ಜಿಂದಾಲ್ ಭೂ ವಿವಾದ: ಗೃಹ ಸಚಿವರಿಗೆ ಪತ್ರ ಬರೆದ ಹೆಚ್.ಕೆ.ಪಾಟೀಲ್

ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್‌ಡಬ್ಲ್ಯು) ಭೂ ವಿಚಾರ ಕುರಿತು ಕಾಂಗ್ರೆಸ್ ಮುಖಂಡ ಎಚ್‌.ಕೆ ಪಾಟೀಲ್ ಶನಿವಾರದಂದು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಈ ವಿಚಾರವನ್ನು ಕ್ಯಾಬಿನೆಟ್ ಉಪಸಮಿತಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

Last Updated : Jun 29, 2019, 06:05 PM IST
ಜಿಂದಾಲ್ ಭೂ ವಿವಾದ: ಗೃಹ ಸಚಿವರಿಗೆ ಪತ್ರ ಬರೆದ ಹೆಚ್.ಕೆ.ಪಾಟೀಲ್  title=
photo:ANI

ಬೆಂಗಳೂರು: ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್‌ಡಬ್ಲ್ಯು) ಭೂ ವಿಚಾರ ಕುರಿತು ಕಾಂಗ್ರೆಸ್ ಮುಖಂಡ ಎಚ್‌.ಕೆ ಪಾಟೀಲ್ ಶನಿವಾರದಂದು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಈ ವಿಚಾರವನ್ನು ಕ್ಯಾಬಿನೆಟ್ ಉಪಸಮಿತಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ಎಂ.ಬಿ ಪಾಟೀಲ್ ನೇತೃತ್ವದ ಕ್ಯಾಬಿನೆಟ್ ಉಪಸಮಿತಿಯು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವಂತೆ ನೋಡಿಕೊಳ್ಳಬೇಕು, ಮತ್ತು ಅಡ್ವೊಕೇಟ್ ಜನರಲ್ ನೀಡಿದ ಅಭಿಪ್ರಾಯವನ್ನು ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರು ಜೆ.ಎಸ್.ಡಬ್ಲ್ಯೂ ಸ್ಟೀಲ್ ನಿಂದ 20 ಕೋಟಿ ರೂ.ಗಳ ಚೆಕ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು."ನಾನು ವಿಧಾನಸಭೆ ಅಧಿವೇಶನದಲ್ಲಿ ಎಲ್ಲವನ್ನು ಚರ್ಚಿಸುತ್ತೇನೆ. ಜಿಂದಾಲ್ ಸ್ಟೀಲ್ ವರ್ಕ್ಸ್‌ಗೆ ಭೂ ವ್ಯವಹಾರ ಮಾರಾಟಕ್ಕೆ ಬಿಎಸ್ ಯಡಿಯೂರಪ್ಪ ಅವರಿಗೆ 20 ಕೋಟಿ ರೂ. ಚೆಕ್ ಸಿಕ್ಕಿತು. ಈ ವಿಚಾರದಲ್ಲಿ ನನಗೆ ಸತ್ಯ ಗೊತ್ತು ಆ ಕುರಿತಾಗಿ ಮಾತನಾಡುತ್ತೇನೆ" ಎಂದು ಕುಮಾರಸ್ವಾಮಿ ಜೂನ್ 19 ರಂದು ಮಾಧ್ಯಮಗಳಿಗೆ ತಿಳಿಸಿದ್ದರು.

ಬಳ್ಳಾರಿಯಲ್ಲಿ 3,667 ಎಕರೆ ಜಮೀನನ್ನು ಗುತ್ತಿಗೆಗೆ ಜೆಎಸ್‌ಡಬ್ಲ್ಯು ಸ್ಟೀಲ್‌ಗೆ ಪರಿವರ್ತಿಸುವ ಸಚಿವ ಸಂಪುಟದ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಸಮ್ಮಿಶ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರ ಆರೋಪ ಕೇಳಿಬಂದಿದೆ.
 

Trending News