ಬೆಂಗಳೂರು: ಏನಿಲ್ಲ.. ಏನಿಲ್ಲ ಕರಿಮಣಿ ಮಾಲೀಕ ನೀನಲ್ಲ..! ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ರಾಹುಲ್ಲಾ..! ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ರೀಲ್ಸ್. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಖ್ಯಾತ ನಟಿ ಪ್ರೇಮಾ ಅಭಿನಯದ ʼಉಪೇಂದ್ರʼ ಸಿನಿಮಾದ ಈ ಹಾಡು ಇದೀಗ ರೀಲ್ಸ್ ರೂಪದಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿದೆ. ಈ ಹಾಡಿಗೆ ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಈ ರೀಲ್ಸ್ ಹವಾ ಎಷ್ಟಿದೆ ಅಂದ್ರೆ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಕರ್ನಾಟಕ ಬಜೆಟ್ ವೇಳೆಯೂ ಇದು ಪ್ರಸ್ತಾಪವಾಗಿದೆ.
ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಕರ್ನಾಟಕ ಬಜೆಟ್ ಬಗ್ಗೆ ಕಿಡಿಕಾರಿದ ಬಿಜೆಪಿ ನಾಯಕರು, ಏನಿಲ್ಲ... ಏನಿಲ್ಲ... ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಏನಿಲ್ಲ... ಅಂತಾ ಫ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಇದೀಗ ತಿರುಗೇಟು ನೀಡಿರುವ ಕಾಂಗ್ರೆಸ್, ಏನಿಲ್ಲ... ಏನಿಲ್ಲ... ಅಂತಾ ಕವನವನ್ನೇ ರಚಿಸುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ತಿರುಗೇಟು ನೀಡಿರುವ ಕಾಂಗ್ರೆಸ್ ʼಕರ್ನಾಟಕದ ಯಜಮಾನರು ನೀವಲ್ಲʼ ಅಂತಾ ಕುಟುಕಿದೆ.
ಇದನ್ನೂ ಓದಿ: APMC ಗೋದಾಮಿನಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ
ಏನಿಲ್ಲ ಏನಿಲ್ಲ...
ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,
ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ,
ಅರ್ಥ ವ್ಯವಸ್ಥೆಯ ಬಗ್ಗೆ ತಿಳಿದೇ ಇಲ್ಲ,
ಕನ್ನಡಿಗರ ಮೇಲೆ ಕಾಳಜಿ ಇಲ್ಲ,
ಶಾಂತಿ ಸಹಬಾಳ್ವೆ ಸಹಿಸೋದಿಲ್ಲ,ಏನಿಲ್ಲ ಏನಿಲ್ಲ...
ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ,
ಅವರು ಹೇಳುವುದೆಲ್ಲ ನಿಜವಲ್ಲ,
ನಂಬಿಕೆಗೆ ಅರ್ಹರು ಅವರಲ್ಲ,
ಜನಪರ ಚಿಂತನೆ…— Karnataka Congress (@INCKarnataka) February 16, 2024
ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ʼಏನಿಲ್ಲ... ಏನಿಲ್ಲ.. ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ, ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಹಾಗೂ ಕನ್ನಡಿಗರ ಮೇಲೆ ಕಾಳಜಿ ಇಲ್ಲ, ಕರ್ನಾಟಕದ ಯಜಮಾನರು ನೀವಲ್ಲ ಎಂದು ಅಂತಾ ಕವನ ರಚಿಸಿದೆ.
ಕಾಂಗ್ರೆಸ್ ರಚಿಸಿದ ಕವನದಲ್ಲಿ ಏನಿದೆ..?
ಏನಿಲ್ಲ ಏನಿಲ್ಲ...
ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,
ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ,
ಅರ್ಥ ವ್ಯವಸ್ಥೆಯ ಬಗ್ಗೆ ತಿಳಿದೇ ಇಲ್ಲ,
ಕನ್ನಡಿಗರ ಮೇಲೆ ಕಾಳಜಿ ಇಲ್ಲ,
ಶಾಂತಿ ಸಹಬಾಳ್ವೆ ಸಹಿಸೋದಿಲ್ಲ,
ಏನಿಲ್ಲ ಏನಿಲ್ಲ...
ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ,
ಅವರು ಹೇಳುವುದೆಲ್ಲ ನಿಜವಲ್ಲ,
ನಂಬಿಕೆಗೆ ಅರ್ಹರು ಅವರಲ್ಲ,
ಜನಪರ ಚಿಂತನೆ ಇಲ್ಲವೇ ಇಲ್ಲ,
ಜನರ ಕಷ್ಟವು ಅವರಿಗೆ ಬೇಕಿಲ್ಲ,
ಏನಿಲ್ಲ ಏನಿಲ್ಲ...
ಬಿಜೆಪಿ ಹೃದಯದಲಿ ಏನೂ ಇಲ್ಲ,
ಕರುಣೆ, ಪ್ರೀತಿಯು ತಿಳಿದಿಲ್ಲ.
ಮಾನವೀಯತೆಯಂತೂ ಇಲ್ಲವೇ ಇಲ್ಲ,
ಏನಿಲ್ಲ, ಏನಿಲ್ಲ...
ಕರ್ನಾಟಕದ ಯಜಮಾನರು ನೀವಲ್ಲ!
ಇದನ್ನೂ ಓದಿ: "ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಈಗ ಬಿಜೆಪಿ ವಕ್ತಾರ ಆಗಿಬಿಟ್ಟಿದ್ದಾರೆ"
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.