ಬೆಂಗಳೂರು: ಕೊರೊನಾ ರೂಪಾಂತರಿ 'ಒಮಿಕ್ರಾನ್' ಕಟ್ಟಿಹಾಕಲು ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಹೀಗಾಗಿ ನ್ಯೂ ಇಯರ್ ಪಾರ್ಟಿಗೂ ಬ್ರೇಕ್ (Break for the New Year party) ಬಿದ್ದಿದೆ. ಇದು ಪಾರ್ಟಿ ಪ್ರಿಯರನ್ನು ಕಂಗೆಡಿಸಿದ್ದು, ಅಕ್ಕಪಕ್ಕದ ರಾಜ್ಯಗಳಿಗೆ ತಾತ್ಕಾಲಿಕವಾಗಿ ಗುಳೆ ಹೋಗುತ್ತಿದ್ದಾರೆ.
ಡಿಸೆಂಬರ್ 28 ರಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ (Night Curfew) ಹೇರಲಾಗಿದೆ. ಹೀಗಾಗಿ ನೈಟ್ ಕರ್ಫ್ಯೂ ಅವಧಿಯಲ್ಲಿ ಅಂದರೆ ರಾತ್ರಿ 10 ರಿಂದ 5 ಗಂಟೆ ತನಕ ಜನ ಸಂಚಾರ ನಿಷೇಧಿಸಲಾಗಿದೆ. ಈ ಆದೇಶ ಡಿಸೆಂಬರ್ 31ರ ರಾತ್ರಿಗೂ ಅಡ್ಡಗಾಲು ಹಾಕಿದ್ದು, ಪಾರ್ಟಿ ಪ್ರಿಯರು ಕಿಕ್ ಏರಿಸಿಕೊಳ್ಳಲು ಗೋವಾ, ಪಾಂಡಿಚೆರಿ, ಊಟಿ ಸೇರಿದಂತೆ ವೈಯನಾಡ್ ಮತ್ತಿತರ ಜಾಗಗಳಿಗೆ ಗಂಟುಮೂಟೆ ಕಟ್ಟುತ್ತಿದ್ದಾರೆ.
ನೈಟ್ ಕರ್ಫ್ಯೂ ಜಾರಿ:
ರಾಜ್ಯ ಸರ್ಕಾರ ಒಮಿಕ್ರಾನ್ (Omicron) ಕಟ್ಟಿಹಾಕಲು ನೈಟ್ ಕರ್ಫ್ಯೂ ಜಾರಿಗೆ ತಂದಾಗಿದೆ. ಆದರೆ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಿಂಪಡೆಯಲಿ ಎಂಬ ಒತ್ತಾಯ ಕೇಳಿಬರುತ್ತಿದೆ.
ಸಿಎಂ ಖಡಕ್ ಉತ್ತರ:
ಈ ಬಗ್ಗೆ ಖಡಕ್ ಉತ್ತರ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ನೈಟ್ ಕರ್ಫ್ಯೂ ಆದೇಶ ಪುನರ್ ಪರಿಶೀಲನೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಅಕ್ಕ ಪಕ್ಕದ ರಾಜ್ಯಗಳಲ್ಲಿನ 'ಕೊರೊನಾ' ಪರಿಸ್ಥಿತಿ ನೋಡಿಯೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಹೀಗಾಗಿ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ. ಇದರಿಂದ ಉದ್ಯಮಿಗಳಿಗೆ ನಷ್ಟವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಆದರೂ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ತೀವ್ರ ವಿರೋಧ:
ಒಂದು ಕಡೆ ಸಿಎಂ ನೈಟ್ ಕರ್ಫ್ಯೂ ಆದೇಶ ಹಿಂಪಡೆಲು ಸಾಧ್ಯವೇ ಇಲ್ಲ ಎಂದು ಖಡಕ್ ಉತ್ತರ ನೀಡಿದ್ದರೆ, ಇತ್ತ ರಾಜ್ಯ ಸರ್ಕಾರದ ಆದೇಶಕ್ಕೆ ಹೋಟೆಲ್ ಮಾಲೀಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಭಾರಿ ಅಸಮಾಧಾನ ವ್ಯಕ್ತಪಡಿಸಿವೆ. ಈಗಾಗಲೇ ನಷ್ಟದಲ್ಲಿ ಪರದಾಡುತ್ತಿದ್ದು, ರಾಜ್ಯ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆಯಲಿ ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: "ಹಿಂದೂ ಧರ್ಮ ತೊರೆದವರನ್ನು ಮರು ಮತಾಂತರಗೊಳಿಸುವುದು ಹಿಂದೂಗಳಿಗೆ ಉಳಿದಿರುವ ಏಕೈಕ ಆಯ್ಕೆ" : ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.