ಬೆಂಗಳೂರು: ಅಲಮಟ್ಟಿ ನಾರಾಯಣಪುರ ಜಲಾಶಯದಿಂದ 7 ಟಿಎಂಸಿ ನೀರು ಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆಲಂಗಾಣ ಪ್ರದೇಶ ಕಾಂಗ್ರೇಸ್ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ತೆಲಂಗಾಣ ಪ್ರದೇಶ ಕಾಂಗ್ರೇಸ್ ಸಮಿತಿಯ ನಿಯೋಗದ ಜೊತೆ ನಡೆದ ಸಭೆಯಲ್ಲಿ ಸಿಎಂ ಈ ಭರವಸೆ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಸತತ ಏಳು ವರ್ಷಗಳಿಂದ ಬರಗಾಲ ಇರುವುದರಿಂದ ನಮ್ಮಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಈಗಾಗಲೇ 1.8 ಟಿಎಂಸಿ ನೀರನ್ನು ತೆಲಂಗಾಣಕ್ಕೆ ಬಿಡುಗಡೆ ಮಾಡಲಾಗಿದೆ. ಕುಡಿಯುವ ಕಾರಣಕ್ಕೆ 15 ಟಿಎಂಸಿ ಬೇಕು ಎನ್ನುತ್ತಿದ್ದೀರಿ, ಮಾನವೀಯ ದೃಷ್ಟಿಯಿಂದ ಇನ್ನೂ 5 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುವುದು. ಮುಂದೆ ಮಳೆಯಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಬಗ್ಗೆ ಆಲೋಚಿಸುವುದಾಗಿ ಸಿಎಂ ಸಭೆಯಲ್ಲಿ ತಿಳಿಸಿದ್ದಾರೆ.
ರಾಜೋಳಿ ಬಂಡಾ ಕಾಮಗಾರಿ ಕುರಿತು ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದೂ ಸಹ ತೆಲಂಗಾಣ ಕಾಂಗ್ರೆಸ್ ಸಮಿತಿ ನಿಯೋಗಕ್ಕೆ ಭೇಟಿ ವೇಳೆ ಸಿಎಂ ಭರವಸೆ ನೀಡಿದ್ದಾರೆ.