ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ: ಬಿಜೆಪಿ ಟೀಕೆ

'ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಬೆಲೆಯೇ ಇಲ್ಲ. ಇವರಿಗೆ ಮಹಿಳೆಯರು ನೆನಪಾಗುವುದು, ಚುನಾವಣೆಯ ಸಂದರ್ಭದಲ್ಲಿ ಅಥವಾ ಪ್ರತಿಭಟನೆ ಮಾಡುವಾಗ ಮಾತ್ರ'

Written by - Zee Kannada News Desk | Last Updated : May 25, 2022, 04:57 PM IST
  • ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್‌ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ
  • ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಮಹಿಳಾ ಕಾರ್ಯಕರ್ತರ ಪಾಡೇನು..?
  • ಮಹಿಳಾ ಸಬಲೀಕರಣ ಬರೇ ಬೂಟಾಟಿಕೆಯೇ? ಎಂದು ಬಿಜೆಪಿ ಪ್ರಶ್ನೆ
ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ: ಬಿಜೆಪಿ ಟೀಕೆ  title=
'ಮಹಿಳಾ ಸಬಲೀಕರಣ ಬರೇ ಬೂಟಾಟಿಕೆಯೇ?'

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವವೆಂದು ಬಿಜೆಪಿ ಟೀಕಿಸಿದೆ. #CONgressAgainstWomenEmpowerment ಹ್ಯಾಶ್ ಟ್ಯಾಗ್ ಬಳಸಿ ಗುರುವಾರ ಬಿಜೆಪಿ ಸರಣಿ ಟ್ವೀಟ್‍ಗಳನ್ನು ಮಾಡಿದೆ.

‘ಉತ್ತರಪ್ರದೇಶದಲ್ಲಿ ‘ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ’ ಎಂದಾದರೆ, ಕರ್ನಾಟಕದಲ್ಲಿ ‘ನಾ ನಾಯಕಿ’ ಎನ್ನುವಂತಾಗಿದೆ. ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನೂ ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೇ ಭಾಷಣಕ್ಕೆ ಸೀಮಿತವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: Karnataka Textbook Revision: ಪಠ್ಯದಿಂದ ತನ್ನ ಕಥೆ ಕೈಬಿಡಿ ಎಂದು ಸರ್ಕಾರಕ್ಕೆ ದೇವನೂರು ಪತ್ರ

‘ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು?’ ಎಂದು ಬಿಜೆಪಿ ಕುಟುಕಿದೆ.

‘ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್ ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿಮಾತಿನ ಘೋಷಣೆಯಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿಮಳಲಿ ಮಸೀದಿ ಜಾಗದಲ್ಲಿ ಶಿವ ಸಾನಿಧ್ಯ ಗೋಚರ!

‘ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಬೆಲೆಯೇ ಇಲ್ಲ. ಇವರಿಗೆ ಮಹಿಳೆಯರು ನೆನಪಾಗುವುದು, ಚುನಾವಣೆಯ ಸಂದರ್ಭದಲ್ಲಿ ಅಥವಾ ಪ್ರತಿಭಟನೆ ಮಾಡುವಾಗ ಮಾತ್ರ. ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್‌ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೇ ಬೂಟಾಟಿಕೆಯೇ?’ ಎಂದು ಬಿಜೆಪಿ ಕಿಡಿಕಾರಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಕ್ಕೆ  ಮಹಿಳಾ ಸಬಲೀಕರಣ ಅಂದರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ. ಡಿಕೆಶಿಯವರೇ ಲಕ್ಷ್ಮೀ ಜಪ ಮಾಡುವುದೇ ಮಹಿಳಾ ಸಬಲೀಕರಣವೇ? ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹೊಂದಿರುವ  ಮಹಿಳಾ ನಾಯಕಿಯೇ ‘ಕೈ’ ಪಕ್ಷದ ಮಹಿಳಾ ವಿರೋಧಿ ನೀತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದರೆ, ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾನ್ಯ ಮಹಿಳಾ ಕಾರ್ಯಕರ್ತರ ಪಾಡೇನು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News