'ಶೋಷಿತರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು' : ಗೋವಿಂದ ಕಾರಜೋಳ

ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ ಸಚಿವ ಗೋವಿಂದ್ ಕಾರಜೋಳ ಅವರು ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

Written by - Prashobh Devanahalli | Last Updated : Mar 29, 2022, 07:10 PM IST
  • ಸಿದ್ದರಾಮಯ್ಯ: ಬಸವಣ್ಣ ಹೊರತಾಗಿ ಇನ್ಯಾನು ಹೇಳಿ, ಸುಮ್ಮನೆ ಏನು ಹೇಳೋಕೆ ಹೋಗಬೇಡಿ
  • ಕಾರಜೋಳ: ಬಸವಣ್ಣ ಬಳಿಕ ಅನೇಕ ಬ್ರಾಹ್ಮಣರು ಸಮಾಜ ಸುಧಾರಣೆ ಮಾಡಿದ್ದಾರೆ.
'ಶೋಷಿತರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು' : ಗೋವಿಂದ ಕಾರಜೋಳ  title=

ಬೆಂಗಳೂರು: ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ ಸಚಿವ ಗೋವಿಂದ್ ಕಾರಜೋಳ ಅವರು ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಇದೇ ವೇಳೆ ಕಾರಜೋಳ ಅವರ ಈ ಮಾತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಮಾತುಕತೆ ವಿವರ ಇಲ್ಲಿದೆ...

ಇದನ್ನೂ ಓದಿ: ದೇವಸ್ಥಾನ ಕಟ್ಟಿದವರು ಓಬಿಸಿ, ದಲಿತರು; ಆದರೂ ಮಜಾ ಮಾಡುವವರು ನೀವು..!

ಗೋವಿಂದ ಕಾರಜೋಳ: ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು. 

ಸಿದ್ದರಾಮಯ್ಯ: ಬಸವಣ್ಣ ಹೊರತಾಗಿ ಇನ್ಯಾನು ಹೇಳಿ, ಸುಮ್ಮನೆ ಏನು ಹೇಳೋಕೆ ಹೋಗಬೇಡಿ 

ಕಾರಜೋಳ: ಬಸವಣ್ಣ ಬಳಿಕ ಅನೇಕ ಬ್ರಾಹ್ಮಣರು ಸಮಾಜ ಸುಧಾರಣೆ ಮಾಡಿದ್ದಾರೆ.

ಸಿದ್ದರಾಮಯ್ಯ: ಹಾಗಾದಲ್ಲಿ, ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರುತ್ತಿರಲಿಲ್ಲ , ಕೂತ್ಕೊಳ್ಳಿ 

ಸ್ಪೀಕರ್ ಕಾಗೇರಿ: ನಿಮ್ಮಿಬ್ಬರ ಚರ್ಚೆ ಕೇಳಿದ ಬಳಿಕ ನನಗೂ ಆಸಕ್ತಿ ಬಂದಿದೆ. 

ಸ್ಪೀಕರ್: ಚುನಾವಣಾ ಸುಧಾರಣಾ ವಿಚಾರದ ರೀತಿಯಲ್ಲಿ ಈ ಬಗ್ಗೆಯೂ ಚರ್ಚೆ ಇಟ್ಟುಕೊಳ್ಳೋಣ.

ಸಿದ್ದರಾಮಯ್ಯ; ಅದಕ್ಕೆ ಅಂಬೇಡ್ಕರ್ ಹೇಳಿದ್ದು ಇತಿಹಾಸ ತಿಳಿಯದವನು ಭವಿಷ್ಯ ನಿರ್ಮಾಣ ಮಾಡಲ್ಲ ಎಂದು, ಇತಿಹಾಸ ತಿಳಿದುಕೊಂಡು ಇರಲೇ ಬೇಕಾಗುತ್ತೆ, ಚರ್ಚೆ ಮಾಡೋಣ

ಸ್ಪೀಕರ್: ಮೂರು ಭಾಗದ ಚರ್ಚೆ ಮಾಡೋಣ, ಇತಿಹಾಸದ ಸ್ಪಷ್ಟತೆ,ವರ್ತಮಾನದ ಜವಾಬ್ದಾರಿ, ಭವಿಷ್ಯದ ಹೊಣೆಗಾರಿಕೆ ಬಗ್ಗೆ ಚರ್ಚೆ ಮಾಡೋಣ

     ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು

ಸ್ಪೀಕರ್: ಮೂರು ವಿಚಾರವನ್ನು ಸೇರಿಸಿ ಚರ್ಚೆ ಮಾಡೋಣ, ನಾನೂ ಆಸಕ್ತನಾಗಿದ್ದೇನೆ. ಇತಿಹಾಸ ಹೇಗೆ‌ ತಿರುಚಲ್ಪಟ್ಟಿದೆ ಎಂದು ನೋಡಿದರೆ ಒಂದು ಸಲ ನಾವು ನಾವು ಚರ್ಚೆ ಮಾಡಬೇಕು ಎಂದು ಅನ್ನಿಸುತ್ತೆ. 

ಸಿದ್ದರಾಮಯ್ಯ: ನಿಮ್ಮ ಪ್ರಕಾರ ಇತಿಹಾಸ ತಿರುಚಲಾಗಿದ್ಯಾ? 

ಸ್ಪೀಕರ್: ಅದೆಲ್ಲಾ ಚರ್ಚೆಯಲ್ಲಿ ಬರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News