Karnataka MLC Election: ‘ಕೈ’ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಡಿಕೆಶಿ ಸಂಬಂಧಿ, ಹೆಬ್ಬಾಳ್ಕರ್ ತಮ್ಮನಿಗೆ ಟಿಕೆಟ್!

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ (ನವೆಂಬರ್ 23) ಕೊನೆಯ ದಿನವಾಗಿದ್ದು, ನ.14ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

Written by - Zee Kannada News Desk | Last Updated : Nov 23, 2021, 11:45 AM IST
  • ರಾಜ್ಯದ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ವಿಧಾನಪರಿಷತ್ ಚುಣಾವಣೆ ನಡೆಯಲಿದೆ
  • ಬಿಜೆಪಿ ಬಳಿಕ ಕಾಂಗ್ರೆಸ್ ಕೂಡ ತನ್ನ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ
  • ಡಿ.ಕೆ.ಶಿವಕುಮಾರ್ ಸಂಬಂಧಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಗೆ ‘ಕೈ’ ಟಿಕೆಟ್ ಸಿಕ್ಕಿದೆ
Karnataka MLC Election: ‘ಕೈ’ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಡಿಕೆಶಿ ಸಂಬಂಧಿ, ಹೆಬ್ಬಾಳ್ಕರ್ ತಮ್ಮನಿಗೆ ಟಿಕೆಟ್! title=
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ

ಬೆಂಗಳೂರು: ರಾಜ್ಯದ ಒಟ್ಟು 25 ಕ್ಷೇತ್ರಗಳಿಗೆ ಡಿ.10 ರಂದು ವಿಧಾನಪರಿಷತ್​ ಚುನಾವಣೆ(Karnataka MLC Election 2021) ನಡೆಯಲಿದೆ. ಕಳೆದ ಶುಕ್ರವಾರ ಬಿಜೆಪಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.   

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)​ ಸಂಬಂಧಿ ಎಸ್​.ರವಿ ಹಾಗೂ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಬಸವರಾಜ ಹಟ್ಟಿಹೊಳಿ ಸೇರಿ 20 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ(Sonia Gandhi) ಅನುಮೋದಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪಟ್ಟಿಯನ್ನು ಹಂಚಿಕೊಂಡಿದೆ. ಮಾಜಿ ಸಚಿವ ಎ.ಮಂಜು ಪುತ್ರ ಡಾ.ಮಂಥರ್ ಗೌಡರಿಗೂ ಟಿಕೆಟ್ ಸಿಕ್ಕಿದೆ.

ಇದನ್ನೂ ಓದಿ: MP Pratap Simha: ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಅಪಘಾತ!

ಕಾಂಗ್ರೆಸ್ MLC ಅಭ್ಯರ್ಥಿಗಳ ವಿವರ

ಕಲಬುರಗಿ: ಶಿವಾನಂದ ಪಾಟೀಲ್ ಮರ್ತೂರು

ಬೆಳಗಾವಿ: ಚನ್ನರಾಜ ಬಸವರಾಜ ಹಟ್ಟಿಹೊಳಿ

ಉತ್ತರ ಕನ್ನಡ: ಭೀಮಣ್ಣ ನಾಯ್ಕ್​

ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ: ಸಲೀಂ ಅಹಮದ್

ರಾಯಚೂರು: ಶರಣಗೌಡ ಅನ್ನದಾನಗೌಡ ಪಾಟೀಲ್

ಚಿತ್ರದುರ್ಗ: ಬಿ.ಸೋಮಶೇಖರ್

ಶಿವಮೊಗ್ಗ: ಆರ್.ಪ್ರಸನ್ನಕುಮಾರ್​

ದಕ್ಷಿಣ ಕನ್ನಡ: ಮಂಜುನಾಥ ಭಂಡಾರಿ

ಚಿಕ್ಕಮಗಳೂರು: ಎ.ವಿ.ಗಾಯತ್ರಿ ಶಾಂತೇಗೌಡ

ಹಾಸನ: ಎಂ.ಶಂಕರ್

ತುಮಕೂರು: ಆರ್.ರಾಜೇಂದ್ರ

ಮಂಡ್ಯ: ಎಂ.ಜಿ.ಗೂಳಿಗೌಡ  

ಬೆಂಗಳೂರು ಗ್ರಾಮಾಂತರ: ಎಸ್.ರವಿ

ಕೊಡಗು: ಡಾ.ಮಂಥರ್ ಗೌಡ

ವಿಜಯಪುರ-ಬಾಗಲಕೋಟೆ: ಸುನೀಲ್ ಗೌಡ ಪಾಟೀಲ್

ಮೈಸೂರು-ಚಾಮರಾಜನಗರ: ಡಾ.ಡಿ.ತಮ್ಮಯ್ಯ

ಬಳ್ಳಾರಿ: ಕೆ.ಸಿ.ಕೊಂಡಯ್ಯ

ಬೀದರ್: ಭೀಮರಾವ್ ಬಿ.ಪಾಟೀಲ್

ಕೋಲಾರ: ಎಂ.ಎಲ್.ಅನಿಲ್​ಕುಮಾರ್

ಬೆಂಗಳೂರು ನಗರ: ಯೂಸುಫ್ ಷರೀಫ್​

ಇದನ್ನೂ ಓದಿ: Heavy Rain : ರಾಜ್ಯದಲ್ಲಿ ಮಳೆಗೆ 24 ಜನರ ಸಾವು, ತಮಿಳುನಾಡಿನಲ್ಲಿ 'ಆರೆಂಜ್ ಅಲರ್ಟ್' : IMD 

ವಿಧಾನ ಪರಿಷತ್ ಚುನಾವಣೆ(MLC Election)ಗೆ ನಾಮಪತ್ರ ಸಲ್ಲಿಸಲು ಇಂದೇ (ನವೆಂಬರ್ 23) ಕೊನೆಯ ದಿನವಾಗಿದ್ದು, ನ.14ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ.26 ಕೊನೆ ದಿನವಾಗಿರಲಿದೆ. ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಫಲಿತಾಂಶ ಹೊರಬೀಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News