ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ: ಬಿಜೆಪಿ ಟೀಕೆ

Congress Guarantee: ಸಿಎಂ ಸಿದ್ದರಾಮಯ್ಯರವರೇ, ನಿಮ್ಮ ಆಪ್ತ ವಲಯದಲ್ಲಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಖಾಸಾ ಭಂಟರೇ, ಕೊಪ್ಪಳದಲ್ಲಿ ನಡೆದ ಗುತ್ತಿಗೆದಾರರ ಆತ್ಮಹತ್ಯೆಗೆ ನೇರ ಕಾರಣವೆಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Oct 15, 2023, 10:37 PM IST
  • ಹಣಕಾಸಿನ ಸಮಸ್ಯೆಯಿಂದ ಕೊಪ್ಪಳದ ಗುತ್ತಿಗೆದಾರ ರಾಜೀವ್ ಬಗಾಟೆ ಆತ್ಮಹತ್ಯೆ ಪ್ರಕರಣ
  • ಆತ್ಮಹತ್ಯೆ ಭಾಗ್ಯಗಳಿಗೂ ಸಿಎಂ ಸಿದ್ದರಾಮಯ್ಯರಿಗೂ ಬಿಡಿಸಲಾಗದ ನಂಟು ಎಂದು ಬಜೆಪಿ ಟೀಕೆ
  • ರೈತರಿಗೆ, ಸರ್ಕಾರಿ ಅಧಿಕಾರಿಗಳಿಗೆ ದೊರೆತಿದ್ದ ಆತ್ಮಹತ್ಯೆ ಭಾಗ್ಯ ಈಗ ತುಂಡು ಗುತ್ತಿಗೆದಾರರಿಗೂ ಲಭಿಸಿದೆ
ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ: ಬಿಜೆಪಿ ಟೀಕೆ title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಹಣಕಾಸಿನ ಸಮಸ್ಯೆಯಿಂದ ಕೊಪ್ಪಳದ ಬಿ.ಟಿ.ಪಾಟೀಲ್ ನಗರದ ಗುತ್ತಿಗೆದಾರ ರಾಜೀವ್ ಬಗಾಟೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ನಗರಸಭೆ ಸದಸ್ಯ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಆತ್ಮಹತ್ಯೆ ಭಾಗ್ಯಗಳಿಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಬಿಡಿಸಲಾಗದ ನಂಟು. ರೈತರಿಗೆ, ಸರ್ಕಾರಿ ಅಧಿಕಾರಿಗಳಿಗೆ ದೊರೆತಿದ್ದ ಆತ್ಮಹತ್ಯೆ ಭಾಗ್ಯ, ಈಗ ತುಂಡು ಗುತ್ತಿಗೆದಾರರಿಗೂ ಲಭಿಸಿದೆ’ ಎಂದು ಟೀಕಿಸಿದೆ. ‘ಸಿಎಂ ಸಿದ್ದರಾಮಯ್ಯರವರೇ, ನಿಮ್ಮ ಆಪ್ತ ವಲಯದಲ್ಲಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಖಾಸಾ ಭಂಟರೇ, ಕೊಪ್ಪಳದಲ್ಲಿ ನಡೆದ ಗುತ್ತಿಗೆದಾರರ ಆತ್ಮಹತ್ಯೆಗೆ ನೇರ ಕಾರಣ. ಅವರನ್ನು ಬಂಧಿಸಿ ಗುತ್ತಿಗೆದಾರರ ಆತ್ಮಹತ್ಯೆಗೆ ನ್ಯಾಯ ಒದಗಿಸುತ್ತಿರೋ ಅಥವಾ "ಅಮಾಯಕ" ಪಟ್ಟ ಕಟ್ಟಿ ಕೇಸು ಮುಚ್ಚಿ ಹಾಕುತ್ತಿರೋ..??’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ..!

ಮೊನ್ನೆ ₹42 ಕೋಟಿ, ಇಂದು ₹45 ಕೋಟಿ!

‘ಮೊನ್ನೆ ₹42 ಕೋಟಿ, ಇಂದು ₹45 ಕೋಟಿ, ಇದು ಕಾಂಗ್ರೆಸ್ ಹೊರ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ಪರಿ. ವಶಪಡಿಸಿಕೊಂಡ ಎಲ್ಲಾ ಹಣದ ವಾರಸುದಾರರು ಕಾಂಗ್ರೆಸ್ ಪಕ್ಷದ ನಾಯಕರ ಬೇನಾಮಿಗಳು ಹಾಗೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರು. ಅಂಬಿಕಾಪತಿ ಸಿಎಂ ಸಿದ್ದರಾಮಯ್ಯರ ಬಣದವರಾದರೇ, ಮಾಜಿ ಎಂಎಲ್‍ಸಿ ಬೆಮೆಲ್ ಕಾಂತರಾಜು ಡಿಸಿಎಂ ಡಿ.ಕೆ.ಶಿವಕುಮಾರ್ ಬಣದವರು. ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಸಹ ಬಣಗಳ ಪೈಪೋಟಿ ಜೋರೋ ಜೋರು!’ ಎಂದು ಬಿಜೆಪಿ ಟೀಕಿಸಿದೆ.

ಶಿಕ್ಷಣ ವ್ಯವಸ್ಥೆ ಬುಡಮೇಲು!

‘ರಾಜ್ಯದ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ, ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್‌ ಗೇರ್‌‌ನಲ್ಲಿರಿಸಿದ್ದು ಮಾತ್ರವಲ್ಲದೇ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು  ಸಹ ಬುಡಮೇಲು ಮಾಡುತ್ತಿದೆ. ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆಯಿಂದ ರಾಯಚೂರಿನಲ್ಲಿ ಶಿಕ್ಷಕರ ತೀವ್ರ ಕೊರತೆ ಉಂಟಾಗಿದ್ದು, ಮಕ್ಕಳು ಶಾಲೆಗೆ ಗುಡ್‌ ಬೈ ಹೇಳುತ್ತಿದ್ದಾರೆ. ಇದು “ಕೈ” ಸರ್ಕಾರ ಶಿಕ್ಷಣದ ಬಗ್ಗೆ ಹೊಂದಿರುವ ಅಸಲಿ ಕಾಳಜಿ!!’ ಎಂದು ಬಿಜೆಪಿ ಟೀಕಿಸಿದೆ.

‘ಸಿಎಂ ಸಿದ್ದರಾಮಯ್ಯನವರೇ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವಲ್ಲಿ, ರಾಷ್ಟ್ರೀಯತೆಯನ್ನು ಒಳಗೊಂಡಿದ್ದ ಪಠ್ಯಪುಸ್ತಕವನ್ನು ಬದಲಿಸುವಲ್ಲಿ ತೋರಿದ ಆತುರವನ್ನು ಶಿಕ್ಷಕರ ವರ್ಗಾವಣೆಯಲ್ಲಾದ ಲೋಪ-ದೋಷಗಳ ಬಗ್ಗೆಯೂ ಸ್ವಲ್ಪ ತೋರಿ ಸ್ವಾಮಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Daily GK Quiz: ಕೇವಲ 2 ಕಂಬಗಳ ಮೇಲೆ ನಿಂತಿರುವ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News