ಪ್ರಾಣಿಗಳಿಗೂ 'ಕೊರೊನಾ' ಸಂಕಷ್ಟ! ಲಾಕ್ ಡೌನ್ ಮಾಡಿದ್ರೆ ಮತ್ತಷ್ಟು ಕಷ್ಟ ಕಷ್ಟ..

Corona effect on zoo: ರಾಜ್ಯದ ಮೃಗಾಲಯಗಳಿಗೆ ಆಪತ್ತು ಎದುರಾಗಿದ್ದು, ಆರ್ಥಿಕ ಸಂಕಷ್ಟದಿಂದ ಪ್ರಾಣಿಗಳ ಪೋಷಣೆಗೆ ಹಣವಿಲ್ಲದೆ ಪರದಾಡುವಂತಾಗಿದೆ.

Edited by - Zee Kannada News Desk | Last Updated : Jan 19, 2022, 04:22 PM IST
  • ರಾಜ್ಯದ ಮೃಗಾಲಯಗಳಿಗೆ ಎದುರಾದ ಆಪತ್ತು
  • ಆರ್ಥಿಕ ಸಂಕಷ್ಟದಿಂದ ಪ್ರಾಣಿಗಳ ಪೋಷಣೆಗೆ ಹಣವಿಲ್ಲದೆ ಪರದಾಟ
  • ಮೃಗಾಲಯಗಳನ್ನು ಮತ್ತೆ ಸಂಕಷ್ಟಕ್ಕೆ ನೂಕಿದ 3ನೇ ಅಲೆಯ ಆರ್ಭಟ
ಪ್ರಾಣಿಗಳಿಗೂ 'ಕೊರೊನಾ' ಸಂಕಷ್ಟ! ಲಾಕ್ ಡೌನ್ ಮಾಡಿದ್ರೆ ಮತ್ತಷ್ಟು ಕಷ್ಟ ಕಷ್ಟ..  title=
ಮೃಗಾಲಯ

ಬೆಂಗಳೂರು: 'ಕೊರೊನಾ' ಕಾಟಕ್ಕೆ ತತ್ತರಿಸದೇ ಇರುವವರು ಯಾರಿದ್ದಾರೆ ಹೇಳಿ? ಮಾತು ಬರುವ ಮನುಷ್ಯನಿಂದ ಹಿಡಿದು ಮಾತೇ ಬಾರದ ಪ್ರಾಣಿಗಳ (Animals) ತನಕ ಎಲ್ಲರೂ ಸಂಕಷ್ಟದ ಬಲೆಯಲ್ಲಿ ಸಿಲುಕಿದವರೇ. ಹೀಗೆ ಇಡೀ ಜಗತ್ತಿನಲ್ಲಿ ಕೊರೊನಾ ಕಾರಣಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. 

ಈ ಹೊತ್ತಲ್ಲೇ ರಾಜ್ಯದ ಮೃಗಾಲಯಗಳಿಗೆ ಆಪತ್ತು ಎದುರಾಗಿದ್ದು, ಆರ್ಥಿಕ ಸಂಕಷ್ಟದಿಂದ (Economic Crisis) ಪ್ರಾಣಿಗಳ ಪೋಷಣೆಗೆ ಹಣವಿಲ್ಲದೆ ಪರದಾಡುವಂತಾಗಿದೆ.

ರಾಜ್ಯದಲ್ಲಿ ದೊಡ್ಡ ದೊಡ್ಡ ಮೃಗಾಲಯಗಳು (Zoo) ಎಂದ ತಕ್ಷಣ ನೆನಪಾಗುವುದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ, ಮೈಸೂರಿನ ಮೃಗಾಲಯ ಹಾಗೂ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಝೂಗಳು. 

Corona effect on zoos in Karnataka

ಈ 3 ಮೃಗಾಲಯಗಳಿಗೆ ಪ್ರತಿವರ್ಷ ಹತ್ತಾರು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅದರಲ್ಲೂ ವಾರಾಂತ್ಯದಲ್ಲಿ ಈ ಮೃಗಾಲಯಗಳು ತುಂಬಿ ತುಳುಕುತ್ತಿದ್ದವು‌. ಆದರೆ ಯಾವಾಗ ಕೊರೊನಾ ಕಂಟಕ ಎದುರಾಯ್ತೋ, ಅಂದಿನಿಂದಲೇ ಪರಿಸ್ಥಿತಿ ಬದಲಾಗಿ ಹೋಯ್ತು. 

ಕಳೆದ 2 ವರ್ಷಗಳಿಂದ ರಾಜ್ಯದ ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿವೆ. ಕೆಲವು ತಿಂಗಳಿಂದ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ 3ನೇ ಅಲೆಯ ಆರ್ಭಟ ಮೃಗಾಲಯಗಳನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ.

ಜನರೇ ಕಾಣಿಸುತ್ತಿಲ್ಲ!:

ಕೊರೊನಾ 3ನೇ ಅಲೆ (Corona 3rd wave) ಭೀಕರವಾಗಿದೆ. ಈಗಾಗಲೇ 2 ಅಲೆಗಳು ಸಾಕಷ್ಟು ಅವಾಂತರ ಸೃಷ್ಟಿಸಿವೆ. ಈ ನಡುವೆ ಮತ್ತೆ ಕೊರೊನಾ ಕೇಸ್ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ‌. 

Corona effect on zoos in Karnataka

ವೀಕೆಂಡ್ ಕರ್ಫ್ಯೂ (Weekend curfew) ಮೂಲಕ ವಾರಾಂತ್ಯದ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ರಾಜ್ಯದ ಪ್ರವಾಸಿ ತಾಣಗಳು ಖಾಲಿ ಖಾಲಿಯಾಗಿವೆ. ಅದರಲ್ಲೂ ಪ್ರಾಣಿಗಳನ್ನು ನೋಡಲು ಕುಟುಂಬ ಸಮೇತ ಮೃಗಾಲಯಗಳಿಗೆ ಬರುತ್ತಿದ್ದವರು ನಾಪತ್ತೆಯಾಗಿದ್ದಾರೆ. ಇದು ಮೃಗಾಲಯಗಳ ಮುಖ್ಯಸ್ಥರನ್ನ ಹಾಗೂ ಸಿಬ್ಬಂದಿಯನ್ನ ಚಿಂತೆಗೀಡು ಮಾಡಿದೆ.

ಮನವಿ ಮಾಡಿದ್ದ ಗಣ್ಯರು:

ಪ್ರವಾಸಿಗರು ಬಂದರೆ ಮಾತ್ರ ಮೃಗಾಲಯದ ನಿರ್ವಹಣೆಗೆ ಅನುಕೂಲ. ಆದರೆ ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಕಳೆದ 2 ವರ್ಷಗಳಿಂದ ಝೂಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಪ್ರಾಣಿಗಳ ಪೋಷಣೆಗೂ ಪರದಾಡುವ ಸ್ಥಿತಿ ಬಂದಿದೆ. 

ಹೀಗಿರುವಾಗಲೇ ನಟ ದರ್ಶನ್ (Darshan) ಸೇರಿದಂತೆ ಹಲವು ಗಣ್ಯರು ಅಭಿಯಾನ ನಡೆಸಿದ್ದರು. ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಒಂದಷ್ಟು ಹಣ ಮೃಗಾಲಯಗಳಿಗೆ ಹರಿದು ಬಂದಿತ್ತು. ಹೀಗೆ ಒಂದಷ್ಟು ಸುಧಾರಿಸಿಕೊಳ್ಳುವ ಸಂದರ್ಭದಲ್ಲೇ ಮತ್ತೆ ದೊಡ್ಡ ಆಘಾತ ಎದುರಾಗಿದೆ. ಅದರಲ್ಲೂ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿದೆ.

ಮುಂದೇನು ಕಥೆ..?

ಮೃಗಾಲಯಗಳನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಈಗಾಗಲೇ ಗುತ್ತಿಗೆ ನೌಕರರ ಸಂಬಳಕ್ಕೂ ಕತ್ತರಿ ಬಿದ್ದಿದೆ‌. ಈಗಲಾದರೂ ಪರಿಸ್ಥಿತಿ ಸರಿ ಹೋಗುತ್ತೆ ಎಂಬ ನೌಕರರ ನಂಬಿಕೆಗೆ ಕೊರೊನಾ 3ನೇ ಅಲೆ ಭಾರಿ ಪೆಟ್ಟು ಕೊಟ್ಟಿದೆ. ಮುಂದೆ ಏನಪ್ಪಾ ಮಾಡೋದು ಅಂತಾ ಮೃಗಾಲಯಗಳ ನೌಕರರು ಚಿಂತಿತರಾಗಿದ್ದಾರೆ.

"ಕೊರೊನಾ ಮೊದಲ ಅಲೆಯಿಂದಲೂ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ ಇತ್ತೀಚೆಗೆ ಪರಿಸ್ಥಿತಿ ಸ್ವಲ್ಪ ಸುಧಾರಣೆ ಕಾಣುತ್ತಿತ್ತು. ಅಷ್ಟರಲ್ಲೇ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ಬನ್ನೇರುಘಟ್ಟ ಮೃಗಾಲಯ ಹಾಗೂ ಸಫಾರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಇದು ಮೃಗಾಲಯದ ಆದಾಯ ಕುಸಿಯುವಂತೆ ಮಾಡಿದೆ" ಎಂದು ಬನ್ನೇರುಘಟ್ಟ ಮೃಗಾಲಯದ ಅಧಿಕಾರಿ ತಿಳಿಸಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ ಖರೀದಿಸಿ ಚೈನ್ನೈ ಗೆ ಕೊಂಡೊಯ್ಯುತ್ತಿದ್ದ ನಾಲ್ವರ ಬಂಧನ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News