ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ನಗರದ ಮಹದೇವಪುರ ವಲಯ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುವ ಸಲುವಾಗಿ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ರವರು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

Written by - Bhavya Sunil Bangera | Edited by - Manjunath N | Last Updated : Jul 28, 2023, 03:57 PM IST
  • ಇದೇ ವೇಳೆ ತರಬೇತಿ ಪಡೆದಂತಹ ಕುಸುಮ ರವರು ಮಾತನಾಡಿ, ಕಳೆದ 4 ವರ್ಷಗಳ ಹಿಂದೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಹೊಲಿಗೆ ತರಬೇತಿ ಪಡೆಯಲಾಗಿದೆ.
  • ಆದರೆ, ಹೊಲಿಗೆ ಯಂತ್ರಗಳನ್ನು ನೀಡುವಲ್ಲಿ ತಡವಾಗಿದ್ದು, ಇದೀಗ ವಲಯ ಜಂಟಿ ಆಯುಕ್ತರು ಕಾಳಜಿ ವಹಿಸಿ ನಮಗೆ ಹೊಲಿಗೆ ಯಂತ್ರಗಳು ವಿತರಿಸಿದ್ದಾರೆ.
  • ಇದರಿಂದ ನಾವು ಬಿಡುವಿನ ಸಮಯದಲ್ಲಿ ಜೀವನಕ್ಕೆ ಸ್ವಲ್ಪ ಹಣ ಸಂಪಾದನೆ ಮಾಡಿಕೊಳ್ಳಬಹುದೆಂದು ಸಂತಸ ವ್ಯಕ್ತಪಡಿಸಿದರು.
 ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ title=

ಬೆಂಗಳೂರು: ನಗರದ ಮಹದೇವಪುರ ವಲಯ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುವ ಸಲುವಾಗಿ ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ರವರು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿಯೂ ಕಲ್ಯಾಣ ವಿಭಾಗದ ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಅದರಂತೆ 2019 ರಿಂದ 22ನೇ ಸಾಲಿನಲ್ಲಿ ಹೊಲಿಗೆ ತರಬೇತಿ ಪಡೆದಿದ್ದ 15 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: ಮರುಕಳಿಸಿದ ಪ್ರಕರಣ: ಟೊಮೊಟೊ ಬಾತ್ ಸೇವಿಸಿ ಮೊರಾರ್ಜಿ ಶಾಲೆಯ 7 ವಿದ್ಯಾರ್ಥಿಗಳು ಅಸ್ವಸ್ಥ

ಹೊಲಿಗೆ ಯಂತ್ರಗಳನ್ನು ವಿತರಿಸಿದ ಬಳಿಕ ಮಾತನಾಡಿದ ಜಂಟಿ ಆಯುಕ್ತರು, ಪಾಲಿಕೆಯಿಂದ ನೀಡಿರುವಂತಹ ಉಚಿತ ಹೊಲಿಗೆ ಯಂತ್ರಗಳಿಂದ ಸ್ವಾಲಂಬಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು. 

ಇದೇ ವೇಳೆ ತರಬೇತಿ ಪಡೆದಂತಹ ಕುಸುಮ ರವರು ಮಾತನಾಡಿ, ಕಳೆದ 4 ವರ್ಷಗಳ ಹಿಂದೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಹೊಲಿಗೆ ತರಬೇತಿ ಪಡೆಯಲಾಗಿದೆ. ಆದರೆ, ಹೊಲಿಗೆ ಯಂತ್ರಗಳನ್ನು ನೀಡುವಲ್ಲಿ ತಡವಾಗಿದ್ದು, ಇದೀಗ ವಲಯ ಜಂಟಿ ಆಯುಕ್ತರು ಕಾಳಜಿ ವಹಿಸಿ ನಮಗೆ ಹೊಲಿಗೆ ಯಂತ್ರಗಳು ವಿತರಿಸಿದ್ದಾರೆ. ಇದರಿಂದ ನಾವು ಬಿಡುವಿನ ಸಮಯದಲ್ಲಿ ಜೀವನಕ್ಕೆ ಸ್ವಲ್ಪ ಹಣ ಸಂಪಾದನೆ ಮಾಡಿಕೊಳ್ಳಬಹುದೆಂದು ಸಂತಸ ವ್ಯಕ್ತಪಡಿಸಿದರು. 

ಈ ವೇಳೆ ಕಲ್ಯಾಣ ವಿಭಾಗದ ಅಧಿಕಾರಿಗಳು, ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News