Bullet Train : ಜಪಾನಿನ 24 ಬುಲೆಟ್ ರೈಲು ಖರೀದಿಸಲು ಭಾರತ ನಿರ್ಧಾರ

Bullet Train : ಸಾರಿಗೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಭಾರತ ಸರ್ಕಾರ, ಇದೀಗ ಜಪಾನಿನ 24 ಬುಲೆಟ್ ರೈಲನ್ನು ಖರೀದಿಸಲು ಭಾರತ ಸರ್ಕಾರ ನಿರ್ಧರಿಸಿದೆ . 

Written by - Zee Kannada News Desk | Last Updated : Mar 8, 2024, 09:12 PM IST
  • ಇದೀಗ ಜಪಾನಿನ 24 (ಶಿಂಕನ್‌ಸೆನ್ ರೈಲು)ಬುಲೆಟ್ ರೈಲುಗಳನ್ನು ಖರೀದಿಸಲು ನಿರ್ಧರಿಸಿದೆ ಮತ್ತು ಎರಡು ದೇಶದ ನಾಯಕರು ಈ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ.
  • ಈ ವರ್ಷದ ಆಗಸ್ಟ್ 15 ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ಬಿಡ್ ಮಾಡಬಹುದಾದ ಸಾಧ್ಯತೆಗಳು ಇವೆ.
  • ಬುಲೆಟ್ ರೈಲು ಕಾರಿಡಾರ್ ನಲ್ಲಿ ಎಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಸಹಿತ ಕೇವಲ 2 ಎರಡು ಗಂಟೆಗಳಲ್ಲಿ ಕ್ರಮಿಸಲಿದೆ.
Bullet Train : ಜಪಾನಿನ 24 ಬುಲೆಟ್ ರೈಲು ಖರೀದಿಸಲು ಭಾರತ ನಿರ್ಧಾರ title=

To buy 24 bullet trains from Japan : ಭವಿಷ್ಯದಲ್ಲಿ ಭಾರತದ ರೈಲು ಸಾರಿಗೆ ಮತ್ತಷ್ಟು ವೇಗ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಭಾರತ ಈಗಾಗಲೇ ವಿಶೇಷ ರೀತಿಯ ರೈಲನ್ನು ಪರಿಚಯಿಸಿದ್ದು, ಇದೀಗ ಜಪಾನಿನ 24 (ಶಿಂಕನ್‌ಸೆನ್ ರೈಲು)ಬುಲೆಟ್ ರೈಲುಗಳನ್ನು ಖರೀದಿಸಲು ನಿರ್ಧರಿಸಿದೆ ಮತ್ತು ಎರಡು ದೇಶದ ನಾಯಕರು ಈ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ. 

ಬುಲೆಟ್ ರೈಲು ಖರೀದಿ ಮತ್ತೊಂದೆಡೆ ಮಾರ್ಗ ನಿರ್ಮಾಣದಲ್ಲಿನ ಚುರುಕು ಕೆಲಸ, ಪ್ರಗತಿ ಎಲ್ಲ ನೋಡಿದರೆ ಗುಜರಾತ್‌ನಲ್ಲಿ ಜೂನ್-ಜುಲೈ 2026 ರಲ್ಲಿ ಪ್ರಾರಂಭವಾಗುವ ಮೊದಲ ರೈಲು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್‌ ದೇಶದದಿಂದ ಭಾರತವು 24 ಇ5 ಸರಣಿಯ ಶಿಂಕನ್‌ಸೆನ್ ರೈಲುಗಳನ್ನು (ಬುಲೆಟ್ ರೈಲುಗಳು) ಖರೀದಿಸಲು ನಿರ್ಧರಿಸಿದೆ. ಇಂಥದ್ದೊಂದು ಬೃಹತ್ ವ್ಯವಹಾರಕ್ಕೆ ಒಪ್ಪಂದವನ್ನು ಇದೇ ಮಾರ್ಚ್ ಅಂತ್ಯಕ್ಕೆ ಏರ್ಪಡಲಿದೆ. ಎರಡು ದೇಶಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿ ಆಗಿದೆ. 

ಇದನ್ನು ಓದಿ : ಬೆಳಗ್ಗೆ ಖಾಲಿ ಹೊಟ್ಟೆ ಈ ಡ್ರೈಫ್ರೂಟ್ ಸೇವಿಸಿ, ಹಲವು ಕಾಯಿಲೆಗಳಿಗೆ ರಾಮಬಾಣ!

ಬುಲೆಟ್ ರೈಲು ಖರೀದಿ ಮತ್ತೊಂದೆಡೆ ಮಾರ್ಗ ನಿರ್ಮಾಣದಲ್ಲಿನ ಚುರುಕು ಕೆಲಸ, ಪ್ರಗತಿ ಎಲ್ಲ ನೋಡಿದರೆ ಗುಜರಾತ್‌ನಲ್ಲಿ ಜೂನ್-ಜುಲೈ 2026 ರಲ್ಲಿ ಪ್ರಾರಂಭವಾಗುವ ಮೊದಲ ರೈಲು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 15 ರೊಳಗೆ ಬಿಡ್ ಕರೆಯುವ ಸಾಧ್ಯತೆ

ಬುಲೆಟ್ ರೈಲು ಉಸ್ತುವಾರಿಯಾದ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಈ ವರ್ಷದ ಆಗಸ್ಟ್ 15 ರೊಳಗೆ ರೈಲುಗಳ ಖರೀದಿ ಮತ್ತು ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ಒಪ್ಪಂದಗಳನ್ನು ಬಿಡ್ ಮಾಡಬಹುದಾದ ಸಾಧ್ಯತೆಗಳು ಇವೆ. 

ಬುಲೆಟ್ ರೈಲು ವೇಗ ರೈಲು ಸೇವೆಯಾಗಿದೆ. ಉದಾಹರಣೆಗೆ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಿದರೂ ಸಹಿತ ಇತರ ರೈಲುಗಳಿಗಿಂತಲೂ ಮುಂಚಿತವಾಗಿ ಗಮ್ಯಸ್ಥಳ ತಲುಪಲಿದೆ. ಇದರಿಂದ ಪ್ರಯಾಣಿರಕ ಸಮಯ ಉಳಿತಾಯವಾಗಲಿದೆ.

ಇದನ್ನು ಓದಿ : Shivratri Vrat: ಮಹಾಶಿವರಾತ್ರಿಯ ಉಪವಾಸವನ್ನು ಮುರಿಯುವ ಮೊದಲು ಸರಿಯಾದ ವಿಧಾನ ತಿಳಿದುಕೊಳ್ಳಿ..!

ಉಹಾರಣೆಗೆ, ಅಹಮದಾಬಾದ್ ಮತ್ತು ಮುಂಬೈ ನಡುವಿನ 508 ಕಿಮೀ ದೂರವನ್ನು ಬುಲೆಟ್ ರೈಲು ಕಾರಿಡಾರ್ ನಲ್ಲಿ ಎಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಸಹಿತ ಕೇವಲ 2 ಎರಡು ಗಂಟೆಗಳಲ್ಲಿ ಕ್ರಮಿಸಲಿದೆ. ಬೇರೆ ರೈಲುಗಳು ಇದೇ ದೂರವನ್ನು ಸುಮಾರು 2 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News