ಬೆಂಗಳೂರು: ಜುಲೈ 5 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ, ಬಜೆಟ್ ನಲ್ಲಿ ರೈತರು ಸಂತೋಷಗೊಳ್ಳುವ ಅಂಶ ಇರಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ.
ಜೂನ್ 21(ಗುರುವಾರ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಕಲಾಕುಲದ ಅಭಿನಂದನೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಜುಲೈ 5ರಂದು ಬಜೆಟ್ ಮಂಡನೆ ಮಾಡಲು ಯೋಜಿಸಲಾಗಿದೆ. ಸಾಲಮನ್ನಾ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರೈತರು ಉಳಿದರೆ ರಾಜ್ಯ ಉಳಿಯುತ್ತದೆ. ಬಜೆಟ್ ನಲ್ಲಿ ರೈತರು ಸಂತೋಷಗೊಳ್ಳುವ ಅಂಶ ಇರಲಿದೆ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕನ್ನಡ ಚಲನಚಿತ್ರರಂಗವು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.#HDKumaraSwamy #CMOfKarnataka #GovernmentOfKarnataka #KarnatakaVarthe pic.twitter.com/YQuRlr8xiO
— CM of Karnataka (@CMofKarnataka) June 21, 2018
ಪ್ರತಿಯೊಬ್ಬ ನಾಗರೀಕನಿಗೂ ಸೂರು ಕಲ್ಪಿಸಬೇಕೆಂಬ ಬಯಕೆ ಇದೆ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ತರುವ ಉದ್ದೇಶವಿದೆ ಎಂದು ಸಿಎಂ ತಿಳಿಸಿದರು.