ಅ.14ರಂದು ಬಾನಂಗಳದಲಿ ಹಾರಾಡಲಿವೆ ಲೋಹದ ಹಕ್ಕಿಗಳು

ಅಕ್ಟೋಬರ್ 14 ರಂದು ಬನ್ನಿಮಂಟಪದಲ್ಲಿ ದಸರಾ ವೈಮಾನಿಕ ಪ್ರದರ್ಶನ ನಡೆಯಲಿದೆ.

Last Updated : Oct 13, 2018, 02:45 PM IST
ಅ.14ರಂದು ಬಾನಂಗಳದಲಿ ಹಾರಾಡಲಿವೆ ಲೋಹದ ಹಕ್ಕಿಗಳು title=
File Image

ಮೈಸೂರು: ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ದಸರಾ ಏರ್ ಶೋ ಬನ್ನಿಮಂಟಪದಲ್ಲಿ ನಡೆಯಲಿದೆ.

ಮೈಸೂರು ದಸರಾ ಏರ್ ಶೋಗೆ ವಿಮಾನಯಾನ ಸಂಸ್ಥೆ ಅನುಮತಿ ನೀಡಿದ್ದು, ಅಕ್ಟೋಬರ್ 14 ರಂದು ಭಾನುವಾರ 11 ಗಂಟೆಗೆ ಬನ್ನಿಮಂಟಪದಲ್ಲಿ ಲೋಹದ ಹಕ್ಕಿಗಳು ಹಾರಾಡಲಿವೆ.  

ಏರ್ ಶೋನಲ್ಲಿ ಏರ್ ಫೋರ್ಸ್ ನ ಎರಡು‌ ಯುದ್ಧ ವಿಮಾನಗಳು ಭಾಗಿಯಾಗಲಿದ್ದು, ಅಲ್ಲದೆ  1130 ಅಡಿ ಎತ್ತರದಿಂದ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಜಿಗಿಯುವ ಆಕಾಶ ಕಾಯನ (ಸ್ಕೈ ಡೈವಿಂಗ್) ಏರ್ ಶೋ ನ ವಿಶೇಷವಾಗಿದೆ.

Trending News