ಕಾಂಗ್ರೆಸ್ ಸರ್ಕಾರವೇ ಜಿಹಾದಿಗಳ ಮಾಸ್ಟರ್ ಮೈಂಡ್ ಇರಬಹುದಾ..?: ಬಿಜೆಪಿ

ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಂತ್ರಿಸುತ್ತಿದ್ದ ಪೊಲೀಸ್‌ ಪೇದೆಯೊಬ್ಬರು, ಕೆಲವು ಜಿಹಾದಿ ಪುಂಡರು ನಿಯಮ ಉಲ್ಲಂಘಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಹಾಡುಹಗಲೇ ಸಮವಸ್ತ್ರ ಧರಿಸಿದ ಪೊಲೀಸ್‌ ಮೇಲೆ ಗುಂಪು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಜಿಹಾದಿಗಳು ಸೊಕ್ಕಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Oct 27, 2023, 11:53 PM IST
  • ಜಿಹಾದಿಗಳನ್ನು ಮಟ್ಟ ಹಾಕಬೇಕಿದ್ದ ಕಾಂಗ್ರೆಸ್‌ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ
  • ಜಿಹಾದಿಗಳ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ ಕರ್ನಾಟಕ PFI ಪುಂಡರ ಭದ್ರಕೋಟೆ ಆಗಲಿದೆ
  • ಚುನಾವಣೆಯಲ್ಲಿ ಗೆಲುವಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ PFIನ ಋಣ ತೀರಿಸುತ್ತಿದೆಯಾ ಕಾಂಗ್ರೆಸ್?
ಕಾಂಗ್ರೆಸ್ ಸರ್ಕಾರವೇ ಜಿಹಾದಿಗಳ ಮಾಸ್ಟರ್ ಮೈಂಡ್ ಇರಬಹುದಾ..?: ಬಿಜೆಪಿ  title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕದಲ್ಲಿ ಅರಾಜಕತೆ, ಅಶಾಂತಿ ಹಾಗೂ ಭಯದ ವಾತಾವರಣವನ್ನು ನಿರ್ಮಿಸಿದ್ದು ಹಾಗೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಹಳ್ಳ ಹಿಡಿಸಿದ್ದೇ ಕಾಂಗ್ರೆಸ್ ಸರ್ಕಾರದ 5 ತಿಂಗಳ ಸಾಧನೆ!! ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.  

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅಧಿಕಾರಕ್ಕೆ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೂ ಜಿಹಾದಿಗಳನ್ನು ಓಲೈಸುವಲ್ಲಿ ಪೈಪೋಟಿಗೆ ಬಿದ್ದಿರುವ ಸಿಎಂ ಸಿದ್ದರಾಮಯ್ಯನವರು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ’ ಎಂದು ಬಿಜೆಪಿ ಟೀಕಿಸಿದೆ.

‘ತಾವೆಂತಹ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೂ, ಗರಿಷ್ಟ ಮಟ್ಟದಲ್ಲಿ ಈ ದೇಶದ ಕಾನೂನನ್ನು ಉಲ್ಲಂಘಿಸಿದರೂ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ಮುಖಂಡರು ತಮ್ಮ ಬೆನ್ನಿಗೆ ನಿಲ್ಲುತ್ತಾರೆ, ತಮಗೆ “ಅಮಾಯಕರು” ಎಂಬ ಪಟ್ಟ ಕಟ್ಟುತ್ತಾರೆ ಎಂಬುದು ಜಿಹಾದಿಗಳಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ 5 ತಿಂಗಳ ಆಡಳಿತದಲ್ಲಿ ರಾಜ್ಯದಲ್ಲಿ ಕೇವಲ ಅರಾಜಕತೆ, ಕೋಮುಗಲಭೆ, ಕೊಲೆ-ಸುಲಿಗೆ, ಅಶಾಂತಿಗಳದ್ದೇ ಸದ್ದು!! ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಜಿಹಾದಿಗಳು ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಪುಂಡಾಟ ಮೆರೆಯುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಹೈ ಕಮಾಂಡ್ ಭೇಟಿಯಾಗದೆ ದೇಹಲಿಯಿಂದ ವಾಪಸ್ಸಾದ ಡಿವಿಎಸ್

‘ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಂತ್ರಿಸುತ್ತಿದ್ದ ಪೊಲೀಸ್‌ ಪೇದೆಯೊಬ್ಬರು, ಕೆಲವು ಜಿಹಾದಿ ಪುಂಡರು ನಿಯಮ ಉಲ್ಲಂಘಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಹಾಡುಹಗಲೇ ಸಮವಸ್ತ್ರ ಧರಿಸಿದ ಪೊಲೀಸ್‌ ಮೇಲೆ ಗುಂಪು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಜಿಹಾದಿಗಳು ಸೊಕ್ಕಿದ್ದಾರೆ. ರಾಜ್ಯವನ್ನು ಜಿಹಾದಿಗಳ ತವರೂರನ್ನಾಗಿಸಿ, ಗೂಂಡಾ ರಾಜ್ಯವನ್ನಾಗಿ ಮಾಡುವುದೇ ಕಾಂಗ್ರೆಸ್‌ನ ಕರ್ನಾಟಕ ಮಾಡೆಲ್‌. ಇನ್ನು ಕಾಂಗ್ರೆಸ್‌ ಒಂದು ಕಡು ಹಿಂದೂ ವಿರೋಧಿ ಪಕ್ಷ ಎಂಬ ಸತ್ಯ ಜಗತ್ತಿಗೆ ತಿಳಿದಿರುವಂತಹದ್ದು, ಈ ಸತ್ಯ  ಅರಿತಿರುವ ಜಿಹಾದಿಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೂ ಸದಾ ಶಾಂತಿಪ್ರಿಯ ಹಿಂದೂಗಳನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪ್ರಮುಖ ಸಾಕ್ಷಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಹಾಕಿದ್ದ ತಲ್ವಾರ್‌ ರೀತಿಯ ಕಮಾನುಗಳು!! ಹಿಂದೂಗಳನ್ನು ಪ್ರಚೋದಿಸುವ ರೀತಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ, ಹಿಂದೂಗಳ ಮನೆಗೆ ಕಲ್ಲೆಸೆದರೂ, ಅವರನ್ನು ಬಂಧಿಸದೇ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದು ಕಾಂಗ್ರೆಸ್‌ನ ಸೋಗಲಾಡಿ ರಾಜಕೀಯಕ್ಕೆ ಸ್ಪಷ್ಟ ನಿದರ್ಶನ’ವೆಂದು ಬಿಜೆಪಿ ಕಿಡಿಕಾರಿದೆ.

‘ವಿಜಯಪುರದ ಆಲಮಟ್ಟಿಯಲ್ಲಿ ಹಿಂದೂಗಳು ದೇವಸ್ಥಾನದ ಪ್ರತಿಷ್ಠಾಪನೆಗೆಂದು ಶ್ರದ್ಧಾ-ಭಕ್ತಿಯಿಂದ ತಂದಿದ್ದ ದೇವರ ಮೂರ್ತಿಗಳನ್ನು ಜಿಹಾದಿಗಳು ಧ್ವಂಸಗೊಳಿಸಿ ಕ್ರೌರ್ಯ ಮೆರೆದಿದ್ದರು. ಇಂಡಿಯ ಹಿರೆಬೇವನೂರಿನಲ್ಲಿ ನವರಾತ್ರಿಗೆಂದು ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಅತ್ಯಂತ ಕೀಳಾಗಿ ವಿವಸ್ತ್ರಗೊಳಿಸಿದ್ದು ಸಹ ಜಿಹಾದಿಗಳೇ. ಕಲಬುರಗಿಯ ಚಿತ್ತಾಪುರದಲ್ಲಿ ವಿಶ್ವಗುರು ಬಸವೇಶ್ವರವರ ಭಾವಚಿತ್ರವನ್ನು ಅತ್ಯಂತ ಹೇಯವಾಗಿ ವಿರೂಪಗೊಳಿಸಿದ್ದು ಸಹ ಮತ್ತದೇ ಜಿಹಾದಿಗಳು. ಹಾನಗಲ್‌ನಲ್ಲಿ ಐತಿಹಾಸಿಕ ತಾರಕೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಪಡಿಸಿದ್ದು ಸಹ ಇದೇ ಜಿಹಾದಿಗಳು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಜಿಹಾದಿಗಳು ಇಷ್ಟೆಲ್ಲಾ ಸಮಾಜಘಾತುಕ ಕೃತ್ಯ ನಡೆಸುತ್ತಿದ್ದರೂ, ಕಾಂಗ್ರೆಸ್‌ ಸರ್ಕಾರ ಮಾತ್ರ ಕುರುಡ-ಕಿವುಡ-ಮೂಗನಂತೆ ವರ್ತಿಸುತ್ತಿರುವುದನ್ನು ಗಮನಿಸಿದರೆ, ಕಾಂಗ್ರೆಸ್‌ ಸರ್ಕಾರವೇ ಜಿಹಾದಿಗಳ ಮಾಸ್ಟರ್‌ ಮೈಂಡ್‌ ಇರಬಹುದಾ ಅಥವಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ PFIನ  ಋಣವನ್ನು ತೀರಿಸುತ್ತಿದೆಯಾ ಎಂಬ ಅನುಮಾನ ಮೂಡುವುದಂತೂ ಸತ್ಯ!! ಜಿಹಾದಿಗಳನ್ನು ಮಟ್ಟ ಹಾಕಬೇಕಿದ್ದ ಕಾಂಗ್ರೆಸ್‌ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ ಹಾಗೂ 6 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ. ಕಾಂಗ್ರೆಸ್‌ ಸರ್ಕಾರ ತನ್ನ ಓಲೈಕೆ ರಾಜಕೀಯಕ್ಕೋಸ್ಕರ, ಜಿಹಾದಿಗಳ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ, ಕರ್ನಾಟಕ ಮತ್ತೊಮ್ಮೆ PFI ಪುಂಡರ ಭದ್ರಕೋಟೆ ಆಗುವುದು ಖಚಿತ-ನಿಶ್ಚಿತ-ಖಂಡಿತ!!’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ದಿನೇದಿನೇ ಹೆಚ್ಚಾಗ್ತಿದೆ ಹುಲಿ ಉಗುರು ಕಾವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News