ಸುಪ್ರೀಂಗೆ ಕಾವೇರಿ ಸ್ಕೀಂ ಕರಡು ಸಲ್ಲಿಸಿದ ಕೇಂದ್ರ ಸರ್ಕಾರ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾವೇರಿ ಸ್ಕೀಂ ಕರಡನ್ನು ಸುಪ್ರೀಂ ಕೋರ್ಟ್ಗೆ ಸೋಮವಾರ ಸಲ್ಲಿಸಿದೆ. 

Last Updated : May 14, 2018, 03:08 PM IST
ಸುಪ್ರೀಂಗೆ ಕಾವೇರಿ ಸ್ಕೀಂ ಕರಡು ಸಲ್ಲಿಸಿದ ಕೇಂದ್ರ ಸರ್ಕಾರ title=

ನವದೆಹಲಿ : ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾವೇರಿ ಸ್ಕೀಂ ಕರಡನ್ನು ಸುಪ್ರೀಂ ಕೋರ್ಟ್ಗೆ ಸೋಮವಾರ ಸಲ್ಲಿಸಿದೆ. 

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವೆ ಕಾವೇರಿ ನೀರಿನ ಸುಗಮ ಹಂಚಿಕೆಗೆ ನ್ಯಾಯಾಲಯದ ಪರಿಶೀಲನೆ ಮತ್ತು ಅನುಮೋದನೆಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನೀರು ನಿರ್ವಹಣಾ ಯೋಜನೆಯ ಕರಡು ವರದಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್​ವಿಲ್ಕರ್​ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರಿದ್ದ ಪೀಠಕ್ಕೆ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಯು.ವಿ.ಸಿಂಗ್ ಸಲ್ಲಿಸಿದರು.

ಕೇಂದ್ರ ಸಲ್ಲಿಸಿರುವ ಕಾವೇರಿ ಯೋಜನಾ ಕರಡು ತಮ್ಮ ತೀರ್ಪಿಗೆ ಸರಿಹೊಂದುವಂತೆ ಇದೆಯೇ ಎನ್ನುವುದನ್ನು ಪರಿಶೀಲಿಸಲಾಗುವುದು ಎಂಡು ಸುಪ್ರೀಂ ಕೋರ್ಟ್ ಹೇಳಿದ್ದು,  ಫೆಬ್ರವರಿ 16ರಂದು ನೀಡಿದ್ದ ತೀರ್ಪಿಗೆ ಹೊಂದಿಕೆಯಾಗುವಂತೆ ಈ ಕರಡು ಯೋಜನೆ ಇದೆಯೇ ಎಂದು ಪರಿಶೀಲಿಸುತ್ತೇವೆಯೇ ಹೊರತು ಅದನ್ನು ಸರಿಪಡಿಸಲು ಹೋಗುವುದಿಲ್ಲ. ನಂತರ ಈ ತಿಂಗಳ 16ರಂದು ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

Trending News