ಡಿ.ಕೆ.ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ

Karnataka Govt Topple: ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Jul 25, 2023, 02:51 PM IST
  • ಜನತೆಯ ಕಿವಿಯ ಮೇಲೆ ಸದಾ ಹೂವಿಡುವ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಪರಂಪರೆ ‌ಮುಂದುವರೆಸಿದೆ
  • ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ
  • ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳ ವಿಷಯದಲ್ಲಿ ಉಲ್ಟಾ ಹೊಡೆದಿದೆ
ಡಿ.ಕೆ.ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ title=
ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಟೀಕೆ!

ಬೆಂಗಳೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಊಹಾಪೋಹಗಳ ವಿಚಾರವಾಗಿ ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಭವಿಷ್ಯ ಮಂಕಾಗಬಹುದು ಎಂಬ ಭಯದಿಂದಲೇ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ ಎಂದು ಟೀಕಿಸಿದೆ.

‘ಜನತೆಯ ಕಿವಿಯ ಮೇಲೆ ಸದಾ ಹೂವಿಡುವ ಕಾಂಗ್ರೆಸ್, ತನ್ನ ಪರಂಪರೆಯನ್ನು ರಾಜ್ಯದಲ್ಲಿ ‌ಮುಂದುವರೆಸಿದೆ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

‘ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳ ವಿಷಯದಲ್ಲಿ ಉಲ್ಟಾ ಹೊಡೆದಿದೆ, ವರ್ಗಾವಣೆ ದಂಧೆಯಲ್ಲಿ ನಿರತವಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಿಂದೂ ಕಾರ್ಯಕರ್ತರ, ಜೈನ ಮುನಿಗಳ ಹತ್ಯೆ, ಪೊಲೀಸರ ಮೇಲೆ ಹಲ್ಲೆ, ಸಾಲು ಸಾಲು ಅತ್ಯಾಚಾರ ಹೀಗೆ ತಾನು ಆಡಳಿತವನ್ನು ನಿಭಾಯಿಸಲು ಅಸಮರ್ಥ ಎಂಬುದನ್ನು ಶುರುವಾತಿನಲ್ಲಿಯೇ ನಿರೂಪಿಸಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: Dam Water Level July 25: ರಾಜ್ಯದ ಪ್ರಮುಖ ಡ್ಯಾಂಗಳಲ್ಲಿರುವ ನೀರಿನ ಮಟ್ಟದ ಮಾಹಿತಿ ಇಲ್ಲಿದೆ

‘ಹೀಗಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರಕ್ಕೆ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಬಡ, ಮಧ್ಯಮ, ಶ್ರಮಿಕ ವರ್ಗದವರು ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ತಮ್ಮ ಭವಿಷ್ಯ ಮಂಕಾಗಲಿದೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

‘ಅಷ್ಟಕ್ಕೂ ಈ ಸರ್ಕಾರವನ್ನು ಬೀಳಿಸಲು ಹೊರಗಿನವರೇ ಬೇಕಾಗಿಲ್ಲ. ಅಸಲಿಗೆ ಸರ್ಕಾರದ ಪ್ರಮುಖ ಭಾಗವಾಗಿರುವವರಿಗೆ ಈ ಸರ್ಕಾರ ಬೇಕಾಗಿಲ್ಲ. ಸಚಿವರಾದ ಜಮೀರ್ ಅಹಮದ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಗಟ್ಟಿಯಾಗಿ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳುವ ಹಾಗಿಲ್ಲ. ಹೇಳಿದರೆ ಡಿ.ಕೆ.ಶಿವಕುಮಾರ್ ಬಣ ಮುಗಿಬೀಳುತ್ತದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಸಿದ್ದರಾಮಯ್ಯರವರ ವಿರುದ್ಧ ಮಾತನಾಡುವ ಹೊಸ ಗುಂಪಿನ ನಾಯಕ ಹರಿಪ್ರಸಾದ್ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಸಹ ನೀಡದೇ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಾರೆ. ಈ ಸರ್ಕಾರ ಉಳಿಯುವ ಯಾವ ಲಕ್ಷಣವೂ ಇಲ್ಲ, ಮತ್ತದಕ್ಕೆ ಹೊರಗಿನವರ ಶ್ರಮದ ಅಗತ್ಯವೇ ಇಲ್ಲ. ಪರಸ್ಪರ ಗುದ್ದಾಡಿಕೊಳ್ಳುತ್ತಿರುವ ಒಳಗಿನ 4 ಗುಂಪುಗಳೇ ಈ ಸರ್ಕಾರವನ್ನು ನಿಸ್ಸಂದೇಹವಾಗಿ ಮುಗಿಸಲಿದೆ.  It’s just a matter of time!’ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Chamarajanagar: ಕುಡಿದ ಮತ್ತಿನಲ್ಲಿ ಆ್ಯಸಿಡ್ ಕುಡಿದ ವ್ಯಕ್ತಿ ಸಾವು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News