಳೆಯರು ಪರದಾಡುವಂತಾಗಿದೆ ಎಂಬುದು ಗರ್ಭಿಣಿಯರ ಹಾಗೂ ಅವರ ಕುಟುಂಬಸ್ಥರ ಆರೋಪವಾಗಿದೆ. 

ಇದನ್ನೂ ಓದಿ : PSI Recruitment Scam : PSI ನೇಮಕಾತಿ ಅಕ್ರಮ : ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ CID ಶಾಕ್ ಮೇಲೆ ಶಾಕ್!

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸ್ಟ್ರಿಕ್ಟ್ ಸರ್ಜನ್ ಎಸ್.ಎಲ್. ಲಕ್ಕಣ್ಣ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಹೆರಿಗೆ ಥೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ಇನ್ಪೆಕ್ಷನ್ ಆಗಿದ್ದು ನಿಜ, ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿತ್ಯ ಸುಮಾರು 40 ಹೆರಿಗೆಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಸುಮಾರು 15 ರಿಂದ 20 ಸಿಜೇರಿಯನ್ ಮೂಲಕ ಹೆರಿಗೆಗಳಾಗುತ್ತವೆ. ಒಂದೇ ಮಹಾಶಸ್ತ್ರ ಚಿಕಿತ್ಸಾ ಘಟಕ ಇರೋ ಕಾರಣ ಸಮಸ್ಯೆ ಆಗಿದೆ ಅಂತ ಹೇಳುತ್ತಾರೆ. ಅಲ್ಲದೇ ಹೆಚ್ಚು ಹೆರಿಗೆಗಳು ಆಗುತ್ತಿರೋ ಕಾರಣ ಓಟಿಯನ್ನು ಸರಿಯಾಗಿ ಕಾರ್ಬೋಲೈಜೇಷನ್ ಅಂದರೆ ಶುಚೀಕರಣ ಮಾಡಲಾಗುತ್ತಿಲ್ಲ, ಇನ್ನೊಂದು ಓಟಿ ತೆರೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾಮಗಾರಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಸದ್ಯ ಪುನಃ ಆಸ್ಪತ್ರೆಗೆ ದಾಖಲಾಗಿರೋ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.  

ಸಿಜೇರಿಯನ್ ‌ಮೂಲಕ ಹೆರಿಗೆ ಮಾಡಿಸಿಕೊಂಡ ಸುಮಾರು 18ಕ್ಕೂ ಅಧಿಕ ಮಹಿಳೆಯರಿಗೆ ಇದೇ ಸಮಸ್ಯೆಯಾಗಿದ್ದು, ಆಸ್ಪತ್ರೆಯಲ್ಲಿ ಟ್ರೇನಿ ನರ್ಸ್‌ಗಳ ಎಡವಟ್ಟೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ ಅಂತ ಸಂತ್ರಸ್ಥ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. 

ಇದನ್ನೂ ಓದಿ : Karnataka Cabinet Expansion : ರಾಜ್ಯ ಸಂಪುಟ ವಿಸ್ತರಣೆ ಯಾವಾಗ? ಯಾಕೆ ಲೇಟ್ ಆಗ್ತಿದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News