ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರ ಹೆಡೆಮುರಿ ಕಟ್ಟುತ್ತೇವೆ: ಕಟೀಲ್

ಬಾಂಬ್ ಸ್ಫೋಟದ ಹಿಂದೆ ಅಂತರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು #NIA ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ’ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

Written by - Puttaraj K Alur | Last Updated : Nov 20, 2022, 04:49 PM IST
  • ಮಂಗಳೂರು ಸ್ಫೋಟದ ಹಿಂದೆ ಮತೀಯ ಶಕ್ತಿಗಳಿಂದ ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ
  • ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರ ಹೆಡೆಮುರಿ ಕಟ್ಟುತ್ತೇವೆ
  • ದೇಶದ್ರೋಹಿ ಸಂಘಟನೆಗಳ ಬ್ಯಾನ್ ಬಳಿಕ ವಿಧ್ವಂಸಕ ಕೃತ್ಯವೆಸಗಲು ಕೆಲವರು ಬಾಲ ಬಿಚ್ಚುತ್ತಿದ್ದಾರೆ
ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರ ಹೆಡೆಮುರಿ ಕಟ್ಟುತ್ತೇವೆ: ಕಟೀಲ್  title=
ಮಂಗಳೂರು ಸ್ಫೋಟ ಖಂಡಿಸಿದ ಕಟೀಲ್

ಬೆಂಗಳೂರು: ಮಂಗಳೂರಿನ ಆಟೋರಿಕ್ಷಾದಲ್ಲಿ ನಡೆದ ಸ್ಫೋಟದ ಹಿಂದೆ ಮತೀಯ ಶಕ್ತಿಗಳು ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಮೂಲಭೂತವಾದಿಗಳ ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರಿಗೂ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ : ನಕಲಿ ಆಧಾರ್ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

‘ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು. ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ’ವೆಂದು ಕಟೀಲ್ ಟ್ವೀಟ್ ಮಾಡಿದ್ದಾರೆ.

‘ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಮಂಗಳೂರಿನ ಬಾಂಬ್ ಸ್ಫೋಟದ ತನಿಖೆ ನಡೆಸಲಿದ್ದು, ಇದರ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ನೆರವಾಗಲಿದೆ. ಬಾಂಬ್ ಸ್ಫೋಟದ ಹಿಂದೆ ಅಂತರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು #NIA ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು ಸ್ಪೋಟ ಪ್ರಕರಣದ ಜಾಲವನ್ನು ಸರ್ಕಾರ ಬೇಧಿಸಲಿದೆ : ಸಿಎಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News