CT Ravi : 'ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ಬಾಂಬ್ ಇಟ್ಟವರು ಡಿಕೆ ಬ್ರದರ್ಸ್'

ಮಕ್ಕಳನ್ನ ಗುರಿಯಾಗಿಸಿ ಡಿಕೆ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟವರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಲ್ ಅವರ್ ಬ್ರದರ್ಸ್ ಅಂತಾರೆ. ಆದರೆ ಶಾಲಾ ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ನಲ್ಲಿ ಬಾಂಬ್ ಇಡುವ ಸಂಚು ಮಾಡಿದರು.

Written by - Channabasava A Kashinakunti | Last Updated : Mar 26, 2023, 03:02 PM IST
  • ಶಾಲಾ ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ಬಾಂಬ್ ಇಟ್ಟವರು ಡಿಕೆ ಬ್ರದರ್ಸ್
  • ಡಿಕೆ ಬ್ರದರ್ಸ್ ವಿರುದ್ಧ ಸಿಟಿ ರವಿ ವಿವಾದಾತ್ಮಕ ಹೇಳಿಕೆ
  • ಬಾಂಬ್ ಇಡೋರಿಗೆ ಬಿರಿಯಾನಿ ತಿನಿಸುವ ಪಾರ್ಟಿಯಲ್ಲ
CT Ravi : 'ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ಬಾಂಬ್ ಇಟ್ಟವರು ಡಿಕೆ ಬ್ರದರ್ಸ್' title=

ದಾವಣಗೆರೆ : ಶಾಲಾ ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ಬಾಂಬ್ ಇಟ್ಟವರು ಡಿಕೆ ಬ್ರದರ್ಸ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ನಡೆದ ಮಹಾ ಸಂಗಮ ಸಮಾವೇಶದಲ್ಲಿ ಮಾತನಾಡಿದ ಸಿಟಿ ರವಿ, ಮಕ್ಕಳನ್ನ ಗುರಿಯಾಗಿಸಿ ಡಿಕೆ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟವರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಲ್ ಅವರ್ ಬ್ರದರ್ಸ್ ಅಂತಾರೆ. ಆದರೆ ಶಾಲಾ ಮಕ್ಕಳನ್ನ ಗುರಿಯಾಗಿಸಿ ಕುಕ್ಕರ್ ನಲ್ಲಿ ಬಾಂಬ್ ಇಡುವ ಸಂಚು ಮಾಡಿದರು. ಆ ಸಂಚಿಗೆ ಶಕ್ತಿಯೇ ಕಾಂಗ್ರೆಸ್ ನ ಓಲೈಕೆಯ ರಾಜನೀತಿ. ಏನಾದರೂ ಮಾಡಿ ಅಧಿಕಾರ ಹಿಡಿಬೇಕೆನ್ನುವುದು ಕಾಂಗ್ರೆಸ್ ನೀತಿ. ಅದಕ್ಕೋಸ್ಕರ ಈಗ ಸುಳ್ಳು ಕಾರ್ಡ್ ಗಳನ್ನ ವಿತರಣೆ ಮಾಡುತ್ತಿದ್ದಾರೆ. ಅಧಿಕಾರವಿದ್ದಾಗ ಏನು ಮಾಡಿದ್ದೀರಿ ಎಂದು ಕಾಂಗ್ರೆಸ್ ಗೆ ಪ್ರಶ್ನೆ. ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಮಾತ್ರವಲ್ಲ ಬುಲ್ಡೋಜರ್ ಕೂಡ ಹರಿಸುತ್ತೇವೆ. ಯುಪಿ ಮಾದರಿಯಲ್ಲಿ ಬುಲ್ಡೋಜರ್ ಉರಳಿಸೋಕು ನಮಗೆ ಬರತ್ತೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : DK Shivakumar : '75 ವರ್ಷಗಳಲ್ಲಿ ಆಗದ ಬದಲಾವಣೆ 90 ದಿನಗಳಲ್ಲಿ ಮೀಸಲಾತಿ ಬದಲಾವಣೆ'

ಇನ್ನು ಮುಂದುವರೆದು ಮಾತನಾಡಿದ ಅವರು, ಬಿಜೆಪಿ ದೇಶ ವಿರೋಧಿಗಳಿಗೆ ಮಣೆ ಹಾಕುವ ಪಾರ್ಟಿಯಲ್ಲ. ಬಾಂಬ್ ಇಡೋರಿಗೆ ಬಿರಿಯಾನಿ ತಿನಿಸುವ ಪಾರ್ಟಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : NIA : ಕುಕ್ಕರ್ ಬಾಂಬ್ ರೂವಾರಿ ಶಾರೀಖ್ ಬಗ್ಗೆ ಸ್ಫೋಟಕ ಮಾಹಿತಿ ಪತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News