ಕಾವೇರಿ ತೀರ್ಪು: ಯಾರು ಏನು ಹೇಳಿದರು?

  

Last Updated : Feb 16, 2018, 02:04 PM IST
ಕಾವೇರಿ ತೀರ್ಪು: ಯಾರು ಏನು ಹೇಳಿದರು? title=

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಪ್ರಕಟಿಸಿತು. ರಾಜ್ಯದಿಂದ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.75 ಟಿಎಂಸಿ ಕಡಿತಗೊಳಿಸಿರುವ ನ್ಯಾಯಾಲಯ ಕರ್ನಾಟಕ ಒಟ್ಟು 284.75 ಟಿಎಂಸಿ ನೀರು ಬಳಸಿಕೊಳ್ಳಬಹುದು ಎಂದು ಆದೇಶಿಸುವ ಮೂಲಕ ರಾಜ್ಯಕ್ಕೆ 14.75 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಅನುಮತಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಪ್ರಕಟಿಸಿದ ಕಾವೇರಿ ತೀರ್ಪಿನ ಬಗ್ಗೆ ಯಾರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.

ಮುಖ್ಯಮಂತ್ರಿ ಸಿದ್ದರಾಮಯ್ಯ- ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂಕೋರ್ಟ್ ರಾಜ್ಯಕ್ಕೆ ಸ್ವಲ್ಪ ಸಿಹಿ ತಂದಿದೆ. ತಮಿಳುನಾಡಿಗೆ ಹರಿಸಬೇಕಿದ್ದ 192 ಟಿಎಂಸಿ ಬದಲಿಗೆ 177.25 ಟಿಎಂಸಿ ನೀರು ಹರಿಸಲು ಸೂಚಿಸಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ - ಕಾವೇರಿ ನೀರು ಹಂಚಿಕೆ ಕುರಿತು ರಾಜ್ಯದ ವಾದವನ್ನು ಭಾಗಶಃ ಒಪ್ಪಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮ್ಮ ರೈತರ ಜಮೀನಿನ ನೀರಾವರಿಗೆ ಮತ್ತು ಕುಡಿಯಲು ಹೆಚ್ಚುವರಿ ನೀರು ದೊರೆತಿರುವುದು ಸ್ವಲ್ಪ ಸಮಾಧಾನ ತಂದಿದೆ. ತೀರ್ಪನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ವಿವರವಾಗಿ ಪ್ರತಿಕ್ರಿಯಿಸುತ್ತೇನೆ. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ - ಕಾವೇರಿ ತೀರ್ಪಿನ ಬಗ್ಗೆ ಕೋರ್ಟಿನ ಪ್ರತಿ ಓದಿದ ನಂತರ ನಾಳೆ ಬೆಳಿಗ್ಗೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ಬ್ರಿಜೇಶ್ ಕಾಳಪ್ಪ- ಕಾವೇರಿ ತೀರ್ಪು ಸಂತಸ ತಂದಿದೆ.

ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ- ಕಾವೇರಿ ನದಿ ನೀರು ಹಂಚಿಕೆ ಕುರಿತ ತೀರ್ಪು ಸಮಾಧಾನ ತಂದಿದೆ.

ಹಿರಿಯ ವಕೀಲ ಬಿ.ವಿ. ಆಚಾರ್ಯ - ಸುಪ್ರೀಂಕೋರ್ಟ್ ನ್ಯಾಯಸಮ್ಮತವಾದ ತೀರ್ಪನ್ನು ನೀಡಿದೆ.

Trending News