ದಾವಣಗೆರೆ: ಮೀಸಲಾತಿಗಾಗಿ ವಿವಿಧ ಸಮುದಾಯದ ಸ್ವಾಮಿಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿ ಹಾಗೂ ಸಮುದಾಯದ ಜನರಿಗೆ ಹೊಸ ಭರವಸೆಯನ್ನ ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ದಲ್ಲಿ ಇಂದು ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa), ಮೀಸಲಾತಿಗಾಗಿ ವಿವಿಧ ಸಮುದಾಯದ ಸ್ವಾಮಿಗಳು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಯಾವ ರೀತಿ ಅದನ್ನು ಈಡೇರಿಸಬೇಕು ಎಂಬುದಷ್ಟೆ ಈಗ ಚರ್ಚೆ ಮಾಡಬೇಕಾಗಿದೆ ಎಂದು ಹೇಳಿದರು.
BPL Card: 'ಮನೆಯಲ್ಲಿ ಬೈಕ್, ಟಿ.ವಿ ಇದ್ದರೆ ಬಿಪಿಎಲ್ ಕಾರ್ಡ್ ರದ್ದು'
ವೀರಶೈವ ಲಿಂಗಾಯತ(Veerashaiva Lingayat), ವಾಲ್ಮೀಕಿ ಸೇರಿದಂತೆ ಹೋರಾಟ ನಿರತ ಎಲ್ಲಾ ಸಮಾಜದ ಸ್ವಾಮೀಜಿಗಳ ಬೇಡಿಕೆಯನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಲು ಕ್ರಮ ವಹಿಸಲಾಗುವುರು ಭರವಸೆ ನೀಡಿದರು.
BJP: 'ಈಗಲೂ ಸಿದ್ದರಾಮಯ್ಯನವ್ರೇ ನಮ್ಮ ನಾಯಕರು'
ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಯಾವ ಸ್ವಾಮೀಜಿ(Swamiji)ಯವರಿಗೂ ಆತಂಕ, ಸಂಶಯ ಬೇಡ ಎಂದರು.
Ramesh Jarkiholi: '24 ಗಂಟೆಯಲ್ಲಿ 5 ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೊಡಿಸಬಲ್ಲೆ'
ಎಸ್‌ಟಿ ಬೇಕೆಂದು ಕುರುಬ ಸಮುದಾಯ, 2A ಮೀಸಲಾತಿಗಾಗಿ ಪಂಚಮಸಾಲಿ, ಮೀಸಲಾತಿ ಹೆಚ್ಚಿಸುವಂತೆ ವಾಲ್ಮೀಕಿ ಸಮುದಾಯ(Valmiki Community) ಹೋರಾಟ ಮಾಡುತ್ತಿದ್ದಾರೆ. ಆದ್ರೆ, ಮೀಸಲಾತಿ ಯಾರಿಗೆ ಸಿಗುತ್ತೋ? ಯಾರಿಗಿಲ್ಲೋ ಎನ್ನುವುದು ಕಾದು ನೋಡಬೇಕಿದೆ.
JDS: 'ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.