ಬೆಂಗಳೂರು : ಸಚಿವ ಈಶ್ವರಪ್ಪ (K.S Eshawarappa) ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್ ಎನ್ ಚನ್ನಬಸಪ್ಪ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ (Case against Eshwarappa). ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ಇಬ್ಬರು ನಾಯಕರ ವಿರುದ್ದ ದೂರು ಸಲ್ಲಿಸಲಾಗಿದೆ.
ಶಿವಮೊಗ್ಗದ ಪೀಸ್ ಸಂಘಟನೆಯ ಕಾರ್ಯಕರ್ತ ರಿಯಾಜ್ ಬಾಷಾ (Riaz Basha) ಎಂಬವರು, ಸಚಿವ ಈಶ್ವರಪ್ಪ (KS Eshwarappa) ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್ ಎನ್ ಚನ್ನಬಸಪ್ಪ ವಿರುದ್ಧ ನಿನ್ನೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹರ್ಷ ಕೊಲೆಯ ಪ್ರಕರಣದ ನಂತರದ ಬೆಳವಣಿಗೆಯನ್ನು ಉಲ್ಲೇಖಿಸಲಾಗಿದೆ (Harsha Murder Case).
ಇದನ್ನೂ ಓದಿ : Milk Price Hike: ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್! ಹೈನುಗಾರಿಕೆ ರೈತರಿಗೆ ಯುಗಾದಿ ಸಿಹಿ ಸುದ್ದಿ ಕೊಟ್ಟ ಬಮುಲ್
ಹರ್ಷ ಕೊಲೆಯ ನಂತರ ಸಚಿವ ಈಶ್ವರಪ್ಪ ಹಾಗೂ ಚನ್ನಬಸಪ್ಪ ಅವರು ನೀಡಿರುವ ಹೇಳಿಕೆ ಕೋಮುದ್ವೇಷ ಕೆರಳಿಸುವಂತಹುದು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಲಾಗಿದೆ ಎಂದು ನೀಡಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ (Case against Eshwarappa). ಹರ್ಷನ ಮೃತದೇಹ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಹಾಗೂ ಪ್ರಚೋದನಾಕಾರಿ ಹೇಳಿಕೆಗಳ ಬಗ್ಗೆ ದೂರಿನಲ್ಲಿ ಗಮನ ಸೆಳೆಯಲಾಗಿದೆ.
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದಿರುವುದನ್ನು ಕೂಡಾ ಈ ದೂರಿನಲ್ಲಿ ಹೇಳಲಾಗಿದೆ. ಜನಪ್ರತಿನಿಧಿಗಳ ವಿರುದ್ಧದ ವಿವಿಧ ಪ್ರಕರಣಗಳ ತೀರ್ಪನ್ನು ಅರ್ಜಿದಾರ ರಿಯಾಜ್ ಬಾಷಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ರಣಾಂಗಣವಾದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣ : ಎರಡು ಗುಂಪುಗಳ ನಡುವೆ ಮಾರಾಮಾರಿ
ಖಾಸಗಿ ದೂರು ದಾಖಲಿಸಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆಯ ಎಸ್ ಎಚ್ ಒ ಗೆ ಸೂಚನೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.