ಬಿಎಸ್ ವೈಯೇ ಕರ್ನಾಟಕದ ಮುಖ್ಯಮಂತ್ರಿ: ಸಿಎಂ ಬದಲಾವಣೆಯ ಪ್ರಸ್ತಾಪ ಇಲ್ಲ

ಜೆಡಿಎಸ್ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು ಬಿಎಸ್ ವೈತಾಕೀತು  

Last Updated : Dec 21, 2020, 06:06 PM IST
  • ಸಿಎಂ ಬದಲಾವಣೆ ಇಲ್ಲವೇ ಇಲ್ಲ : ಅರುಣ್ ಸಿಂಗ್
  • ಜೆಡಿಎಸ್ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು ಬಿಎಸ್ ವೈತಾಕೀತು
ಬಿಎಸ್ ವೈಯೇ ಕರ್ನಾಟಕದ ಮುಖ್ಯಮಂತ್ರಿ: ಸಿಎಂ ಬದಲಾವಣೆಯ ಪ್ರಸ್ತಾಪ ಇಲ್ಲ title=

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯ ಪ್ರಸ್ತಾಪ ಇಲ್ಲವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಪಕ್ಷದ ಹಿರಿಯ ನಾಯಕರಾಗಿದ್ದು, ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಪಕ್ಷಕ್ಕೆ ಬಿಎಸ್ ವೈಯಿಂದ ಯಾವುದೇ ಸಮಸ್ಯೆಯಿಲ್ಲ, ಹಾಗಾಗಿ ಸಿಎಂ ಬದಲಾವಣೆಯ ಪ್ರಶ್ನೆಯೂ ಉದ್ಬವಿಸುವದಿಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ. 

ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ವಿಷಯಾಧಾರಿತವಾಗಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಬಹುದು ಎಂಬ ಕುಮಾರಸ್ವಾಮಿ (H.D. Kumaraswamy) ಹೇಳಿಕೆ ಹಿನ್ನೆಲೆಯಲ್ಲಿ ಮಾತನಾಡಿದ ಅರುಣ್ ಸಿಂಗ್, ಬಿಜೆಪಿ ಜೆಡಿಎಸ್ ಎರಡೂ ಪ್ರತ್ಯೇಕ ಪಕ್ಷಗಳು. ಬಿಜೆಪಿ ತನ್ನ ಅಜೆಂಡಾದಂತೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. 

ನಾಳೆ ಗ್ರಾ.ಪಂ. ಮೊದಲ ಹಂತದ ಮತದಾನ: ಎಲ್ಲೆಲ್ಲಿ ಚುನಾವಣೆ ನಡೆಯುತ್ತೆ?

ಪಕ್ಷ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು: ಮತ್ತೊಂದೆಡೆ, ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಜೆಡಿಎಸ್ ಬಿಜೆಪಿ ವಿಲೀನ ಆಗುತ್ತದೆ ಎಂಬ ಹೇಳಿಕೆಗಳು ದೇವೆಗೌಡರು  (Devegowda)ಮತ್ತು ಕುಮಾರಸ್ವಾಮಿಗೆ ಅವಮಾನ‌ ಮಾಡಿದಂತೆ ಎಂದು ಹೇಳಿದ್ದಾರೆ. ವಿಲೀನದ ಬಗ್ಗೆ ಹೇಳಿಕೆ ಕೊಡೋದು ಯಾರಿಗೂ ಶೋಭೆ ತರೋದಿಲ್ಲ. ನಮ್ಮ ಪಕ್ಷದ ಯಾವ ನಾಯಕರೂ ಈ ಬಗ್ಗೆ ಮಾತನಾಡಬಾರದು ಎಂದು ಅವರು ತಾಕೀತು ಮಾಡಿದ್ದಾರೆ.  

High Court: ಬಿಎಸ್ ವೈ ಸರ್ಕಾರಕ್ಕೆ ಶಾಕ್​ ಕೊಟ್ಟ ಹೈಕೋರ್ಟ್..!
ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ನಾವು ನಮ್ಮ ಪಕ್ಷ‌ ಕಟ್ಟುತ್ತೇವೆ. ಅವರು ಅವರ ಪಕ್ಷ ಕಟ್ಟುತ್ತಾರೆ ಎಂದಿದ್ದಾರೆ. ವಿಧಾನ ಪರಿಷತ್ ನಲ್ಲಿ ಸಭಾಪತಿ ಇಳಿಸುವುದಕ್ಕೆ ಜೆಡಿಎಸ್ ಸಹಕಾರ ಕೇಳಿದ್ದೆವು. ಇದಕ್ಕೆ ಜೆಡಿಎಸ್ ಸಹಕಾರ ಕೊಟ್ಟಿದೆ. ಅದೇ ರೀತಿ ಮುಂದೆಯೂ ಅಗತ್ಯ ಇದ್ದಾಗ ಜೆಡಿಎಸ್ ನಮಗೆ ಸಹಕಾರ ಕೊಡಬಹುದು ಎಂದು ಬಿಎಸ್ ವೈ ಹೇಳಿದ್ದಾರೆ. 

ಬಿಜೆಪಿ ಜತೆ ಜೆಡಿಎಸ್ ವಿಲೀನ ಸಾಧ್ಯವೇ ಇಲ್ಲ : ಕುಮಾರಸ್ವಾಮಿ ಸ್ಪಷ್ಟನೆ

Trending News